ಬೇಕಾಗುವ ಸಾಮಗ್ರಿ: ಪನೀರ್, ನಾಲ್ಕು ಸ್ಪೂನ್ ತುಪ್ಪ, ಎರಡು ಸ್ಪೂನ್ ಎಣ್ಣೆ, ಒಂದು ಕಪ್ ಗಟ್ಟಿ ಮೊಸರು, ಚಿಟಿಕೆ ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಚಾಟ್ ಮಸಾಲೆ, 10 ಗೋಡಂಬಿ, ಕೊತ್ತೊಂಬರಿ ಸೊಪ್ಪು, ಪಾಲಕ್ ಸೊಪ್ಪು, 1 ಈರುಳ್ಳಿ, ಕೊಂಚ ಶುಂಠಿ ಮತ್ತು ಬೆಳ್ಳುಳ್ಳಿ, 2ರಿಂದ 3 ಹಸಿಮೆಣಸು, ಕಾಳುಮೆಣಸು, ಚಕ್ಕೆ, ಲವಂಗ, 2 ಒಣಮೆಣಸು, ಪಲಾವ್ ಎಲೆ, ಕೊಂಚ ಕಸೂರಿ ಮೇಥಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಒಂದು ಕಪ್ ಮೊಸರಿಗೆ ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ, 1 ಸ್ಪೂನ್ ಧನಿಯಾ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆ, ಉಪ್ಪನ್ನು ಸೇರಿಸಿ, ಮಿಕ್ಸ್ ಮಾಡಿ ಬದಿಗಿರಿಯಿಸಿ.
ಬಳಿಕ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ. ಅದಕ್ಕೆ ನಾಲ್ಕು ಸ್ಪೂನ್ ತುಪ್ಪ ಅಥವಾ ಬೆಣ್ಣೆ ಹಾಕಿ, ಪನೀರ್ ಮತ್ತು ಗೋಡಂಬಿ ಫ್ರೈ ಮಾಡಿಕೊಳ್ಳಿ. ಈಗ ಅದೇ ಪ್ಯಾನ್‌ಗೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಈರುಳ್ಳಿ ಹುರಿಯಿರಿ. ಬಳಿಕ ಪಾಲಕ್, ಕೊತ್ತೊಂಬರಿ ಸೊಪ್ಪು ಹಾಕಿ, ಮತ್ತೆ ಹುರಿಯಿರಿ. ಚೆನ್ನಾಗಿ ಹುರಿದ ಬಳಿಕ, ತಣಿಸಿ, ಮಿಕ್ಸಿ ಜಾರ್‌ಗೆ ಹಾಕಿ, ಇದರ ಪೇಸ್ಟ್ ತಯಾರಿಸಿಕೊಳ್ಳಿ.
ಬಳಿಕ ಪ್ಯಾನ್‌ಗೆ ಎಣ್ಣೆ ಹಾಕಿ, ಕಾಳುಮೆಣಸು, ಚಕ್ಕೆ, ಲವಂಗ, ಒಣಮೆಣಸು, ಪಲಾವ್ ಎಲೆ ಹಾಕಿ ಹುರಿಯಿರಿ, ಬಳಿಕ ಪೇಸ್ಟ್ ಮಾಡಿಕೊಂಡ ಮಿಶ್ರಣವನ್ನು ಸೇರಿಸಿ, ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ, 3 ನಿಮಿಷ ಮಂದ ಉರಿಯಲ್ಲಿ ಬೇಯಿಸಿ.
ಬಳಿಕ ಮಸಾಲೆ ಬೆರೆಸಿದ ಮೊಸರನ್ನು ಇದಕ್ಕೆ ಸೇರಿಸಿ. ಮತ್ತೆರಡು ನಿಮಿಷ ಮುಚ್ಚಳ ಮುಚ್ಚಿ ಬಿಸಿ ಮಾಡಿ. ಬಳಿಕ ಕಸೂರಿ ಮೇಥಿ ಮತ್ತು ಹುರಿದಿರುವ ಗೋಡಂಬಿ ಮತ್ತು ಪನೀರ್ ಹಾಕಿ ಮಿಕ್ಸ್ ಮಾಡಿದ್ರೆ ಹೈದರಾಬಾದಿ ಪನೀರ್ ಮಸಾಲೆ ರೆಡಿ. ಖಾರ ಹೆಚ್ಚು ಬೇಕಾಗಿದ್ದಲ್ಲಿ, ಹುರಿದಿರುವ ಹಸಿಮೆಣಸನ್ನು ಸಹ ಸೇರಿಸಬಹುದು.