Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ ಸೊಪ್ಪು, ಕಾಲು ಕಪ್ ತೊಗರಿ ಬೇಳೆ, ಚಿಕ್ಕ ತುಂಡು ಚಕ್ಕೆ, 2 ಏಲಕ್ಕಿ, 1 ಪಾಲಕ್ ಎಲೆ, ಅರಿಶಿನ, 2 ಸ್ಪೂನ್ ತುಪ್ಪ, 3 ಹಸಿಮೆಣಸು, ಸಣ್ಣ ತುಂಡು ಶುಂಠಿ, ನಾಲ್ಕೈದು ಎಸಳು ಬೆಳ್ಳುಳ್ಳಿ, 2 ಈರುಳ್ಳಿ, 2 ಟೊಮೆಟೋ, 2 ಸ್ಪೂನ್ ಧನಿಯಾ ಪುಡಿ, ರುಚಿಗೆ ತಕ್ಕಷ್ಚು ಉಪ್ಪು. ಒಗ್ಗರಣೆಗಾಗಿ 2 ಸ್ಪೂನ್ ಎಣ್ಣೆ, 1 ಸ್ಪೂನ್ ಖಾರದ ಪುಡಿ, ಹಿಂಗು, 2 ಒಣಮೆಣಸು.
ಮಾಡುವ ವಿಧಾನ: ಪಾಲಕ್‌ನ್ನು ಚೆನ್ನಾಗಿ ತೊಳೆದು, ಬಿಸಿ ನೀರಿಗೆ ಹಾಕಿ ತೆಗಿಯಿರಿ. ಇದರ ಜೊತೆ ಬೇಳೆಯನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ. ಬೇಳೆ ಬೇಯಿಸುವಾಗ, ಏಲಕ್ಕಿ, ಪಲಾವ್ ಎಲೆ ಮತ್ತು ಚಕ್ಕೆ ಮಿಕ್ಸ್ ಮಾಡಿ. ಬಳಿಕ ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ ಅದಕ್ಕೆ ಸಣ್ಣದಾಗಿ ಹೆಚ್ಚಿದ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಮತ್ತು ಟೊಮೆಟೋ ಹಾಕಿ ಹುರಿಯಿರಿ. ಬಳಿಕ ಖಾರದ ಪುಡಿ, ಧನಿಯಾಪುಡಿ, ಅರಿಶಿನ ಹಾಕಿ ಮಿಕ್ಸ್ ಮಾಡಿ, ಕೊಂಚ ನೀರು ಹಾಕಿ ಬೇಯಿಸಿ.
ಬಳಿಕ ಬೇಯಿಸಿದ ಬೇಳೆ, ಪಾಲಕ್ ಸೊಪ್ಪನ್ನು ಇದಕ್ಕೆ ಮಿಕ್ಸ್ ಮಾಡಿ, ಕುದಿಸಿ. ಕೊನೆಗೆ ಒಗ್ಗರಣೆಗಾಗಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಒಣಮೆಣಸು, ಖಾರದ ಪುಡಿ, ಹಿಂಗು ಹಾಕಿ, ಒಗ್ಗರಣೆ ಕೊಡಿ.