Sunday, September 8, 2024

Latest Posts

ದಶಕಂಠ ರಾವಣ ರಚಿಸಿದ ಸ್ತೋತ್ರ ….!

- Advertisement -

Devotional story:

ರಾವಣನ ತಾಯಿ ಕೈಕಸಿಯು ,ಅವಳ ವೃದ್ಯಾಪ್ಯದಲ್ಲಿ ತುಂಬಾ ನಿಶಕ್ತಳಗಿರುತ್ತಾಳೆ .ಒಮ್ಮೆ ಶಿವನ ದರ್ಶನ ಪಡೆಯಲು ರಾವಣನ ಬಳಿ ಕೇಳುತ್ತಾಳೆ,ಆದಕಾರಣ ರಾವಣನು ಕೈಲಾಸ ಪರ್ವತವನ್ನು ಲಂಕೆಗೆ ತೆಗೆದುಕೊಂಡು ಬರಬೇಕು ಎಂದು ನಿರ್ಧಾರ ಮಾಡುತ್ತಾನೆ ,ಹಾಗೆಯೆ ದಕ್ಷಿಣ ದಿಕ್ಕಿನ ಕಡೆಯಿಂದ ನಡೆದುಕೊಂಡು ಬಂದು ಕೈಲಾಸ ಪರ್ವತವನ್ನು ಸೇರುತ್ತಾನೆ ,ನಂತರ ಕೈಲಾಸ ಪರ್ವತವನ್ನು ಎತ್ತಲು ಪ್ರಯತ್ನ ಮಾಡಿ ಕೈಲಾಸ ಪರ್ವತವನ್ನು ಎತ್ತಿ ಬಿಡುತ್ತಾನೆ .ನಂತರ ಶಿವನುತನ್ನ ಕೈಯಿಂದ ಪರ್ವತವನ್ನು ತಾಕುತ್ತಾನೆ ,ಆ ಭಾರವನ್ನು ತಾಳಲಾರದೆ ರಾವಣ ಪರ್ವತವನ್ನು ಕೆಳಗಿಳಿಸಿಬಿಡುತ್ತಾನೆ.

ಆದರೂ ಅವನ ಪ್ರಯತ್ನವನ್ನು ಬಿಡದ ರಾವಣ ,ಶಿವನನ್ನು ಒಲಿಸಿಕೊಳ್ಳುವುದಕ್ಕೆ, ಭಕ್ತಿಯಿಂದ ಶಿವನ ಕೀರ್ಥನೆಗಳನ್ನೂ ಹಾಡಲು ಪ್ರಾರಂಭಿಸುತ್ತಾನೆ ,ರಾವಣ ಏನೆ ಮಾಡಿದರು ಶಿವನ ಕೋಪ ತಣ್ಣಗಾಗುವುದಿಲ್ಲ, ಎಲ್ಲರಿಗು ಗೊತ್ತಿರುವ ಹಾಗೆ ಶಿವನು ಭಕ್ತರಿಗೆ ಬೇಗ ಕರುಣೆ ತೋರುತ್ತಾನೆ ,ಎಷ್ಟು ಕೋಪವೋ ಅಷ್ಟೇ ಶಾಂತಮಯಿ ,ಶಿವನ ಕೋಪವನ್ನು ಕಡಿಮೆ ಮಾಡಲು ರಾವಣ ತನ್ನ ಹೊಟ್ಟೆಯಿಂದ ಕರುಳ್ಳನು ಕಿತ್ತು ವೀಣೆಯಾನ್ನಾಗಿ ಮಾಡುತ್ತಾನೆ ಅದನ್ನು “ರುದ್ರ ವೀಣೆ” ಎಂದು ಕರೆಯುತ್ತಾರೆ ,ರಾವಣನ ಭಕ್ತಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ಯಾವ ವರಬೇಕೆಂದು ಕೇಳುತ್ತಾನೆ ,ಶಿವನ ಕೃಪೆಗೆ ಪಾತ್ರನಾದ ರಾವಣನು ಶಿವನಿಂದ ಆತ್ಮಲಿಂಗವನ್ನು ವರವಾಗಿ ಪಡೆದುಕೊಳ್ಳುತ್ತಾನೆ, ಆದರೆ ಆತ್ಮಲಿಂಗವನ್ನು ಯಾವುದೇ ಕಾರಣಕ್ಕೂ ನೆಲದಮೇಲೆ ಇಡಬಾರಾದು ಎಂದು ಹೇಳುತ್ತಾನೆ .ನಂತರ ರಾವಣ ಆತ್ಮಲಿಂಗವನ್ನು ಲಂಕೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಸಾಯಂಕಾಲವಾಗಿತ್ತು. ಆ ಸಮಯದಲ್ಲಿ ರಾವಣ ಅಘ್ರ್ಯವನ್ನು ನೀಡುವ ಸಮಯ, ಅದರ ಸಲುವಾಗಿ ಒಬ್ಬ ಬಾಲಕನ ಕೈಯಲ್ಲಿ ಆತ್ಮಲಿಂಗವನ್ನು ಕೊಟ್ಟು, ಹಿಡಿದುಕೊಳ್ಳಲು ಹೇಳಿದನು. ಬಾಲಕನ ರೂಪದಲ್ಲಿದ್ದ ಗಣೇಶನು, ಆತ್ಮಲಿಂಗವನ್ನು ಭೂಮಿಯ ಮೇಲೆ ಇಟ್ಟನು.ನಂತರ ರಾವಣನು ಎಷ್ಟೇ ಪ್ರಯತ್ನಿಸಿದರೂ ಲಿಂಗವನ್ನು ಭೂಮಿಯಿಂದ ಬಿಡಿಸಲು ಆಗಲಿಲ್ಲ. ಆತ್ಮಲಿಂಗವು ಚೂರು ಚೂರಾಗಿ ರಾವಣನ ಕೈಗೆ ಸಿಕ್ಕಿತು .ಆಗ ಆತ್ಮಲಿಂಗವನ್ನು ಸಿಟ್ಟಿನಿಂದ ಎಸೆದನು ಆ ಲಿಂಗದ ಚೂರುಗಳು ಯಾವ ಸ್ಥಳದಲ್ಲಿ ಬಿದ್ದಿತೋ ಅಲ್ಲೆಲ್ಲಾ ಶಿವನ ದೇವಸ್ಥಾನ ನಿರ್ಮಿಸಲಾಯಿತು.

