Wednesday, January 15, 2025

Latest Posts

ರಿಯಲ್ ಮೀ ಹೊಸ ಫೋನ್…! ಬೆಲೆಯಲ್ಲೂ, ಕಲರ್ ನಲ್ಲೂ ಶೈನಿಂಗ್ …!

- Advertisement -

Technology News:

ಭಾರತದಲ್ಲಿ ರಿಯಲ್ ಮಿ ಸಿ33 ಅನಾವರಣಗೊಂಡಿದೆ. ಈ ಫೋನ್ 10,000 ರೂ. ಒಳಗಡೆ ಬಿಡುಗಡೆ ಆಗಿದೆ.  ಬರೋಬ್ಬರಿ 50 ಮೆಗಾಫಿಕ್ಸೆಲ್ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ನೀಡಲಾಗಿದೆ.

ರಿಯಲ್ ಮಿ C33 ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ.  3GB RAM + 32GB ಸ್ಟೋರೇಜ್​ಗೆ 8,999 ರೂ. ನಿಗದಿ ಮಾಡಲಾಗಿದೆ. 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 9,999 ರೂಪಾಯಿ  ಇದೆ. ಈ ಫೋನ್ ಅಕ್ವಾ ಬ್ಲೂ, ಸ್ಯಾಂಡಿ ಗೋಲ್ಡ್ ಮತ್ತು ನೈಟ್ ಸಿಯಾ ಕಲರ್​ನಲ್ಲಿ ಖರೀದಿಗೆ ಸಿಗುತ್ತದೆ. ಸೆಪ್ಟೆಂಬರ್ 12 ರಂದು ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮತ್ತು ರಿಯಲ್ ಮಿ ಅಧಿಕೃತ ವೆಬ್​ಸೈಟ್​ನಲ್ಲಿ ಸೇಲ್ ಕಾಣಲಿದೆ.

ಇದು 6.5 ಇಂಚಿನ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. 400 ನಿಟ್ಸ್ ಬ್ರೈಟ್​ನೆಸ್ ಸಾಮರ್ಥ್ಯ ಪಡೆದುಕೊಂಡಿದೆ. Unisoc T612 ಪ್ರೊಸೆಸರ್ ಅಳವಡಿಸಲಾಗಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನ ರಿಯಲ್ ಮಿ UI S ಬೆಂಬಲವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಈ ಸ್ಮಾರ್ಟ್‌ಫೋನ್​ನಲ್ಲಿ ಡ್ಯುಯೆಲ್ ಕ್ಯಾಮೆರಾ ಸೆಟ್‌ಅಪ್‌ ಇರುವುದು. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ನೀಡಲಾಗಿದೆ. ಜೊತೆಗೆ LED ಫ್ಲ್ಯಾಸ್ ಕೂಡ ಇದೆ. ಎರಡನೇ ಕ್ಯಾಮೆರಾ 0.3 ಮೆಗಾಪಿಕ್ಸೆಲ್. ಇದರಲ್ಲಿರುವ ಮುಖ್ಯ ಕ್ಯಾಮೆರಾ ಹೆಚ್​ಡಿಆರ್ ಮೋಡ್, ಪಾನೊರಮಿಕ್, ಪೋರ್ಟ್​ಟ್ರೈಟ್ ಮೋಡ್, ಟೈಮ್ ಲಾಪ್ಸ್ ಸೇರಿದಂತೆ ಅನೇಕ ಫೀಚರ್​ಗಳಿಂದ ಆವೃತ್ತವಾಗಿದೆ. ಮುಂಭಾಗ ಕೂಡ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ವಿವೋ Y75s 5G ಬಿಡುಗಡೆ ಅದ್ಭುತ ಫೀಚರ್ಸ್..!

ರಾಷ್ಟ್ರೀಯ ಭದ್ರತಾ ಸಮೂಹಕ್ಕೆ ಸೇರ್ಪಡೆಯಾಯಿತು ಡ್ರೋನ್ ಸಮೂಹ..!

ಫೂಟೇಜ್ ಕ್ಯಾಮೆರಾ 2 ಆಪ್ ನಿಮ್ಮ ಪೋಟೋಗೆ ಮೆರುಗು ನೀಡುವುದು…!

- Advertisement -

Latest Posts

Don't Miss