ಸೋಶಿಯಲ್ ಮೀಡಿಯಾಾ ಫ್ರೆಂಡ್‌ ಹೇಳುವ ಮಾತು ಕೇಳುವ ಮುನ್ನ ಈ ಸ್ಟೋರಿ ಓದಿ..

Bengaluru News: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಆ ಬಗ್ಗೆ ಸುದ್ದಿಯೂ ಬರುತ್ತಿದೆ. ಆದರೂ ಕೂಡ ಜನ ಎಚ್ಚೆತ್ತುಕೊಳ್ಳುವುದನ್ನು ಮಾತ್ರ ಕಲಿಯುತ್ತಿಲ್ಲ. ಪದೇ ಪದೇ ಮೋಸ ಹೋಗುತ್ತಲೇ ಇದ್ದಾರೆ. ಬೆಂಗಳೂರಿನಲ್ಲೂ ಕೂಡ ಈ ರೀತಿಯ ಘಟನೆ ನಡೆದಿದ್ದು, ಓರ್ವ ಯುವಕ ಇನ್‌ಸ್ಟಾಗ್ರಾಮ್ ಸ್ನೇಹಿತ ಹೇಳಿದನೆಂದು, ಶೇರ್ ಮಾರ್ಕೇಟ್‌ಗೆ ದುಡ್ಡು ಹಾಕಿ, ಕೋಟಿ ಕೋಟಿ ಹಣ ಕಳೆದುಕೊಂಡಿದ್ದಾರೆ.

ಶಿವಾಜಿ ನಗರ ನಿವಾಸಿ ಶಬ್ಬೀರ್ ಎಂಬಾತ, ಖಾಸಗ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈತನಿಗೆ ಕೆಲವು ದಿನಗಳ ಹಿಂದೆ, ಇನ್‌ಸ್ಟಾಗ್ರಾಮ್‌ನಲ್ಲಿ ಓರ್ವ ವ್ಯಕ್ತಿ ಪರಿಚಯವಾಗಿದ್ದು, ಆತ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೇಡಿಂಗ್ ಬಗ್ಗೆ ವಿವರಣೆ ನೀಡುತ್ತಿದ್ದ. ಅದೇ ರೀತಿ, ಶಬ್ಬೀರ್‌ಗೂ ಕೂಡ, ನೀವು ನಾ ಹೇಳಿದಂತೆ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ, ಕೋಟಿ ಕೋಟಿ ಗಳಿಸಬಹುದು ಎಂದು ಹೇಳಿದ್ದ.

ಹಾಗಾಗಿ ಶಬ್ಬೀರ ಆತನ ಮಾತು ಕೇಳಿ, ವಾಟ್ಸಪ್ ಗ್ರೂಪ್‌ ಒಂದಕ್ಕೆ ಸೇರಿದ್ದಾನೆ. ಬಳಿಕ ಆ ಗ್ರೂಪ್‌ನಲ್ಲಿ ಇರುವವರಲ್ಲಿ ಓರ್ವ ಕೆಲವೇ ಕೆಲವು ಸಾವಿರ ಹಾಕಿದ್ದೆ, ಆದರೆ ನನಗೆ ಲಕ್ಷ ಲಕ್ಷ ರಿಟರ್ನ್ಸ್ ಬಂದಿದೆ ಎಂದಿದ್ದಾನೆ. ಆತನ ಮಾತನ್ನು ನಂಬಿದ ಶಬ್ಬೀರ್ ಲಕ್ಷ ಲಕ್ಷ ದುಡ್ಡನ್ನು ಟ್ರೇಡಿಂಗ್‌ಗೆ ಹಾಕಿದ್ದಾನೆ. ಆ ಗ್ರೂಪ್‌ನಲ್ಲಿ ಬರುವ ಫೇಕ್ ಮೆಸೇಜ್‌ಗಳನ್ನು ನೋಡಿ ಶಬ್ಬೀರ್ ಮೋಸ ಹೋಗಿ, 1 ಕೋಟಿಗೂ ಹೆಚ್ಚು ಹಣವನ್ನು ಟ್ರೇಡಿಂಗ್ ಎಂಬ ಹೆಸರಿನಲ್ಲಿ ಆ ಗೆಳೆಯನಿಗೆ ಕೊಟ್ಟಿದ್ದಾನೆ. ಈ ಮೂಲಕ ಶಬ್ಬೀರ ಕೋಟಿ ಕಳೆದುಕೊಂಡಿದ್ದು, ಸದ್ಯ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಎಸ್ಕೇಪ್ ಆಗಿರುವ ಆರೋಪಿಯನ್ನು ಹುಡುಕುವ ಕೆಲಸ ನಡೆದಿದೆ.

About The Author