ನಭೋ ಮಂಡಲದಲ್ಲಿ ಇಂದು ಕೌತುಕದ ಕ್ಷಣ ಸೃಷ್ಟಿಯಾಗಲಿದೆ. 2022ರ ಬಳಿಕ ದೀರ್ಘಾವಧಿಯ ಪೂರ್ಣ ಚಂದ್ರ ಗ್ರಹಣ, ರಾತ್ರಿ 9:57ರಿಂದ ಮಧ್ಯರಾತ್ರಿ 1:26ರವರೆಗೂ ಗೋಚರವಾಗಲಿದೆ.
ಬರೋಬ್ಬರಿ 7 ವರ್ಷಗಳ ಬಳಿಕ ದೇಶದ ಎಲ್ಲಾ ಭಾಗಗಳಲ್ಲಿ, ಪೂರ್ಣ ಚಂದ್ರ ಗ್ರಹಣ ಗೋಚರವಾಗ್ತಿದ್ದು, ಬರೀ ಕಣ್ಣಿನಿಂದಲೇ ನೋಡಬಹುದಾಗಿದೆ. 3 ಗಂಟೆ 29 ನಿಮಿಷಗಳ ಕಾಲ ಸುದೀರ್ಘ ವಿಸ್ಮಯ ನಡೆಯಲಿದ್ದು, ಈ ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣ ಇದಾಗಿದೆ.
ಮಧ್ಯರಾತ್ರಿ 2.25ಕ್ಕೆ ಚಂದ್ರನ ಮೇಲಿಂದ ಭೂಮಿಯ ನೆರಳು ಸರಿದು, ಗ್ರಹಣ ಪೂರ್ಣ ಅಂತ್ಯವಾಗಲಿದೆ. 2018ರ ಬಳಿಕ ಮೊದಲ ಬಾರಿಗೆ ದೇಶಾದ್ಯಂತ ರಕ್ತ ಚಂದಿರ ಗೋಚರವಾಗ್ತಿದ್ದು, ದೇಶದಲ್ಲಿ ಮುಂದಿನ ರಕ್ತ ಚಂದ್ರಗ್ರಹಣಕ್ಕಾಗಿ 2028ರ ಡಿಸೆಂಬರ್ 31ರವರೆಗೆ ಕಾಯಬೇಕಿದೆ.
ರಾತ್ರಿ 8.58
ಚಂದ್ರನ ಹೊರಭಾಗಕ್ಕೆ ಭೂಮಿಯ ನೆರಳು ಮೊದಲ ಸ್ಪರ್ಶ
ರಾತ್ರಿ 9.57
ಚಂದ್ರನ ಮೇಲೆ ಭೂಮಿ ನೆರಳು ಬಿದ್ದು ಗ್ರಹಣ ಆರಂಭ
ರಾತ್ರಿ 11
11ರಿಂದ 12.22ರವರೆಗೆ ಕೆಂಬಣ್ಣದ ಚಂದ್ರ ದರ್ಶನ
ಮಧ್ಯರಾತ್ರಿ 2.25
ಭೂಮಿಯ ನೆರಳು ಸರಿದು ಚಂದ್ರಗ್ರಹಣ ಪೂರ್ಣ ಅಂತ್ಯ