Recipe: ಪಲಾವ್ ಅಂದ್ರೆ ತುಂಬಾ ಸಿಂಪಲ್ ರೆಸಿಪಿ. ಆದರೆ ಇವತ್ತು ನಾವು ಪಲಾವ್ ರುಚಿ ಹೆಚ್ಚಿಸಲು ನೀವು ಯಾವ ಪದಾರ್ಥ ಬಳಸಬೇಕು ಎಂದು ಹೇಳಲಿದ್ದೇವೆ.
ಅಕ್ಕಿ, ಒಂದು ಈರುಳ್ಳಿ, ಒಂದು ಕಪ್ ಕ್ಯಾರೆಟ್, ಬಟಾಣಿ, ಆಲೂಗಡ್ಡೆ, ಬೀನ್ಸ್, ಬಿಸಿ ನೀರಿನಲ್ಲಿ 15 ನಿಮಿಷ ನೆನೆಸಿಟ್ಟ ಸೋಯಾ ಚಂಕ್ಸ್, ನಾಲ್ಕು ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಕೊಂಚ ಜೀರಿಗೆ, ಸೋಂಪು, ಪುದೀನಾ, ಕೊತ್ತೊಂಬರಿ ಸೊಪ್ಪು, 2-3 ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಅರ್ಧ ಸ್ಪೂನ್ ಖಾರದ ಪುಡಿ, ಮಸಾಲೆ ಪುಡಿ, ಧನಿಯಾ ಪುಡಿ, ಉಪ್ಪು, ಕೊಂಚ ಕಸೂರಿ ಮೇಥಿ, ಅರ್ಧ ಕುಪ್ ಕಾಯಿ ಹಾಲು, ತುಪ್ಪ.
ಮೊದಲು ಅಕ್ಕಿ ಚೆನ್ನಾಗಿ ತೊಳೆದು ಬದಿಗಿರಿಸಿ, ಕಾಯಿ ತುರಿದು, ರುಬ್ಬಿ ಕಾಯಿ ಹಾಲು ತೆಗೆದಿಟ್ಟುಕೊಳ್ಳಿ. ಈಗ ಪುದೀನಾ, ಕೊತ್ತೊಂಬರಿ ಸೊಪ್ಪು, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಸೋಂಪನ್ನು ಮಿಕ್ಸಿ ಜಾರ್‌ಗೆ ಹಾಕಿ, ಪೇಸ್ಟ್ ತಯಾರಿಸಿ. ಈಗ ಕುಕ್ಕರ್ ಬಿಸಿ ಮಾಡಿ, ತುಪ್ಪ, ಪಲಾವ್ ಎಲೆ, ತರಿ ತರಿಯಾಗಿ ಕುಟ್ಟಿ ಪುಡಿ ಮಾಡಿದ ಏಲಕ್ಕಿ, ಲವಂಗ, ಚಕ್ಕೆ ಹಾಕಿ ಹುರಿಯಿರಿ.
ಬಳಿಕ ಈರುಳ್ಳಿ ಹಾಕಿ ಹುರಿಯಿರಿ, ಬಳಿಕ ಖಾರದಪುಡಿ, ಅರಿಶಿನ, ಉಪ್ಪು, ಗರಂ ಮಸಾಲೆ, ಧನಿಯಾಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಉಳಿದ ತರಕಾರಿ, ಸೋಯಾ ಚಂಕ್ಸ್ ಸೇರಿಸಿ ಹುರಿಯಿರಿ. ಇದಕ್ಕೆ ಪುದೀನಾ ಪೇಸ್ಟ್, ಅಕ್ಕಿ, ಕಸೂರಿ ಮೇಥಿ, ಕಾಯಿ ಹಾಲು ಸೇರಿಸಿ, ಕುಕ್ಕರ್ ಮುಚ್ಚಳ ಮುಚ್ಚಿ, 3 ವಿಶಲ್ ಬರುವ ಹಾಗೆ ಮಾಡಿ. ಇದರಲ್ಲಿ ನಾವು ಪಲಾವ್ ರುಚಿ ಹೆಚ್ಚಿಸಲು ಬಳಸಿದ ವಸ್ತು ಅಂದ್ರೆ, ಕಾಯಿ ಹಾಲು. ಕಾಯಿ ಹಾಲು ಹಾಕಿದರೆ, ನೀವು ಹೆಚ್ಚು ತುಪ್ಪ ಅಥವಾ ಎಣ್ಣೆ ಬಳಸಬೇಕು ಎಂದಿಲ್ಲ. ಏಕೆಂದರೆ, ಕಾಯಿ ಹಾಲಿನಲ್ಲೇ ಎಣ್ಣೆ ಅಂಶ ಇರುತ್ತದೆ. ಇದೇ ಪಲಾವ್ ರುಚಿ ಹೆಚ್ಚಿಸುತ್ತದೆ.