Wednesday, October 15, 2025

Latest Posts

Recipe: ಆಲೂ ಮಟರ್ ಸುಕ್ಕೆ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಬಟಾಣಿ, ಎರಡು ಆಲೂ, ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತಂಬರಿ ಕಾಳು, 2 ಸ್ಪೂನ್ ಉದ್ದಿನ ಬೇಳೆ, ಅರ್ಧ ಕಪ್ ಬೆಲ್ಲ, ಚಿಟಿಕೆ ಅರಿಷಿನ, ಒಗ್ಗರಣೆಗೆ 2 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಉದ್ದಿನ ಬೆಳೆ, 5ರಿಂದ 6 ಎಸಳು ಕರಿಬೇವು, ಒಂದು ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಆಲೂವನ್ನ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕತ್ತರಿಸಿ ಬಟಾಣಿಯೊಂದಿಗೆ ಸೇರಿಸಿ ಉಪ್ಪು ನೀರಿನಲ್ಲಿ ಹಾಕಿ, ಪಕ್ಕಕ್ಕಿರಿಸಿ. ಈಗ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹುಣಸೆಹಣ್ಣು, ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ ಜಜ್ಜಿ ಹಾಕಿ ಒಮ್ಮೆ ರುಬ್ಬಿ. ಈಗ ಒಂದು ಪ್ಯಾನ್‌ಗೆ ಜೀರಿಗೆ, ಕೊತ್ತಂಬರಿ ಕಾಳು, ಉದ್ದಿನ ಬೇಳೆ ಹಾಕಿ, ಕಂದು ಬಣ್ಣಕ್ಕೆ ತಿರುಗಿ ಘಮ ಬರುವಷ್ಟು ಹುರಿದು, ರುಬ್ಬಿರುವ ಮಿಶ್ರಣಕ್ಕೆ ಸೇರಿಸಿ ಮತ್ತೊಮ್ಮೆ ರುಬ್ಬಿ. ಈಗ ಸುಕ್ಕೆಗೆ ಬೇಕಾಗಿರುವ ಮಸಾಲೆ ರೆಡಿ.

ಈಗ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಹಸಿ ಮೆಣಸು, ಕರಿಬೇವು, ಇಂಗು, ಹಾಕಿ ಹುರಿಯಿರಿ. ಈಗ ಇದಕ್ಕೆ ಉಪ್ಪು ನೀರಿನಲ್ಲಿ ನೆನೆಸಿದ ಬಟಾಣಿ ಮತ್ತು ಆಲೂ ಹಾಕಿ 2 ರಿಂದ 3 ನಿಮಿಷ ಹುರಿಯಿರಿ. ರುಬ್ಬಿದ ಮಸಾಲೆ ಮಿಶ್ರಣದ ಜೊತೆ ಅಗತ್ಯವಿದ್ದಷ್ಟು ನೀರು, ಅರಿಷಿಣ, ಬೆಲ್ಲ, ಉಪ್ಪು ಹಾಕಿ ಮಂದ ಉರಿಯಲ್ಲಿ 15 ನಿಮಿಷ ಬೇಯಿಸಿದರೆ ಆಲೂ ಬಟಾಣಿ ಸುಕ್ಕೆ ರೆಡಿ.

- Advertisement -

Latest Posts

Don't Miss