Recipe: ಬೇಕಾಗುವ ಸಾಮಗ್ರಿ: ಮಂಗಳೂರು ಸೌತೇಕಾಯಿ, ಕಾಲು ಕಪ್ ತೊಗರಿ ಬೇಳೆ, ಎಣ್ಣೆ, ಬೆಲ್ಲ, ಉಪ್ಪು, ಹುಣಸೇಹಣ್ಣು, ಮೂರು ಹಸಿಮೆಣಸು, ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಇಂಗು, ಕರಿಬೇವು, ಒಣಮೆಣಸು, ಬೆಳ್ಳುಳ್ಳಿ ಎಸಳು.
ಮೊದಲು ಬೇಳೆಯನ್ನು ಚೆನ್ನಾಗಿ ತೊಳೆದು, ಬೇಯಿಸಿಕೊಳ್ಳಿ. ಬಳಿಕ ಇದಕ್ಕೆ ತರಕಾರಿ, ಉಪ್ಪು, ಹುಳಿ, ಬೆಲ್ಲ, ಹಸಿಮೆಣಸು ಹಾಕಿ ಬೇಯಿಸಿ. ಈಗ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು, ಒಣಮೆಣಸು, ಜಜ್ಜಿದ ಬೆಳ್ಳುಳ್ಳಿ ಎಸಳು, ಇಂದು ಸೇರಿಸಿ, ಒಗ್ಗರಣೆ ರೆಡಿ ಮಾಡಿ, ಬೇಳೆ ತರಕಾರಿಗೆ ಸೇರಿಸಿದರೆ, ಮಂಗಳೂರು ಸೌತೇಕಾಯಿ ದಾಲ್ ರೆಡಿ. ಇದನ್ನು ಮಂಗಳೂರು ಶೈಲಿಯ ಬೋಳು ಕೊದ್ಲು ಎಂದು ಕರೆಯುತ್ತಾರೆ.
ಇದೇ ರೀತಿ ನೀವು ಸೊಪ್ಪಿನ ಬೋಳು ಕೊದ್ಲನ್ನು ಕೂಡ ತಯಾರು ಮಾಡಬಹುದು. ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ಹುರಿದುಕೊಳ್ಳಬೇಕು. ಬಳಿಕ ಬೇಯಿಸಿದ ಬೇಳೆ ಸೇರಿಸಿ, ಇದೇ ರೀತಿ ಒಗ್ಗರಣೆ ನೀಡಬೇಕು. ನೀವು ಪಾಲಕ್ ಬದಲು ಹರಿವೆ ಸೊಪ್ಪನ್ನು ಸಹ ಬಳಸಬಹುದು.