Saturday, September 14, 2024

Latest Posts

Recipe: ಮಂಗಳೂರು ಶೈಲಿ ಬಿಸ್ಕೂಟ್ ಅಂಬಾಡೆ ರೆಸಿಪಿ

- Advertisement -

Recipe: ಒಂದು ಕಪ್ ಉದ್ದು(3 ಗಂಟೆ ನೆನೆಸಿದ್ದು), ಒಂದು ಚಿಕ್ಕ ಕಪ್ ಕತ್ತರಿಸಿದ ಹಸಿ ಮೆಣಸು- ಹಸಿ ಕೊಬ್ಬರಿ- ಹಸಿ ಶುಂಠಿ- ಕರಿಬೇವಿನ ಮಿಶ್ರಣ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮೊದಲು ನೆನೆಸಿಟ್ಟುಕೊಂಡ ಉದ್ದನ್ನ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಆದ್ರೆ ಹೆಚ್ಚಿಗೆ ನೀರು ಸೇರಿಸಬೇಡಿ. ಹಿಟ್ಟಿನ ಮಿಶ್ರಣ ಸ್ವಲ್ಪ ದಪ್ಪಗಿದ್ದರೆ ಒಳ್ಳೆಯದು. ಇಡ್ಲಿ ಹಿಟ್ಟಿಗಿಂತಲೂ ದಪ್ಪವಿರಲಿ. ಈ ಬ್ಯಾಟರ್‌ಗೆ ಕತ್ತರಿಸಿದ ಹಸಿ ಮೆಣಸು- ಹಸಿ ಕೊಬ್ಬರಿ- ಹಸಿ ಶುಂಠಿ- ಕರಿಬೇವಿನ ಮಿಶ್ರಣ, ಚಿಟಿಕೆ ಇಂಗು, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಕಾದ ಎಣ್ಣೆಯಲ್ಲಿ ಬಜ್ಜಿ ರೀತಿ ಕರಿಯಿರಿ.

ಬಿಸ್ಕೂಟ್ ಅಂಬಾಡೆನಾ ಕಾಯಿ ಚಟ್ನಿ ಜೊತೆ ಸರ್ವ್ ಮಾಡಿ, ಬಿಸಿ ಬಿಸಿ ಅಂಬಾಡೆನಾ ಬೆಣ್ಣೆ ಜೊತೆಗೂ ತಿನ್ನಬಹುದು.

- Advertisement -

Latest Posts

Don't Miss