Thursday, July 31, 2025

Latest Posts

ಡೆಮೊನ್ ರೂಪದಲ್ಲಿ ಬಡ ಮಕ್ಕಳ ಚಿಕಿತ್ಸೆಗೆ ಸಹಾಯಕನಾಗಿ ಬಂದ ರವಿ ಕಟಪಾಡಿ

- Advertisement -

Udupi news:

ಅನಾರೋಗ್ಯ ಹೊಂದಿದ ಬಡ ಮಕ್ಕಳ ಚಿಕಿತ್ಸೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಉಡುಪಿಯ ರವಿ ಕಟ್ಟಪ್ಪಾಡಿ ಈ ಭಾರಿ ಮತ್ತೆ ವಿಶಿಷ್ಠವಾದ ವೇಷದೊಂದಿಗೆ ಬಡಮಕ್ಕಳ ಆರೋಗ್ಯದ ಚಿಕಿತ್ಸೆ ಗಾಗಿ ಜನರ ಮುಂದೆ ಬಂದಿದ್ದಾರೆ.

7 ವರ್ಷದ ಅವಧಿಯಲ್ಲಿ ಪ್ರತಿ ಕೃಷ್ಣಾಷ್ಟಮಿಯ ಸಂಧರ್ಭದಲ್ಲಿ ವಿವಿಧ ವೇಷ ಧರಿಸಿ ಸುತ್ತಾಡಿ ಜನ ನೀಡುವ ಹಣವನ್ನು ಬಡ ಮಕ್ಕಳ ಚಿಕಿತ್ಸೆಗಾಗಿ ನೀಡಿರುವ ರವಿ, ಈ ಬಾರಿಯೂ ಡೆಮೊನ್ ವೇಷದೊಂದಿಗೆ ಉಡುಪಿಯ ಬೀದಿ ಬೀದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. 3ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಹಾಗು 4 ಇತರ ಖಾಯಿಲೆಯ ಮಕ್ಕಳಿಗೆ  ಸಹಾಯ ಮಾಡುವ ಉದ್ದೇಶವನ್ನಿಟ್ಟುಕೊಂಡು ಈ ಬಾರಿ ಡೆಮೊನ್ ವೇಷಧಾರಿಯಾಗಿ ಮುಂದೆ ಬಂದಿದ್ದಾರೆ.

ಭಯಾನಕ ವಾದ ಹಾಲಿವುಡ್ ಡೆಮೊನ್ ವೇಷಕ್ಕಾಗಿ ರವಿ ಫ್ರೆಂಡ್ಸ್ ಕಟಪಾಡಿ ತಂಡ ಹಾಗೂ ಮಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧ ಭಾಗದ ಹದಿನೈದು ಅಧಿಕ ಕಲಾವಿದರು ಎರಡು ತಿಂಗಳಿನಿಂದ ಶ್ರಮ ಹಾಕಿ ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಡೆಮೊನ್ ವೇಷವನ್ನು ನಿರ್ಮಾಣ ಮಾಡಿದ್ದಾರೆ. ಈ ವೇಷದ ಹಲವು ಬಿಡಿಭಾಗಗಳನ್ನು ಯುಎಸ್ಎ ಯಿಂದ ತರಿಸಲಾಗಿದೆ.

ಪ್ಲಾಸ್ಟಿಕ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಬಳಸಿ ತೊಟ್ಟು ಕಳಚಿಡಬಹುದಾದ ವಿನ್ಯಾಸದ ಕಾಸ್ಟ್ಯೂಮ್ ಇದಾಗಿದ್ದು, ಈ ವೇಷಕ್ಕೆ ತಗುಲಿದ ವೆಚ್ಚವನ್ನು ರವಿ ಫ್ರೆಂಡ್ಸ್ ಕಟಪಾಡಿ ತಂಡದ ಸದಸ್ಯರೇ ಭರಿಸಿದ್ದಾರೆ.

ತನ್ನ ಈ ವಿಶಿಷ್ಟ ಸೇವೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರವಿ ಕಟಪಾಡಿ, ” ರವಿ ಫ್ರೆಂಡ್ಸ್ ಕಟಪಾಡಿ ತಂಡದ ಸಾಧನೆಯಿಂದ ಮಕ್ಕಳ ಸೇವೆ ಮಾಡಲು ಸಾಧ್ಯವಾಗಿದೆ. ಎರಡು ದಿನದ ಸಂಗ್ರಹದಲ್ಲಿ ಸಾರ್ವಜನಿಕರು ನಮ್ಮ ಮೇಲೆ ನಂಬಿಕೆಯಿಟ್ಟು ಹಣ ನೀಡುತ್ತಿದ್ದಾರೆ. ಜನರು ಕೊಟ್ಟ ಹಣವನ್ನು ಯಥಾವತ್ತಾಗಿ ಬಡಮಕ್ಕಳಿಗೆ ತಲುಪಿಸಿದ್ದೇವೆ. ನಮ್ಮ ರೀತಿಯೇ ಹಲವು ತಂಡಗಳು ಈ ಕಾರ್ಯವನ್ನು ಮಾಡುತ್ತಿವೆ. ಎಲ್ಲಾ ತಂಡಗಳು ಜನರು ಒಂದು ರೂಪಾಯಿ ಹಣ ನೀಡಿದರೂ ಪ್ರೀತಿಯಿಂದ ಸ್ವೀಕರಿಸಿ, ಅವರ ನಿಸ್ವಾರ್ಥ ಮನಸ್ಸನ್ನು ಗೌರವಿಸಿ ಎಂದು ಸಲಹೆ ನೀಡಿದರು ರವಿ ಕಟಪ್ಪಾಡಿ.

- Advertisement -

Latest Posts

Don't Miss