ಹೀಗೆ ರಾವಣ ತನ್ನ ಆರಾಧ್ಯ ದೈವವಾದ ಶಿವನನ್ನು ಒಲಿಸಿಕೊಳ್ಳಲು ರಚಿಸಿದ ಶಿವ ತಾಂಡವ ಸ್ತೋತ್ರದಲ್ಲಿ ಒಟ್ಟು 15 ಶ್ಲೋಕಗಳಿವೆ ರಾವಣನು ಸ್ತುತಿಸಿದ ಈ ಸ್ತೋತ್ರ ಅತ್ಯಂತ ಪವಿತ್ರವಾಗಿದೆ .ಶಿವ ತಾಂಡವ ಸ್ತೋತ್ರವನ್ನು ನಿತ್ಯ ಪಠಿಸುವುದರಿಂದ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಮಾತು ಸಿದ್ಧಿಯಾಗುತ್ತದೆ,ಮುಖದ ಕಾಂತಿ ಹೆಚ್ಚುತ್ತದೆ ,ಶನಿ, ರಾಹು ಮತ್ತು ಕೇತು ದೋಷಗಳಿಂದ ಮುಕ್ತಿ ಸಿಗುತ್ತದೆ ,ಜಾತಕದಲ್ಲಿನ ಸರ್ಪ ದೋಷ, ಕಾಲ ಸರ್ಪ ದೋಷ ಹಾಗು ಪಿತೃ ದೋಷಗಳಿಂದ ಮುಕ್ತಿ ಸಿಗುತ್ತದೆ ಸಂಪತ್ತು ಮತ್ತು ಆಸ್ತಿಗೆ ಎಂದಿಗೂ ಕೊರತೆ ಉ೦ಟಾಗುವುದಿಲ್ಲ .

ಶಿವನ ಅನೇಕ ನೃತ್ಯ ಪ್ರಕಾರಗಳಲ್ಲಿ ಶಿವ ತಾಂಡವ ಕೂಡ ಒಂದು. ಶಿವನ ನಟರಾಜ ರೂಪದಂತೆ ತಾಂಡವ ರೂಪವು ಪ್ರಸಿದ್ಧಿಯನ್ನು ಹೊಂದಿದೆ. ಶಿವನ ತಾಂಡವ ನೃತ್ಯದಲ್ಲಿ ಬರೋಬ್ಬರಿ 7 ಪ್ರಕಾರಗಳಿವೆ ,ತಾ೦ಡವ ನೃತ್ಯದ ಏಳು ಪ್ರಕಾರಗಳನ್ನು ವಿದ್ವಾ೦ಸರು ಸ೦ಶೋಧಿಸಿದ್ದಾರೆ. ಹಾಗಾದರೆ ಶಿವ ತಾಂಡವ ನೃತ್ಯದ 7 ಪ್ರಕಾರಗಳನ್ನು ತಿಳಿದುಕೊಳ್ಳೋಣ.

1.ಆನಂದ ತಾಂಡವ
2.ಸಂಧ್ಯಾ ತಾಂಡವ ಅಥವಾ ಪ್ರದೋಷ ನೃತ್ಯ
3.ಕಾಳಿಕಾ ತಾಂಡವ
4.ತ್ರಿಪುರ ತಾಂಡವ
5.ಗೌರಿ ತಾಂಡವ
6.ರುದ್ರ ತಾಂಡವ
7.ಉಮಾ ತಾಂಡವ
8.ತಾಂಡವ ತಾಳ
ನಾಟ್ಯ ಪ್ರಿಯ ಶಿವನಿಗೆ ಅತ್ಯಂತ ಸಂತೋಷ ಮತ್ತು ದುಃಖವಾದಾಗ ತನ್ನ ಭಾವನೆಯನ್ನು ನೃತ್ಯದ ಮೂಲಕ ವಿವರಿಸುತ್ತಾನೆ. ಶಿವನೇ ಜಗತ್ತಿಗೆ ನೃತ್ಯವನ್ನು ಪರಿಚಯಿಸಿದ ಎಂದು ಹೇಳಬಹುದು .

ಋಷಿ ಪತ್ನಿಯಾದ ಶ್ರೀರಾಮನ ಸೋದರಿ :

ಶ್ರೀ ಕೃಷ್ಣನ ಮಗ ಸಾಂಬನ ಬಗ್ಗೆ ನಿಮಗೆಷ್ಟು ಗೊತ್ತು ?

ಸಾವಿರ ವರ್ಷ ಮೊಸಳೆಯ ಜೊತೆ ಗಜೇ೦ದ್ರನ ಕಾದಾಟ…!

 

- Advertisement -

Latest Posts

Don't Miss