Recipe: ಬೇಕಾಗುವ ಸಾಮಗ್ರಿ: ಪನೀರ್, ಒಂದೊಂದು ಸ್ಪೂನ್ ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಅರ್ಧ ಸ್ಪೂನ್ ಕಾಳುಮೆಣಸು, 2 ಒಣಮೆಣಸು, 4ರಿಂದ 5 ಸ್ಪೂನ್ ತುಪ್ಪ, ಅಥವಾಾ ಎಣ್ಣೆ, 1 ಪಲಾವ್ ಎಲೆ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದೊಂದು ಸ್ವಲ್ಪ ದೊಡ್ಡದಗಿ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೋ, ಒಂದೊಂದು ಸ್ಪೂನ್ ತುರಿದ ಶುಂಠಿ, ಬೆಳ್ಳುಳ್ಳಿ, 3 ಹಸಿಮೆಣಸು, 3 ಟೊಮೆಟೋದಿಂದ ತಯಾರಿಸಿದ ಪ್ಯೂರಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ ಪುಡಿ, ಕಸೂರಿ ಮೇಥಿ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಎಲ್ಲಕ್ಕಿಂತ ಮೊದಲು ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ, ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೋ ಹಾಕಿ ಹುರಿಯಿರಿ, ಬಳಿಕ ಪನೀರ್ ಹಾಕಿ ಹುರಿಯಿರಿ. ಇದನ್ನು ಪಕ್ಕಕ್ಕಿರಿಸಿ. ಖಾರಾ ಅತೀ ಹೆಚ್ಚು ಬೇಕಾಗಿದ್ದಲ್ಲಿ, ನೀವು ಇದರೊಂದಿಗೆ ಹಸಿಮೆಣಸನ್ನು ಸಹ ಸೇರಿಸಬಹುದು.
ಕಡಾಯಿ ಪನೀರ್ ತಯಾರಿಸುವ ಮುನ್ನ ನೀವು ಕಡಾಾಯ ಪನೀರ್ ಮಸಾಲೆ ತಯಾರಿಸಬೇಕು. ಈ ಮಸಾಲೆ ತಯಾರಿಸಲು, ಪ್ಯಾನ್ ಬೀಸಿ ಮಾಡಿ, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಪೆಪ್ಪರ್, ಪಲಾವ್ ಎಲೆ, 2 ಒಣಮೆಣಸು ಹಾಕಿ, ಮಂದ ಉರಿಯಲ್ಲಿ ಹುರಿಯಿರಿ. ಈ ಮಿಶ್ರಣ ತಣ್ಣಗಾದ ಬಳಿಕ, ಕುಟ್ಟಿ ತರಿತರಿಯಾಗಿ ಇದನ್ನು ಪುಡಿ ಮಾಡಿ, ಮಸಾಲೆ ಪುಡಿ ರೆಡಿ ಮಾಡಬೇಕು.
ಮಿಕ್ಸಿ ಜಾರ್‌ನಲ್ಲಿ ಹಾಕಿ ಪುಡಿ ಮಾಡಿದರೆ, ಸ್ವಾದವಿರುವುದಿಲ್ಲ. ಕುಟ್ಟಿ ಪುಡಿ ಮಾಡಿದಾಗಲೇ ರುಚಿ ಹೆಚ್ಚಾಗುತ್ತದೆ. ಈಗ ಕಡಾಯಿ ಪನೀರ್ ಮಸಾಲಾ ರೆಡಿ. ಈಗ ಪಾತ್ರೆ ಬಿಸಿ ಮಾಡಲು ಇಟ್ಟು ತುಪ್ಪ ಬಿಸಿ ಮಾಡಿ, ಇದಕ್ಕೆ ಕೊಂಚ ಜೀರಿಗೆ, ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಒಂದು ಸ್ಪೂನ್ ತುರಿದ ಶುಂಠಿ ಮತ್ತು ಬೆಳ್ಳುಳ್ಳಿ, ಸಣ್ಣಗೆ ಕತ್ತರಿಸಿದ ಹಸಿಮೆಣಸು ಹಾಕಿ ಹುರಿಯಿರಿ.
ಬಳಿಕ ಟೊಮೆಟೋ ಪ್ಯೂರಿ ಸೇರಿಸಿ. ಹಸಿ ವಾಸನೆ ಹೋಗುವವರೆಗೂ ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಉಪ್ಪು, ಚಿಟಿಕೆ ಅರಿಶಿನ, ಖಾರದ ಪುಡಿ, ಪನೀರ್ ಕಡಾಯಿ ಮಸಾಲೆ 3 ಸ್ಪೂನ್, ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ. ಬಳಿಕ ಕೊಂಚ ಬಿಸಿ ನೀರು ಹಾಕಿ ಮಸಾಲೆ ಕುದಿ ಬರುವವರೆಗೂ ಬೇಯಿಸಿ. ಬಳಿಕ ಈ ಮೊದಲೇ ಹುರಿದಿಟ್ಟ ಕ್ಯಾಪ್ಸಿಕಂ, ಪನೀರ್, ಈರುಳ್ಳಿ, ಟೊಮೆಟೋ ಮಿಕ್ಸ್ ಮಾಡಿ. ಬಳಿಕ ಕೊಂಚ ನೀರು, ಫ್ರೆಶ್ ಕ್ರೀಮ್ ಹಾಕಿ ಮಿಕ್ಸ್ ಮಾಡಿ, ಕುದಿಸಿ. ಕೊನೆಗೆ ಕಸೂರಿ ಮೇಥಿ ಮತ್ತು ಕೊತ್ತೊಂಬರಿ ಸೊಪ್ಪು ಮಿಕ್ಸ್ ಮಾಡಿದ್ರೆ, ಕಡಾಯಿ ಪನೀರ್ ರೆಡಿ.