Recipe: ಚಪಾತಿಯೊಂದಿಗೆ ಪ್ರತಿ ದಿನ ಅದೇ ಪಲ್ಯ ತಿಂದು ತಿಂದು ಬೋರ್ ಆಗಿದ್ರೆ ಅಂಥವರು ಕಾರ್ನ್- ಕ್ಯಾಪ್ಸಿಕಂ ಕರ್ರಿ ರೆಸಿಪಿ ಟ್ರೈ ಮಾಡಬಹುದು.
ಬೇಕಾಗುವ ಸಾಮಗ್ರಿ: 10ರಿಂದ 15 ಗೋಡಂಬಿ, ನಾಲ್ಕು ಸ್ಪೂನ್ ಎಣ್ಣೆ, ಒಂದು ಕಪ್ ಕಾರ್ನ್, ಒಂದು ಈರುಳ್ಳಿ, ಕ್ಯಾಪ್ಸಿಕಂ, ಎರಡು ಹಸಿಮೆಣಸು, ಒಂದು ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೊಂಚ ಜೀರಿಗೆ, ಅರ್ಧ ಕಪ್ ಟೊಮೆಟ್ಯೋ ಪ್ಯೂರಿ, ಚಿಟಿಕೆ ಅರಿಶಿನ ಪುಡಿ, ಒಂದೊಂದು ಸ್ಪೂನ್ ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ, ಕೊತ್ತೊಂಬರಿ ಸೊಪ್ಪು, ಕಸೂರಿ ಮೇಥಿ, ತುರಿದ ಚೀಸ್, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲ ಗೋಡಂಬಿಯನ್ನು 10 ನಿಮಿಷ ಬಿಸಿ ನೀರಿನಲ್ಲಿ ನೆನೆಸಿಡಿ. ಈಗ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ, ಜೀರಿಗೆ, ಈರುಳ್ಳಿ, ಹಸಿಮೆಣಸು ಹಾಕಿ ಹುರಿದುಕೊಳ್ಳಿ. ಬಳಿಕ ಕ್ಯಾಪ್ಸಿಕಂ, ಬೇಯಿಸಿದ ಕಾರ್ನ್ಸ್ ಸೇರಿಸಿ ಹುರಿಯಿರಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿಕೊಳ್ಳಿ. ಈಗ ಟೊಮೆಟೋ ಪ್ಯೂರಿ ಸೇರಿಸಿ, ಮಿಕ್ಸ್ ಮಾಡಿ, 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ.
ಬಳಿಕ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ನೆನೆಸಿಟ್ಟ ಗೋಡಂಬಿಯ ಪೇಸ್ಟ್ ಮಾಡಿ ಇದಕ್ಕೆ ಸೇರಿಸಿ. ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ, ಮಿಕ್ಸ್ ಮಾಡಿ, ಮತ್ತೆರಡು ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಈಗ ಗ್ಯಾಸ್ ಆಫ್ ಮಾಡಿ, ಇದಕ್ಕೆ ಕೊತ್ತರಿ ಸೊಪ್ಪು, ಕಸೂರಿ ಮೇಥಿ ಸೇರಿಸಿ. ಸರ್ವ್ ಮಾಡುವಾಗ ತುರಿದ ಚೀಸ್ ಸೇರಿಸಬಹುದು.