Thursday, June 13, 2024

Latest Posts

ಎಲೆಕ್ಷನ್ ಗೆ ಅವಳಿನಗರ ರೆಡಿ

- Advertisement -

www.karnatakatv.net :ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಗೆ ಸಕಲ‌ ಸಿದ್ಧತೆ ಮಾಡಲಾಗಿದ್ದು, ಮಾಸ್ಟರಿಂಗ್ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹೇಳಿದರು.

ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲಾ ಆವರಣದಲ್ಲಿ‌ ಮಾಸ್ಟರಿಂಗ್ ಪರಿಶೀಲನೆ ನಡೆಸಿ ಮಾತನಾಡಿ, ಅವಳಿ ನಗರದಾದ್ಯಂತ 842 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಪ್ರತಿಯೊಂದು ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ 8 ಜನರಂತೆ 8 ಸಾವಿರಕ್ಕೂ ಅಧಿಕ‌ ಜನ ಸಿಬ್ಬಂದಿ ನಿಯೋಜನೆ ಮಾಡಿ ಬಿಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದರು.

ಸಂಜೆ 6 ಗಂಟೆಯ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕೊರೊನಾ ಪಾಸಿಟಿವ್ ಇದ್ದವರಿಗೂ ಸಂಜೆ 5 ಗಂಟೆಯಿಂದ  ಅವಕಾಶ ನೀಡಲಾಗಿದೆ. ನಗರದ ಕೆಲವಡೆ ಸೂಕ್ಷ್ಮ ಮತಗಟ್ಟೆ ಗುರುತಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗಿದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪುತ್ರಿ ವಿವಾಹದ ಬಗ್ಗೆ ಪ್ರತಿಕ್ರಿಯೆ ನೀಡಿ, 400 ಜನರು ಮದುವೆಯಲ್ಲಿ ಭಾಗವಹಿಸುವದಾಗಿ ಜಿಲ್ಲಾಡಳಿತದಿಂದ ಅನುಮತು ಪಡೆದಿದ್ದಾರೆ. ಅದು ಉಲ್ಲಂಘನೆ ಮಾಡಿದರೆ ನೋಡುವದಾಗಿ ಹೇಳಿದರು.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss