Wednesday, October 15, 2025

Latest Posts

Recipe: ರಾಯ್ತಾ ರುಚಿ ಹೆಚ್ಚಿಸಲು ಇದನ್ನು ಬಳಸಿ

- Advertisement -

Recipe: ಪಲಾವ್ ಮಾಡಿದಾಗ, ಅದರ ರುಚಿ ಇನ್ನಷ್ಟು ಹೆಚ್ಚಿಸಲು ಮತ್ತು ನಮ್ಮ ದೇಹವನ್ನು ತಂಪು ಮಾಡಲು ಸಲಾಡ್ ಅಥವಾ ರಾಯ್ತಾ ಸೇವಿಸುತ್ತಾರೆ. ಇಂದು ನಾವು ಬರೀ ಈರುಳ್ಳಿ, ಟೊಮೆಟೋ, ಉಪ್ಪು, ಮೊಸರು ಅಷ್ಟೇ ಅಲ್ಲದೇ, ಅದಕ್ಕೆ ಇನ್ನಷ್ಟು ಸಾಮಗ್ರಿಯನ್ನು ಸೇರಿಸಿ, ಟೇಸ್ಟಿ ಮತ್ತು ಹೆಲ್ದಿಯಾಗಿ ಯಾವ ರೀತಿ ರಾಯ್ತಾ ಮಾಡಬೇಕು ಅಂತಾ ತಿಳಿಯೋಣ.

ಒಂದು ಕಪ್, ಸೌತೇಕಾಯಿ, ಟೊಮೆಟೋ, ಈರುಳ್ಳಿ, ಕ್ಯಾಪ್ಸಿಕಂ, ಅರ್ಧ ಕಪ್ ಕಾಯಿ ತುರಿ, ಒಂದು ಕಪ್ ದ್ರಾಕ್ಷಿ, ಆ್ಯಪಲ್, ದಾಳಿಂಬೆ, ಕೊತ್ತೊಂಬರಿ ಸೊಪ್ಪು, 1 ಹಸಿಮೆಣಸು, ಕೊಂಚ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು, ಮೊಸರು, ಉಪ್ಪು.

ಮೊದಲು ಕಾಯಿತುರಿ ಮತ್ತು ಹಸಿಮೆಣಸು ಸೇರಿಸಿ, ರುಬ್ಬಿ ಪೇಸ್ಟ್ ತಯಾರಿಸಿ. ಬಳಿಕ ಮಿಕ್ಸಿಂಗ್‌ ಬೌಲ್‌ಗೆ ಸೌತೇಕಾಯಿ, ಟೊಮೆಟೋ, ಈರುಳ್ಳಿ, ದ್ರಾಕ್ಷಿ, ಆ್ಯಪಲ್, ದಾಳಿಂಬೆ, ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಮೊಸರು, ಉಪ್ಪು, ತಯಾರಿಸಿಕೊಂಡ ಕಾಯಿ, ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ ಮಿಕ್ಸ್ ಮಾಡಿ.

ಈಗ ರಾಯ್ತಾ ರುಚಿ ಹೆಚ್ಚಿಸಲು ಕ್ಯಾಪ್ಸಿಕಂ ಮಿಕ್ಸ್ ಮಾಡಿ. ಕಾಯಿ ಮತ್ತು ಹಸಿಮೆಣಸಿನ ಪೇಸ್ಟ್ ಮತ್ತು ಕ್ಯಾಪ್ಸಿಕಂ, ರಾಯ್ತಾಗೆ ಡಿಫ್ರೆಂಟ್ ಆಗಿರುವ ರುಚಿ ಕೊಡುತ್ತದೆ. ಈಗ ಎಣ್ಣೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ಕೊಟ್ಟರೆ ರಾಯ್ತಾ ರೆಡಿ.

- Advertisement -

Latest Posts

Don't Miss