Thursday, November 21, 2024

Latest Posts

ಪಿಜ್ಜಾ ಆರ್ಡರ್ ಮಾಡೋಕ್ಕೂ ಮುಂಚೆ ಈ ನ್ಯೂಸ್ ಓದಿಬಿಡಿ..

- Advertisement -

ಇಂದಿನ ಕಾಲದಲ್ಲಿ ಜನ ತಮಗೆ ಬೇಕಾದ ಊಟ, ತಿಂಡಿಯನ್ನ ಮನೆಗೇ ತರಿಸಿಕೊಂಡು ತಿನ್ನೋ ಅರ್ಹತೆಯನ್ನ ಹೊಂದಿದ್ದಾರೆ. ಆನ್‌ಲೈನ್‌ನಲ್ಲೇ ಆರ್ಡರ್ ಕೊಟ್ರೆ ಸಾಕು, ಬೇಕಾದ ತಿಂಡಿ ಕೆಲ ಕ್ಷಣದಲ್ಲೇ ಮನೆಗೆ ಬಂದುಬಿಡತ್ತೆ. ಇನ್ನು ಜನ ಹೆಚ್ಚಾಗಿ ಪಿಜ್ಜಾವನ್ನೇ ಈ ರೀತಿ ಆರ್ಡರ್ ಕೊಡೋದು. ಆದ್ರೆ ಇನ್ಮುಂದೆ ಪಿಜ್ಜಾ ಆರ್ಡರ್ ಕೊಡುವಾಗ ನೀವು ಹುಷಾರಾಗಿರಬೇಕು. ಯಾಕಂದ್ರೆ ಇಲ್ಲೊಬ್ಬ ವೃದ್ಧೆ, ಪಿಜ್ಜಾ ಮತ್ತು ಡ್ರೈಫ್ರೂಟ್ಸ್ ಆರ್ಡರ್ ಕೊಡೊಕ್ಕೆ ಹೋಗಿ, 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ವೃದ್ಧೆ ಪಿಜ್ಜಾ ಆರ್ಡರ್ ಮಾಡಿದ್ದು, ಆನ್‌ಲೈನ್ ಮೂಲಕ ಪಿಜ್ಜಾ ಹಣ ಪಾವತಿಸಲು ಹೋಗಿದ್ದಾರೆ. ಆಗ 9,999 ರೂಪಾಯಿ ಕಳೆದುಕೊಂಡಿದ್ದಾರೆ. ತದನಂತರ ಅದೇ ವೆಬ್‌ಸೈಟ್‌ನಲ್ಲಿ ಡ್ರೈಫ್ರೂಟ್ಸ್ ಖರೀದಿಸಲು ಹೋಗಿ, ಮತ್ತೆ 1,496 ರೂಪಾಯಿ ಕಳೆದುಕೊಂಡಿದ್ದಾರೆ. ಇವೆರಡು ಘಟನೆ ನಡೆದಿದ್ದು, ಕಳೆದ ವರ್ಷ ಜುಲೈ ಮತ್ತು ಅಕ್ಟೋಬರ್‌ನಲ್ಲಿ. ಇನ್ನು ವೃದ್ಧೆಗೆ ಪಿಜ್ಜಾನೂ ಸಿಕ್ಕಿಲ್ಲಾ, ಡ್ರೈ ಫ್ರೂಟ್ಸ್‌ನೂ ಸಿಕ್ಕಿಲ್ಲ.

ಇದರ ಬಗ್ಗೆ ವಿಚಾರಿಸಲು ಗೂಗಲ್‌ನಲ್ಲಿ ಆ ಕಂಪನಿ ನಂಬರ್ ಹುಡುಕಿದ ವೃದ್ಧೆ, ಅವರಿಗೆ ಕಾಲ್ ಮಾಡಿದ್ದಾರೆ. ಕಾಲ್ ಪಿಕ್ ಮಾಡಿದ ವ್ಯಕ್ತಿ, ಕ್ಷಮಿಸಿ, ನಿಮ್ಮ ಹಣವನ್ನು ಈಗಲೇ ಹಿಂದಿರುಗಿಸುತ್ತೇನೆ. ಆದ್ರೆ ನೀವು ಒಂದು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ನಾನು ಹೇಳಿದ ಹಾಗೆ ಮಾಡಬೇಕು ಎಂದಿದ್ದಾನೆ. ಅದಕ್ಕೆ ಸರಿ ಎಂದ ವೃದ್ಧೆ ಆತ ಹೇಳಿದಂತೆ, ಮಾಡಿದ್ದಾಳೆ. ಆಗ ಅವರ ಅಕೌಂಟ್‌ನಿಂದ 11.78 ಲಕ್ಷ ರೂಪಾಯಿ ದೋಚಲಾಗಿದೆ.

ಇನ್ನು ಈ ಬಗ್ಗೆ ಮುಂಬೈ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ 420 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Latest Posts

Don't Miss