Wednesday, July 2, 2025

Latest Posts

ಪಂಚಭೂತಗಳಲ್ಲಿ ಲೀನವಾದ ರೆಬಲ್ ಸ್ಟಾರ್ ಕೃಷ್ಣಂ ರಾಜು

- Advertisement -

Film News:

ತೆಲುಗು ಚಿತ್ರರಂಗದ ಪ್ರಖ್ಯಾತ ನಟ ‘ರೆಬಲ್ ಸ್ಟಾರ್’ ಕೃಷ್ಣಂರಾಜು(೮೩) ನಿಧನರಾಗಿದ್ದಾರೆ. ಹೈದರಾಬಾದ್‌ನ ಐಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಮುಂಜಾನೆ ೩.೨೫ರ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ. ಸೋಮವಾರ ಹೈದರಾಬಾದ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಚಿಕ್ಕಪ್ಪ, ಟಾಲಿವುಡ್ ರೆಬಲ್ ಸ್ಟಾರ್ ಕೃಷ್ಣಂ ರಾಜು ಸೆಪ್ಟಂಬರ್ ೧೧ಬೆಳಗ್ಗೆ ನಿಧನರಾಗಿದ್ದಾರೆ. ೮೩ ರ‍್ಷದ ನಟ ಕೃಷ್ಣಂ ರಾಜು ಇಂದು  ಮುಂಜಾನೆ ೩.೨೫ಕ್ಕೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕೃಷ್ಣರಾಜು  ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ.  ಕೃಷ್ಣಂರಾಜು  ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಕೃಷ್ಣಂರಾಜು ನಿಧನಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು, ಆಪ್ತರು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಕೃಷ್ಣಂ ರಾಜು ಅವರ ಸಿನಿಮಾರಂಗ ಮಾತ್ರವಲ್ಲದೇ ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಮೊದಲ ನಟ ಇವರಾದ್ದಾರೆ.  ೧೯೪೦ರಲ್ಲಿ  ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲಟೂರು ಗ್ರಾಮದಲ್ಲಿ ಕೃಷ್ಣಂರಾಜು ಜನಿಸಿದರು. ೧೯೬೬ರಲ್ಲಿ ಕೃಷ್ಣಂ ರಾಜು ತೆಲುಗಿನ ಚಿಲಕ ಗೋರಿಂಕ ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶ ಮಾಡಿದರು. ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ  ಜನಪ್ರಿಯ ನಟನಾಗಿ ಗುರುತಿಸಿಕೊಂಡ ಕೃಷ್ಣಂ ರಾಜು ಸುಮಾರು ೧೯೦ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಬಲ್ ಸ್ಟಾರ್ ಎನ್ನುವ ಬಿರುದನ್ನು ಪಡೆದಿದ್ದಾರೆ.  ಕೃಷ್ಣಂ ರಾಜು ಅವರ ಕೊನೆಯ ಸಿನಿಮಾ ರಾಧೆ ಶ್ಯಾಮ್. ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿದ್ದರು.

೧೯೯೦ರ ದಶಕದಲ್ಲಿ ಕೃಷ್ಣಂ ರಾಜು ರಾಜಕೀಯದಲ್ಲಿ ಸಕ್ರಿಯರಾದರು. ಬಿಜೆಪಿಗೆ ಸೇರಿದರು. ರಾಜಕೀಯದಲ್ಲೂ ಯಶಸ್ಸು ಕಂಡರು. ೧೯೯೯ ರಿಂದ ೨೦೦೪ ರವರೆಗೆ ಅಟಲ್ ಬಿಹಾರಿ ವಾಜಪೇಯಿ ರ‍್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ ಅವರು ೨೦೦೯ ರಲ್ಲಿ ಚಿರಂಜೀವಿ ಅವರ ಪ್ರಜಾ ರಾಜ್ಯಮ್ ಪಕ್ಷಕ್ಕೆ ಸೇರಿದರು ಮತ್ತು ರಾಜಮಂಡ್ರಿಯಿಂದ ಲೋಕಸಭೆಗೆ ಸ್ರ‍್ಧಿಸಿ ಸೋತರು. ಪ್ರಸ್ತುತ ಈಗ ಬಿಜೆಪಿ ನಾಯಕರಾಗಿ  ಗುರುತಿಸಿಕೊಂಡಿದ್ದರು.

೫ ದಶಕಗಳ ಕಾಲ ತಮ್ಮ ನಟನಾ ವೃತ್ತಿಜೀವನದಲ್ಲಿ ಸುಮಾರು ೧೯೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ೫ ಫಿಲ್ಮ್‌ಫೇರ್ ಪ್ರಶಸ್ತಿಗಳು, ೩ ರಾಜ್ಯ ನಂದಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.  ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಅಂಬರೀಶ್ ರಂತೆ ಇವರೂ ತಮ್ಮ ನಟನೆ ಅಭಿಮಾನಿಗಳೊಂದಿಗಿನ ಒಡನಾಟ ಹಾಗು ವ್ಯಕ್ತಿತ್ವದಿಂದಲೇ ಹೆಸರುವಾಸಿಯಾಗಿದ್ದರು. ಇಂತಹ  ಧೀಮಂತ ವ್ಯಕ್ತಿತ್ವದ ವ್ಯಕ್ತಿಯ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ  ಮಿಡಿಯಿತು. ಸೋಮವಾರ ಅಂದರೆ  ಸೆಪ್ಟೆಂಬರ್ ೧೨ರಂದು ಅಂತ್ಯಕ್ರಿಯೆ  ನಡೆಯಿತು.

ತಾಯಿಯಾದ ಮೇಲೆ ಪ್ರಣೀತಾ ಹೇಗಿದ್ದಾರೆ ಗೊತ್ತಾ..?! ಮತ್ತೆ ಗುಡ್ ನ್ಯೂಸ್ ನೀಡಿದ ಪ್ರಣೀತಾ…!

ವಿದೇಶಕ್ಕೆ ಹಾರಿದ ದರ್ಶನ್…! ಆದಷ್ಟು ಬೇಗ ತೆರೆ ಮೇಲೆ ಬರುತ್ತ ಡಿ 56 ಚಿತ್ರ..!?

ರೂಪೇಶ್ ಗೆ ಮಂಗಳೂರು ಹುಡುಗಿ ಮೆಸೇಜ್..?! ಶೆಟ್ರಿಗೆ ಶುರುವಾಯ್ತು ಇಮೇಜ್ ಟೆನ್ಶನ್..!

- Advertisement -

Latest Posts

Don't Miss