Thursday, October 16, 2025

Latest Posts

Recipe: ಕೇರಳ ಶೈಲಿ ಚಿತ್ರಾನ್ನ

- Advertisement -

Recipe: ಪ್ರತಿದಿನ ಟಿಫಿನ್ ಬಾಕ್ಸ್‌ಗೆ ಒಂದೇ ರೀತಿಯ ಊಟ ಹಾಕಿ ಕೊಟ್ಟು ನಿಮಗೂ ಬೋರ್ ಬಂದಿರಬಹುದು, ತಿಂದವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಈಸಿಯಾಗಿ, ರುಚಿಯಾಗಿ ಕೇರಳ ಶೈಲಿ ಚಿತ್ರಾನ್ನ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: ಅನ್ನ, ಒಂದು ಕಪ್ ತೆಂಗಿನತುರಿ, 3 ಒಣಮೆಣಸು, ಕೊಂಚ ಬೆಲ್ಲ, ಹುಣಸೆಹಣ್ಣು, ಅರ್ಧ ಸ್ಪೂನ್ ಜೀರಿಗೆ, 4 ಸ್ಪೂನ್ ಎಣ್ಣೆ, ಸಾಸಿವೆ, ಕರಿಬೇವು, ಉದ್ದಿನಬೇಳೆ, ಕಡಲೆಬೇಳೆ, ಶೇಂಗಾ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ಗೆ ತೆಂಗಿನತುರಿ, ಒಣಮೆಣಸು, ಜೀರಿಗೆ, ಬೆಲ್ಲ, ಕರಿಬೇವು, ಹುಣಸೆಹಣ್ಣು, ಉಪ್ಪು ಹಾಕಿ, ನೀರು ಹಾಕದೇ, ರುಬ್ಬಿಕೊಳ್ಳಿ. ಮಸಾಲೆ ಕೊಂಚ ಪುಡಿ ಪುಡಿಯಾಗಿರಲಿ.

ಈಗ ಪ್ಯಾನ್‌ ಬಿಸಿ ಮಾಡಿ, ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಶೇಂಗಾ, ಕೊಬ್ಬರಿ ಮಸಾಲೆ, ಹಾಕಿ ಹುರಿಯಿರಿ. ಅವಶ್ಯಕತೆ ಇದ್ದಲ್ಲಿ, ಈರುಳ್ಳಿ, ಬೆಳ್ಳುಳ್ಳಿ ಹಾಕಿ ಹುರಿಯಬಹುದು. ಬಳಿಕ ಅನ್ನ ಸೇರಿಸಿ, ಮೇಲಿನಿಂದ ಕೊತ್ತೊಂಬರಿ ಸೊಪ್ಪು ಉದುರಿಸಿದರೆ, ಕೇರಳ ಶೈಲಿ ಚಿತ್ರಾನ್ನ ರೆಡಿ.

- Advertisement -

Latest Posts

Don't Miss