Recipe: ಸಂಜೆ ಚಹಾ ಕುಡಿಯುವ ಹೊತ್ತಿಗೆ, ಅಥವಾ ಊಟದ ಜೊತೆಗೆ, ಅಥವಾ ಮನೆಯಲ್ಲಿ ಪಾರ್ಟಿ ಇದ್ದಾಗ, ಈಸಿಯಾಗಿ ತಯಾರಿಸಬಹುದಾದ ಸ್ನ್ಯಾಕ್ಸ್ ಅಂದ್ರೆ ಬೇಬಿ ಕಾರ್ನ್ ರವಾ ಫ್ರೈ. ಹಾಗಾದ್ರೆ ಈ ರೆಸಿಪಿಯನ್ನು ತಯಾರಿಸಲು ಏನೇನು ಬೇಕು..? ಇದನ್ನು ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 10ರಿಂದ 15 ಬೇಬಿಕಾರ್ನ್, 2 ಸ್ಪೂನ್ ಕಾರ್ನ್ ಫ್ಲೋರ್, ಅರ್ಧ ಕಪ್ ರವಾ, ಬೇಕಾದಷ್ಟು ಖಾರ, ಗರಂ ಮಸಾಲೆ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಬೇಬಿಕಾರ್ನ್ ಉದ್ದಕ್ಕೆ ಎರಡು ಭಾಗವಾಗಿ ಕತ್ತರಿಸಿ. ಈಗ ಮಿಕ್ಸಿಂಗ್ ಬೌಲ್‌ನಲ್ಲಿ ನೀರು ಮತ್ತು ಕಾರ್ನ್ ಫ್ಲೋರ್ ಮಿಕ್ಸ್ ಮಾಡಿ. ಇದಕ್ಕೆ ಉಪ್ಪು, ಗರಂ ಮಸಾಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಕಟ್ ಮಾಡಿದ ಬೇಬಿಕಾರ್ನ್ ಸೇರಿಸಿ. 10 ನಿಮಿಷ ಬಿಟ್ಟು, ಒಂದೊಂದೇ ಬೇಬಿಕಾರ್ನ್‌ನ್ನು ರವಾದಲ್ಲಿ ಕೋಟ್ ಮಾಡಿ, ಕಾದ ಎಣ್ಣೆಯಲ್ಲಿ ಕರಿದರೆ, ಬೇಬಿಕಾರ್ನ್ ರವಾ ಫ್ರೈ ರೆಡಿ.