Tuesday, October 28, 2025

Latest Posts

RBI ಹೊಸ ರೂಲ್ಸ್ – ಚಿನ್ನ, ಬೆಳ್ಳಿಗೆ ಲೋನ್ ಸುಲಭ!

- Advertisement -

ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನ ಮತ್ತು ಬೆಳ್ಳಿ ಅಡಮಾನ ಸಾಲದ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿಗಳು 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಹೊಸ ನಿಯಮಗಳ ಪ್ರಕಾರ, ಸಣ್ಣ ಮೊತ್ತದ ಸಾಲಗಳಿಗೆ LTV ಪ್ರಮಾಣವನ್ನು ಹೆಚ್ಚಿಸಲಾಗಿದೆ.

ಆರ್‌ಬಿಐ ಪ್ರಕಟಿಸಿದ ಮಾಹಿತಿಯ ಪ್ರಕಾರ, 2.5 ಲಕ್ಷ ರೂ. ವರೆಗೆ ಸಾಲ ಪಡೆಯುವವರಿಗೆ LTVಯನ್ನು ಶೇ. 75ರಿಂದ ಶೇ. 85ಕ್ಕೆ ಹೆಚ್ಚಿಸಲಾಗಿದೆ. ಅಂದರೆ, ಗ್ರಾಹಕರು ಚಿನ್ನ ಅಥವಾ ಬೆಳ್ಳಿಯ ಮೌಲ್ಯದ ಶೇ. 85ರ ಮಟ್ಟದವರೆಗೆ ಸಾಲ ಪಡೆಯಬಹುದು. ಉದಾಹರಣೆಗೆ, ನೀವು ₹2 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಅಡವಿಟ್ಟರೆ, ಈಗ ₹1.7 ಲಕ್ಷವರೆಗೆ ಸಾಲ ಪಡೆಯಲು ಅವಕಾಶ ದೊರೆಯುತ್ತದೆ.

LTV ಹಂತವಾರು ಬದಲಾವಣೆಗಳೆಂದರೆ ₹2.5 ಲಕ್ಷವರೆಗೆ ಸಾಲಕ್ಕೆ LTV 85%, ₹2.5 ಲಕ್ಷ – ₹5 ಲಕ್ಷವರೆಗೆ ಸಾಲಕ್ಕೆ LTV 80%, ₹5 ಲಕ್ಷ ಮೇಲ್ಪಟ್ಟ ಸಾಲಕ್ಕೆ 75% LTV. ಉದಾಹರಣೆಗೆ, ನೀವು ₹6 ಲಕ್ಷ ಸಾಲ ಪಡೆಯಬೇಕಾದರೆ, ಕನಿಷ್ಠ ₹8 ಲಕ್ಷ ಮೌಲ್ಯದ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಅಡವಿಡಬೇಕು.

ಇನ್ನು ಚಿನ್ನ ಮತ್ತು ಬೆಳ್ಳಿಯ ಅಡಮಾನ ಮಿತಿಗಳನ್ನ ನೋಡೋದಾದ್ರೆ ಆರ್‌ಬಿಐ ಸ್ಪಷ್ಟಪಡಿಸಿರುವಂತೆ, ಚಿನ್ನದ ಬಿಸ್ಕತ್ ಅಥವಾ ಬೆಳ್ಳಿ ಬಾರ್‌ಗಳನ್ನು ಗಿರವಿಡಲು ಅವಕಾಶವಿಲ್ಲ. ಸಾಲಕ್ಕಾಗಿ ಕೇವಲ ಆಭರಣಗಳು, ಕಾಯಿನ್‌ಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಮಾತ್ರ ಅಡವಿಡಬಹುದು. ಅದರಲ್ಲಿ ಗರಿಷ್ಠ 1 ಕಿಲೋ ಚಿನ್ನಾಭರಣ, ಗೋಲ್ಡ್ ಕಾಯಿನ್ 50 ಗ್ರಾಂ, ಗರಿಷ್ಠ 10 ಕಿಲೋ ಬೆಳ್ಳಿ ಆಭರಣಗಳು, ಬೆಳ್ಳಿ ಕಾಯಿನ್ 500 ಗ್ರಾಂ ಗಳಷ್ಟು ಅಡವಿಡಬಹು.

ಸಾಲವನ್ನು ತೀರಿಸಿದ ದಿನವೇ ಅಡವಿಟ್ಟ ಚಿನ್ನ ಅಥವಾ ಬೆಳ್ಳಿಯನ್ನು ವಾಪಸ್ ನೀಡಬೇಕೆಂಬ ನಿಯಮವನ್ನು ಆರ್‌ಬಿಐ ಅನಿವಾರ್ಯಗೊಳಿಸಿದೆ. ಆ ದಿನ ವಾಪಸ್ ನೀಡದಿದ್ದರೂ, ಏಳು ಕಾರ್ಯದಿನಗಳೊಳಗೆ ವಿತರಣೆಯಾಗಬೇಕು. ವಿಳಂಬವಾದರೆ, ಬ್ಯಾಂಕುಗಳು ದಿನಕ್ಕೆ ₹5,000 ಪರಿಹಾರ ಮೊತ್ತ ನೀಡಬೇಕಾಗಿದೆ.

ಆರ್‌ಬಿಐನ ಈ ಹೊಸ ಮಾರ್ಗಸೂಚಿಗಳು ಗ್ರಾಹಕರ ಹಿತ ಮತ್ತು ಬ್ಯಾಂಕಿಂಗ್ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿವೆ. ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಿಂದಾಗಿ, ಇವು ಪ್ರಮುಖ ಆರ್ಥಿಕ ಆಸ್ತಿಗಳಾಗಿರುವುದರಿಂದ, ಈ ಹೊಸ ನಿಯಮಗಳು ಸಾಮಾನ್ಯ ಜನತೆಗೆ ಹೆಚ್ಚುವರಿ ಲಾಭ ನೀಡಲಿವೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss