Sunday, September 8, 2024

Latest Posts

ಜ.26ರ ನಂತರ ಮನೆಬಾಗಿಲಿಗೆ ಬರಲಿದೆ ರೇಷನ್..!

- Advertisement -

www.karnatakatv.net: ದಾವಣಗೆರೆ: ಮನೆ ಬಾಗಿಲಿಗೆ ರೇಷನ್ ಬರುವುದಕ್ಕೆ ಯೋಜನೆ ರೂಪಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಹೌದು..ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ಸುರಹೊನ್ನೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಮರು ಚಾಲನೆ ನೀಡಿ ಮಾತನಾಡಿದ ಅವರು ‘ಸರ್ಕಾರ ವಿಧಾನಸೌಧದಲ್ಲಿದೆ ಎಂಬುದು ನಮ್ಮ ಭಾವನೆ. ಆದರೆ ನಿಜವಾದ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿದೆ. ಈ ತತ್ವದಡಿ ಇಡೀ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತರಬೇಕು ಎಂಬ ಅಚಲ ನಿರ್ಧಾರ ನಮ್ಮದು ಎಂದರು. ಜನವರಿ 26ರ ನಂತರ ರೇಷನ್ ನಿಮ್ಮ ಮನೆಯ ಬಾಗಿಲಿಗೆ ಬರುವ ಹಾಗೆ ಮಾಡಲಿದ್ದೆವೆ, ಅಭಿವೃದ್ಧಿ ಜನರ ಸುತ್ತ ಆಗಬೇಕು ಹೊರತು ಅಭಿವೃದ್ದಿ ಸುತ್ತ ಜನ ಸುತ್ತಾಡಬಾರದು, ಅಕ್ಕಿ-ಬೇಳೆ ನಿಮ್ಮ ಮನೆಗೆ ತಲುಪಿಸಲು ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದರು.

ಸಾಮಾಜಿಕ ಭದ್ರತೆ ಸೇವೆಗಳು ನಿಮ್ಮ ಮನೆಗೆ ಬರಬೇಕು ಎಂದ ಸಿಎಂ ಬೊಮ್ಮಾಯಿ, ಜನವರಿ 26ರ ನಂತರ ಎಲ್ಲ ಸೇವೆಗಳು ಗ್ರಾಮ ಪಂಚಾಯತಿಯಲ್ಲಿ ಸಿಗಬೇಕು, ಈ ನಿಟ್ಟಿನಲ್ಲಿ ಸರ್ಕಾರ ಸಾಗಿದೆ. ಅಧಿಕಾರ ಹೆಪ್ಪುಗಟ್ಟಿ ವಿಧಾನಸೌಧದಲ್ಲಿ ಕೂರಬಾರದು. ಜೇನು ತುಪ್ಪದ ರೀತಿ ಗ್ರಾಮೀಣ ಭಾಗಕ್ಕೆ ಬರಬೇಕು ಎಂದು ಹೇಳಿದರು. ಇದೇ ಸಮಯದಲ್ಲಿ ಬಿಎಸ್ ವೈ ಅವರನ್ನ ನೆನಪಿಸಿಕೊಂಡು ಅಭಿವೃದ್ಧಿಯಲ್ಲಿ ಬದಲಾವಣೆ ತಂದ ನಾಯಕ ಯಡಿಯೂರಪ್ಪ. ನಮ್ಮ ರಾಜ್ಯದ ಜನರನ್ನು ಶ್ರೀಮಂತಗೊಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss