- Advertisement -
ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಉದ್ದಿನ ಬೇಳೆ, ಹಸಿಮೆಣಸು, ಸಣ್ಣದಾಗಿ ತುಂಡು ಮಾಡಿದ ಕಾಯಿ, ಕೊತ್ತೊಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಸಣ್ಣಗೆ ಹೆಚ್ಚಿದ ಶುಂಠಿ, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಉದ್ದಿನ ಬೇಳೆಯನ್ನು ನೀರಿನಲ್ಲಿ ನಾಲ್ಕರಿಂದ 5 ಗಂಟೆ ನೆನೆಸಿಟ್ಟು, ಚೆನ್ನಾಗಿ ತೊಳೆದು, ಪೂರ್ತಿ ನೀರು ಬಸಿಯಬೇಕು. ಬಳಿಕ ನೀರು ಹಾಕದೇ, ಉಪ್ಪು ಹಾಕಿ, ಗ್ರೈಂಡ್ ಮಾಡಿಕೊಳ್ಳಬೇಕು. ಬೋಂಡ ತಯಾರಿಸುವ ಹದಕ್ಕೆ ಹಿಟ್ಟಿರಬೇಕು. ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತೊಂಬರಿ ಸೊಪ್ಪು, ಕರಿಬೇವು, ಶುಂಠಿ ಹಾಕಿ ಮಿಕ್ಸ್ ಮಾಡಿ.
ಕಾದ ಎಣ್ಣೆಯಲ್ಲಿ ತಿಳಿ ಕಂದು ಬಣ್ಣ ಬರುವವರೆಗೂ ಅಂಬಾಡೆಯನ್ನು ಕರಿದರೆ, ಬಿಸ್ಕೂಟ್ ಅಂಬಾಡೆ ರೆಡಿ. ಇದನ್ನು ಕಾಯಿಚಟ್ನಿ ಮತ್ತು ಬೆಣ್ಣೆಯೊಂದಿಗೆ ಸವಿಯಬಹುದು.
- Advertisement -