Wednesday, October 15, 2025

Latest Posts

Recipe: ಜೀರಿಗೆ- ಕಾಳುಮೆಣಸಿನ ರಸಂ ರೆಸಿಪಿ

- Advertisement -

Recipe: ಜ್ವರ, ನೆಗಡಿ, ಕೆಮ್ಮು ಇದ್ದಾಗ, ಅಥವಾ ಬಾಯಿ ರುಚಿ ಇಲ್ಲದಿದ್ದಾಗ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದೆನ್ನಿಸಿದಾಗ, ನೀವು ಈ ರಸಂ ಮಾಡಿ, ಸವಿಯಬಹುದು. ಜೀರಾ- ಪೆಪ್ಪರ್ ರಸಂ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ಸ್ಪೂನ್ ಜೀರಿಗೆ, ಒಂದು ಸ್ಪೂನ್ ಕೊತ್ತೊಂಬರಿ ಕಾಳು, ಕೊಂಚ ಪೆಪ್ಪರ್, ಖಾರ ಹೆಚ್ಚು ಬೇಕಾದ್ದಲ್ಲಿ ಹಸಿ ಮೆಣಸಿನಕಾಯಿ, ಹುಣಸೆಹಣ್ಣು, ಬೆಲ್ಲ, 5 ಎಸಳು ಬೆಳ್ಳುಳ್ಳಿ, ಉಪ್ಪು, ತುಪ್ಪ, ಅರ್ಧ ಕಪ್ ಕಾಯಿ ತುರಿ. ಒಗ್ಗರಣೆಗೆ ತುಪ್ಪ, ಸಾಸಿವೆ, ಕರಿಬೇವು, ಒಣಮೆಣಸು, ಹಿಂಗು, ಉದ್ದಿನ ಬೇಳೆ, ಕಡ್ಲೆ ಬೇಳೆ.

ಮೊದಲು ಕಾಯಿ ತುರಿಗೆ ಹುಣಸೆ ಹಣ್ಣು, ಬೆಲ್ಲ, ಹುರಿದ ಜೀರಿಗೆ, ಪೆಪ್ಪರ್, ಕೊತ್ತೊಂಬರಿ ಕಾಳು, ಉಪ್ಪು ಹಾಾಕಿ ರುಬ್ಬಿಕೊಳ್ಳಿ. ಬಳಿಕ ಪಾತ್ರೆಗೆ ಕೊಂಚ ನೀರು ಮತ್ತು ರುಬ್ಬಿಕೊಂಡ ಮಸಾಲೆ ಬೆರೆಸಿ, ಹಸಿಮೆಣಸು ಹಾಕಿ ಕುದಿಸಿ. ಬಳಿಕ ಒಗ್ಗರಣೆಗೆ ತುಪ್ಪ, ಸಾಸಿವೆ, ಕರಿಬೇವು, ಒಣಮೆಣಸು, ಹಿಂಗು, ಉದ್ದಿನ ಬೇಳೆ, ಕಡ್ಲೆ ಬೇಳೆ, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಕೊಟ್ಟರೆ, ಬಿಸಿ ಬಿಸಿ ರಸಂ ರೆಡಿ.

- Advertisement -

Latest Posts

Don't Miss