www.karnatakatv.net : ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಒಂದಲ್ಲಾ ಒಂದು ವಿಚಾರಕ್ಕೆ ಖ್ಯಾತೆ ತೆಗೆಯುತ್ತಲೇ ಇರುತ್ತೆ. ಮರಾಠಿಗರು ಮತ್ತು ಕನ್ನಡಿಗರ ಮದ್ಯ ಭಾಷಾ ವಿಷ ಬೀಜ ಬಿತ್ತಿ ಗಲಭೆ ಸೃಷ್ಠಿಸಿ ಶಾಂತಿ ಕದಡುವ ಯತ್ನ ನಿರಂತರವಾಗಿ ಮಾಡುತ್ತಲೇ ಇದೆ. ಈಗ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಯಾಗುತ್ತಿದ್ದಂತೆ ಭಾಷಾ ಕಿಡಿಯನ್ನು ಹೊತ್ತಿಸಿದೆ ಎಂಇಎಸ್. ಮತ್ತೆ ಕಿತಾಪತಿ ಶುರುಮಾಡಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಖ್ಯಾತೆ ಪಾಲಿಕೆ ಚುನಾವಣೆ ದಾಖಲೆ. ಮರಾಠಿ ಭಾಷೆಯಲ್ಲಿ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ. ಕನ್ನಡಿಗರ ಕಣ್ಣು ಕೆಂಪಾಗಿಸಿದ ಎಂಇಎಸ್ ನಡೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಮುಖಂಡರು ಭಾಷಾ ವಿವಾದ, ಗಡಿ ವಿವಾದ ಸೇರಿದಂತೆ ಒಂದಲ್ಲಾ ಇಂದು ವಿಚಾರಗಳನ್ನು ಇಟ್ಟುಕೊಂಡು ಪದೇ ಪದೇ ಖ್ಯಾತೆ ತೆಗೆಯುತ್ತಲೇ ಇರುತ್ತೆ. ಅದರಲ್ಲೂ ಚುನಾವಣೆ ಬಂದ್ರೆ ಸಾಕು ಎಂಇಎಸ್ ಮತ್ತು ಶಿವಸೇನೆ ಫುಲ್ ಆಕ್ಟೀವ್ ಆಗುತ್ತೆ. ಈಗ ಬೆಳಗಾವಿ ಸೇರಿದಂತೆ ರಾಜ್ಯದ ಮೂರು ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಗಿದೆ, ಘೋಷಣೆಯಾದ ಬೆನ್ನಲೇ ಎಂಇಎಸ್ ಖ್ಯಾತೆ ತೆಗೆದಿದೆ. ಮಹಾನಗರ ಪಾಲಿಕೆ ಸ್ಪರ್ಧಿಸಲು ಅಭ್ಯರ್ಥಿಗಳು ಸಲ್ಲಿಸುವ ದಾಖಲೇಗಳನ್ನು ಮರಾಠಿ ಭಾಷಯಲ್ಲಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಎಂಇಎಸ್ ಮುಖಂಡರ ಈ ನಡೆ ಕನ್ನಡಿಗರ ಕಣ್ಣು ಕೆಂಪಾಗಿಸಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಕನ್ನಡದಲ್ಲೇ ಎಲ್ಲ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಬೇಕು ಯಾವುದೇ ಕಾರಣಕ್ಕೂ ಎಂಇಎಸ್ ಪುಂಡಾಟಕ್ಕೆ ಜಿಲ್ಲಾಡಳಿತ ಮಣಿಯಬಾರದು ಎಂದು ಒತ್ತಾಯಿಸಿದ್ದಾರೆ. ಇದು ಎಂಇಎಸ್ ಮುಖಂಡರ ರಾಜಕೀಯ ರಣತಂತ್ರ ಭಾಷೆಯನ್ನು ಮುಂದಿಟ್ಟುಕೊಂಡು ಕನ್ನಡಿಗರು ಮತ್ತು ಮರಾಠಿಗರು ಎಂದು ವಿಷಬೀಜ ಬಿತ್ತಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಬೆಳಗಾವಿ ಜನರು ಮಣಿಯುವುದಿಲ್ಲಾ ಎಂದಿದ್ದಾರೆ. ಗಡಿ ವಿವಾದ ಮುಂದಿಟ್ಟುಕೊಂಡು ಪ್ರಚಾರಕ್ಕೆ ಎಂಇಎಸ್ ಮುಂದಾದ್ರೆ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದ್ರೆ. ಕನ್ನಡ ಸಂಘಟನೆಗಳೆ ಅವರಿಗೆ ತಕ್ಕ ಪಾಠ ಕಲಿಸುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ
ಒಟ್ಟಾರೆ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಬೆಳಗಾವಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಎರಡು ರಾಜಕೀಯ ಪಕ್ಷಗಳು ತಮ್ಮ ತಮ್ಮ ಚಿನ್ನೆ ಮೇಲೆ ಸ್ಪರ್ಧಿಸಿ ಗದ್ದುಗೆ ಏರಕು ರಣತಂತ್ರ ಹೆಣೆಯುತ್ತಿದ್ರೆ. ಎಂಇಎಸ್ ಭಾಷೆ,ಗಡಿ ವಿವಾದ ಇಟ್ಟುಕೊಂಡು ಚುನಾವಣೆ ಗೆಲ್ಲುವ ರಣತಂತ್ರ ನಡೆಸಿದೆ. ಕುಂದಾನಗರಿಯ ಜನರು ಯಾರಿಗೆ ಕಲಿಯುತ್ತಾರೆ ಕಾಯ್ದುನೋಡಬೇಕು.
ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ

