www.karnatakatv.net : ಹುಬ್ಬಳ್ಳಿ: ಕಳೆದ ವರ್ಷ ಮಳೆರಾಯನ ಅಬ್ಬರಕ್ಕೆ ಜನ ಜೀವನವೇ ಅಸ್ತವ್ಯಸ್ಥಗೊಂಡಿತ್ತು. ಅಲ್ಲದೇ ಪ್ರವಾಹದಿಂದ ಜನರು ತಮ್ಮ ಬದುಕುವ ಆಸೆಯನ್ನು ಕೈ ಬಿಟ್ಟು ಆಕಾಶದತ್ತ ಮುಖ ಮಾಡಿದ್ದರೂ. ಆದರೆ ಈ ಭಾರಿ ಮಾತ್ರ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಾರ್ವಜನಿಕರ ಸೇವೆಗೆ ತಕ್ಷಣವೇ ಮುಂದಾಗಲು ಸಿದ್ಧತೆ ನಡೆಸಿಕೊಂಡಿದೆ. ಹಾಗಿದ್ದರೇ ಏನಿದು ಸಿದ್ಧತೆ ಅಂತೀರಾ ತೋರಸ್ತೀವಿ ನೋಡಿ…
ಉತ್ತರ ಕರ್ನಾಟಕ ಭಾಗದಲ್ಲಿ ಕಣ್ಣೀರು ತರಿಸಿದ್ದ ಪ್ರವಾಹ ಇಲ್ಲಿನ ಜನರ ಬದುಕಿನಲ್ಲಿ ಅಕ್ಷರಶಃ ಸಂಕಷ್ಟವನ್ನುಂಟು ಮಾಡಿತ್ತು. ಸುಮಾರು ಎರಡು ಮೂರು ತಿಂಗಳ ಸುರಿದ ಮಳೆಯಿಂದ ಜನರು ಜೀವನ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಗಿತ್ತು. ಅಲ್ಲದೇ ಪ್ಯಾರಾ ಮಿಲಿಟರಿ, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಿಬ್ಬಂದಿಗಳು ಸಾಕಷ್ಟು ಶ್ರಮವಹಿಸಿ ಜನರ ರಕ್ಷಣೆ ಮಾಡುವಲ್ಲಿ ಶತಾಯು ಗತಾಯು ಹೋರಾಟ ನಡೆಸಿದ್ದರು. ಆದರೆ ಕಳೆದ ವರ್ಷ ಪ್ರವಾಹದ ಬಗ್ಗೆ ಅರಿವಿಲ್ಲದೇ ಯಾವುದೇ ಸಿದ್ಧತೆಗಳಿಲ್ಲದೇ ತರಾತುರಿಯಲ್ಲಿ ಕಾರ್ಯಾಚರಣೆ ನಡೆಸಬೇಕಾಗಿತ್ತು. ಆದರೆ ಈ ಭಾರಿ ಧಾರವಾಡ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು ಈಗಾಗಲೇ ಎಲ್ಲ ರೀತಿಯ ಸಿದ್ಧತೆ ನಡೆಸಿಕೊಳ್ಳುತ್ತಿದೆ.ಕಳೆದ ವರ್ಷ ಮಳೆಯ ಪ್ರಮಾಣ ಹೆಚ್ಚಾಗಿ ಜಲ ಪ್ರವಾಹ ಸಂಭವಿಸಿದ ಬೆನ್ನಲ್ಲೇ ಹುಬ್ಬಳ್ಳಿಯ ಅಮರಗೋಳದಲ್ಲಿರುವ ಅಗ್ನಿಶಾಮಕ ಘಟಕ ಸಾಕಷ್ಟು ಉಪಕರಣಗಳ ಸಮಸ್ಯೆ ಅನುಭವಿಸಿತ್ತು. ಆದರೆ ಈಗ ಜಿಲ್ಲಾಡಳಿತ ಲೈಪ್ ಜಾಕೆಟ್, ರೇನ್ ಕೋಟ್ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿದೆ. ಅಲ್ಲದೇ ಈಗಾಗಲೇ ಹುಬ್ಬಳ್ಳಿ ಉಣಕಲ್ ಕೆರೆಯಲ್ಲಿ ಸತತ ಎರಡು ತಿಂಗಳ ಕಾಲ ಸಿಬ್ಬಂದಿಗೆ ತರಬೇತಿಯನ್ನು ಕೂಡ ನೀಡಿದ್ದು,ಯಾವುದೇ ಸಂದರ್ಭದಲ್ಲಿ ಆದರೂ ಕೂಡ ನಾವು ಕಾರ್ಯಾಚರಣೆಗೆ ಸಿದ್ಧ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ.
ಒಟ್ಟಿನಲ್ಲಿ ಬಿಡದೇ ಸುರಿಯುತ್ತಿರುವ ಮಳೆಯಿಂದ ಯಾವ ಸಂದರ್ಭದಲ್ಲಿ ಆದರೂ ಸಮಸ್ಯೆ ಉಂಟಾಗಬಹುದು ಎಂಬುವಂತ ಹಿನ್ನಲೆಯಲ್ಲಿ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಾರ್ವಜನಿಕರ ಸೇವೆಗೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಿದ್ಧವಾಗಿದೆ.