Recipe: ಬೇಕಾಗುವ ಸಾಾಮಗ್ರಿ: ಒಂದು ಈರುಳ್ಳಿ, 1 ಕ್ಯಾರೆಟ್, ಸಣ್ಣ ತುಂಡು ಬೀಟ್‌ರೂಟ್, ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಜೀರಿಗೆ, 2 ಒಣಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಾಲು ಕಪ್ ಬಟಾಣಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ, 2 ಬೇಯಿಸಿ ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಚಾಟ್ ಮಸಾಲೆ ಪುಡಿ, 2 ಸ್ಪೂನ್ ಕಾರ್ನ್ ಫ್ಲೋರ್, ಅರ್ಧ ಕಪ್ ಬ್ರೆಡ್ ಕ್ರಂಬ್ಸ್ ಅಥವಾ ರವಾ, ರುಚಿಗೆ ತಕ್ಕಷ್ಟು ಉಪ್ಪು ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಎಲ್ಲ ತರಕಾರಿಯನ್ನು ಸಣ್ಣದಾಗಿ ಕತ್ತರಿಸಿ. ಈಗ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಜೀರಿಗೆ, ಒಣಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ನಂತರ ಕ್ಯಾರೇಟ್, ಬೀಟ್‌ರೂಟ್, ಬಟಾಣಿ ಹಾಕಿ ಹುರಿಯಿರಿ.
ಬಳಿಕ ಅರಿಶಿನ, ಉಪ್ಪು, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ ಹಾಕಿ ಹುರಿಯಿರಿ. ನಂತರ ಬೇಯಿಸಿದ ಟೊಮೆಟೋ ಮಿಕ್ಸ್ ಮಾಡಿ. ಈಗ ಸ್ನ್ಯಾಕ್ಸ್ ಮಾಡುವ ಹೂರಣ ರೆಡಿ. ಕಾರ್ನ್‌ಫ್ಲೋರ್ ನೀರಿಗೆ ಹಾಕಿ, ಮಿಕ್ಸ್ ಮಾಡಿ. ರೆಡಿ ಮಾಡಿಟ್ಟುಕೊಂಡ ಹೂರಣವನ್ನು ನಿಮಗೆ ಬೇಕಾದ ಹಾಗೆ ಶೇಪ್ ಕೊಟ್ಟು, ಅದನ್ನು ಕಾರ್ನ್ ಫ್ಲೋರ್ ಮಿಕ್ಸ್‌ಹಾಕಿ, ಬ್ರೆಡ್ ಸ್ಕ್ರಬ್‌ನಿಂದ ಕವರ್ ಮಾಡಿ. ಈಗ ಎಣ್ಣೆ ಕಾಯಲು ಇಟ್ಟು, ಎಣ್ಣೆ ಕಾದ ಬಳಿಕ, ರೆಡಿ ಮಾಡಿಕೊಂಡಿದ್ದನ್ನು ಮಂದ ಉರಿಯಲ್ಲಿ ತಿಳಿ ಕಂಡು ಬಣ್ಣ ಬರುವವರೆಗೂ ಕರಿದರೆ, ಆಲೂ ನಗ್ಗೆಟ್ಸ್ ರೆಡಿ. ನೀವು ಇದರಲ್ಲಿ ಚೀಸ್ ಕೂಡ ಸೇರಿಸಬಹುದು. ಇದು ಟೊಮೆಟೋ ಸಾಸ್ ಜೊತೆ ಉತ್ತಮ ಕಾಂಬಿನೇಷನ್ ಆಗಿರುತ್ತದೆ.