www.karnatakatv.net: ಬೆಂಗಳೂರು : ರಾಜಕಿಯವಾಗಿ ನಾನು ಯಾರನ್ನು ಭೇಟಿಯಾಗಿರಲ್ಲಿಲ್ಲ,ದೆಹಲಿಯಲ್ಲು ಕೂಡಾ ನಾನು ಯಾರನ್ನು ಭೇಟಿ ಯಾಗಿಲ್ಲ ಹೈಕಮಾಂಡ್ ಸೂಚಿಸಿದಂತೆ ನಾನು ಮುಂದುವರೆಯುತ್ತೇನೆ ಎಂದು ಬಿಎಸ್ ವೈ ಅವರು ಹೇಳಿದ್ದಾರೆ ಆದರೆ.. ಸಮರ್ಥರನ್ನು ಬಿಜೆಪಿ ನಾಯಕರೆ ಆಯ್ಕೆಮಾಡಲಿ.. ಮೀಸಲಾತಿ ನೀಡುತ್ತೆನೆ ಎಂದು ಬಿಎಸ್ ವೈ ಭರವಸೆ ನೀಡಿದ್ದರು ಎಂದು ಮೃತ್ಯುಂಜಯ್ಯ ಶ್ರೀ ಗಳು ಹೇಳಿಕೆಯನ್ನು ನೀಡಿದ್ದಾರೆ.


ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜುಲೈ 26 ರ ಬೆಳಿಗ್ಗೆ 11 ಗಂಟೆಗೆ ರಾಜೀನಾಮೆ ನೀಡಲಿದ್ದಾರೆ. ಈ ಕುರಿತಂತೆ ದೆಹಲಿಯ ಉನ್ನತ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ. ಜುಲೈ 26 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ. ಯಡಿಯೂರಪ್ಪ ಅವರ ಭೇಟಿಗೆ ರಾಜ್ಯಪಾಲರು ಸಮಯ ನೀಡಿದ್ದಾರೆ. ರಾಜೀನಾಮೆ ನೀಡಿದ ನಂತರ ತಮ್ಮ ಸರ್ಕಾರದ ಎರಡು ವರ್ಷಗಳ ಸಾಧನೆಯ ಬಗ್ಗೆ ಯಡಿಯೂರಪ್ಪ ನಾಡಿನ ಜನರಿಗೆ ವಿವರಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.