Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಕಾಲು ಕಪ್ ರವಾ, ಕೊಂಚ ಉಪ್ಪು, ಕೊಂಚ ಅರಿಶಿನ, 2 ಸ್ಪೂನ್ ಎಣ್ಣೆ, ನೀರು ಇವಿಷ್ಟು ಕಣಕ ತಯಾರಿಸಲು ಬೇಕಾಗುವ ಸಾಮಗ್ರಿ. ಇನ್ನು ಹೂರಣಕ್ಕಾಗಿ, ಅರ್ಧ ಕಪ್ ತೆಂಗಿನತುರಿ, ಅರ್ಧ ಕಪ್ ರವೆ, 3 ಟೇಬಲ್ ಸ್ಪೂನ್ ಏಲಕ್ಕಿ ಸೇರಿಸಿದ ಸಕ್ಕರೆ ಪುಡಿ. ಇದನ್ನು ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಮಿಕ್ಸಿಂಗ್ ಬೌಲ್‌ಗೆ ಮೈದಾ, ರವಾ, ಉಪ್ಪು, ಅರಿಶಿನ, ಬಿಸಿ ಮಾಡಿದ 2 ಸ್ಪೂನ್ ಎಣ್ಣೆ, ನೀರು ಇವಿಷ್ಟನ್ನು ಹಾಕಿ ಮಿಕ್ಸ್ ಮಾಡಿ, ಕಣಕ ತಯಾರಿಸಿ 20 ನಿಮಿಷ ಬದಿಗಿರಿಸಿ.
ಮಿಕ್ಸಿ ಜಾರ್‌ಗೆ ತೆಂಗಿನತುರಿ ಹಾಕಿ, ನೀರು ಹಾಾಕದೇ, ಪುಡಿ ಮಾಡಿಕೊಳ್ಳಿ. ಈ ತೆಂಗಿನತುರಿಯ ಪುಡಿಯನ್ನು ಒಂದು ಬೌಲ್‌ಗೆ ಹಾಕಿ. ಬಳಿಕ ಅರ್ಧ ಕಪ್ ರವೆ ಹುರಿದು ಇದಕ್ಕೆ ಪುಡಿ ಕಾಯಿಯನ್ನು ಮಿಕ್ಸ್ ಮಾಡಿ, ಹುರಿಯಿರಿ. ಬಳಿಕ ಇದಕ್ಕೆ ಚಿಟಿಕೆ ಉಪ್ಪು ಹಾಕಿ. ನೆನಪಿರಲಿ ಇದು ಸಿಹಿ ತಿಂಡಿಯಾದ ಕಾರಣ, ಉಪ್ಪು ಹೆಚ್ಚಾಗಬಾರದು. ಹಾಗಾಗಿ ರುಚಿ ಹೆಚ್ಚಲಷ್ಟೇ, ಕೊಂಚವೇ ಉಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ಗ್ಯಾಸ್ ಆಫ್ ಮಾಡಿ, ಸಕ್ಕರೆ ಪುಡಿ ಸೇರಿಸಿದ್ರೆ ಹೂರಣ ರೆಡಿ.
ಕಣಕವನ್ನು ಉಂಡೆಗಳನ್ನಾಗಿ ಮಾಡಿ, ಲಟ್ಟಿಸಿ, ಅದರಲ್ಲಿ ಹೂರಣ ತುಂಬಿಸಿ, ಪೂರಿಯಾಕಾರಕ್ಕೆ ಲಟ್ಟಿಸಿ. ಕಾದ ಎಣ್ಣೆಯಲ್ಲಿ ಕರಿದರೆ, ಸಂಜೀರಾ ರೆಡಿ. ಹಬ್ಬಗಳಲ್ಲೂ ನೀವು ನೈವೇದ್ಯಕ್ಕೆ ಇದನ್ನು ಮಾಡಬಹುದು.