Friday, September 20, 2024

Latest Posts

Recipe: ಈರುಳ್ಳಿ, ಬೆಳ್ಳುಳ್ಳಿ ಇಲ್ಲದೇ ಸುಲಭವಾಗಿ ತಯಾರಿಸಿ ಈ ಪನೀರ್ ಡಿಶ್ (Jain Recipe)

- Advertisement -

Recipe: ಇಂದು ನಾವು ಉತ್ತರ ಭಾರತದವರು ಹೆಚ್ಚು ತಯಾರಿಸುವ, ಅದರಲ್ಲೂ ಪಂಜಾಬಿ ಡಿಶ್ ಆಗಿರುವ ಯಖ್ನಿ ಪನೀರ್ ರೆಸಿಪಿ ಹೇಳಲಿದ್ದೇವೆ. ನೀವು ಪ್ರತಿದಿನ ಮಾಡುವ ಪಲ್ಯ, ಗ್ರೇವಿ ತಿಂದು ತಿಂದು ಬೇಜಾರ್ ಬಂದಿದ್ರೆ, ಇದನ್ನೊಮ್ಮೆ ಟ್ರೈ ಮಾಡಬಹುದು. ಉಪವಾಸದ ದಿನಗಳನ್ನೂ ನೀವು ಇದನ್ನು ತಿನ್ನಬಹುದು. ಹಾಗಾದ್ರೆ ಈರುಳ್ಳಿ- ಬೆಳ್ಳುಳ್ಳಿ ಬಳಸದೇ ಮಾಡಬಹುದಾದ ಯಖ್ನಿ ಪನೀರ್ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ಸ್ಪೂನ್ ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಕಾಳುಮೆಣಸು, ಮೂರು ಒಣ ಮೆಣಸು, 2 ಏಲಕ್ಕಿ, ಒಂದು ಕಪ್ ಪನೀರ್, ನಾಲ್ಕು ಸ್ಪೂನ್ ತುಪ್ಪ, ಒಂದು ಕ್ಯಾಪ್ಸಿಕಂ, 20 ಗೋಡಂಬಿ, ಕೊಂಚ ಟುಂಠಿ, ನಾಲ್ಕು ಹಸಿಮೆಣಸು, ಕಾಲು ಕಪ್ ಮೊಸರು, ಕೊಂಚ ಫ್ರೆಶ್ ಕ್ರೀಮ್, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ಜೀರಿಗೆ, ಸೋಂಪು, ಕಾಳುಮೆಣಸು, ಕೊತ್ತೊಂಬರಿ ಕಾಳು, ಒಣಮೆಣಸು, ಏಲಕ್ಕಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಇದನ್ನು ಪುಡಿ ಮಾಡಿ, ಮಸಾಲೆ ಪುಡಿ ತಯಾರಿಸಿ. ಪುಡಿ ತರಿ ತರಿಯಾಗಿರಲಿ. ಈ ಪುಡಿಯನ್ನು ಬದಿಗಿರಿಸಿ.

ಈಗ ಮಿಕ್ಸಿ ಜಾರ್‌ಗೆ 4ರಿಂದ 5 ಪನೀರ್ ಕ್ಯೂಬ್ಸ್, 10ರಿಂದ 15 ಗೋಡಂಬಿ ಹಾಕಿ ಕೊಂಚ ನೀರು ಹಾಕಿ, ಪೇಸ್ಟ್ ತಯಾರಿಸಿಕೊಳ್ಳಿ. ಈಗ ಪ್ಯಾನ್‌ನಲ್ಲಿ ತುಪ್ಪ ಹಾಕಿ, ಪನೀರ್‌, ಗೋಡಂಬಿ, ಕ್ಯಾಪ್ಸಿಕಂ ಲೈಟ್ ಆಗಿ ರೋಸ್ಟ್ ಮಾಡಿಕೊಳ್ಳಿ. ಬಳಿಕ ಅದನ್ನು ತೆಗೆದಿರಿಸಿ, ಆ ಪ್ಯಾನ್‌ಗೆ ಮತ್ತಷ್ಟು ತುಪ್ಪ ಹಾಕಿ, ಶುಂಠಿ, ಹಸಿಮೆಣಸನ್ನು ಹಾಕಿ ಹುರಿದುಕೊಳ್ಳಿ.

ಬಳಿಕ ಗೋಡಂಬಿ, ಪನೀರ್ ಪೇಸ್ಟ್ ಇದಕ್ಕೆ ಸೇರಿ, ಇದರೊಂದಿಗೆ ನೀರು ಸೇರಿಸಿ, ಕೈಯಾಡಿಸಿ. ಬಳಿಕ ಕಾಲು ಕಪ್ ಮೊಸರು ಹಾಕಿ, ಮಿಕ್ಸ್ ಮಾಡಿ, ಮಂದ ಉರಿಯಲ್ಲಿ ಮುಚ್ಚಳ ಮುಚ್ಚಿ 2 ನಿಮಿಷ ಬೇಯಿಸಿ. ಬಳಿಕ ಇದಕ್ಕೆ ಹುರಿದುಕೊಂಡ ಪನೀರ್, ಗೋಡಂಬಿ, ಕ್ಯಾಪ್ಸಿಕಂ, ಉಪ್ಪು, 2 ಸ್ಪೂನ್ ರೆಡಿ ಮಾಡಿಕೊಂಡ ಮಸಾಲೆ, ಫ್ರೆಶ್ ಕ್ರೀಮ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಕೊನೆಗೆ ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪನ್ನು ಇದ್ಕಕೆ ಸೇರಿಸಿದರೆ, ಪನೀರ್ ಯಖ್ನಿ ರೆಡಿ.

- Advertisement -

Latest Posts

Don't Miss