Sunday, September 8, 2024

Latest Posts

ಕೇವಲ 6,499 ರೂಪಾಯಿಗೆ ಗೆ ರೆಡ್ಮಿ ಮೊಬೈಲ್ ಬಿಡುಗಡೆ…!

- Advertisement -

Technology News:

ಶವೋಮಿ ತನ್ನ ರೆಡ್ಮಿ ಬ್ರ್ಯಾಂಡ್ ಅಡಿಯಲ್ಲಿ ಬಜೆಟ್ ಬೆಲೆಯ ಫೋನುಗಳನ್ನು ಬಿಡುಗಡೆ ಮಾಡಿ ಕೆಲ ಸಮಯವೇ ಆಗತ್ತು. ಇದೀಗ ಭಾರತದಲ್ಲಿ ಹೊಸ ರೆಡ್ಮಿಎ1 ಫೋನ್ ಲಾಂಚ್ ಆಗಿದೆ. ಇದು ಬಜೆಟ್ ಬೆಲೆಯ ಮೊಬೈಲ್ ಆಗಿದ್ದರೂ ಅತ್ಯುತ್ತಮ ಫೀಚರ್​ಗಳಿಂದ ಆವೃತ್ತವಾಗಿದೆ  ಎಂದು ಹೇಳಲಾಗುತ್ತಿದೆ.

ಸದ್ಯಕ್ಕೆ ಭಾರತದಲ್ಲಿ ರೆಡ್ಮಿ A1 ಸ್ಮಾರ್ಟ್‌ಫೋನ್‌ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. 2GB RAM + 32GB ಸ್ಟೋರೇಜ್​ಗೆ ಕೇವಲ 6,499 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಕಪ್ಪು, ತಿಳಿ ಹಸಿರು ಹಾಗೂ ತಿಳಿ ನೀಲಿ ಬಣ್ಣಗಳಲ್ಲಿ ಖರೀದಿಗೆ ಸಿಗಲಿದೆ.

ಈ ಫೋನ್  6.52 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು  ಮೀಡಿಯಾಟೆಕ್ ಹೀಲಿಯೊ A22 ಪ್ರೊಸೆಸರ್ ಅಳವಡಿಸಲಾಗಿದೆ, ಹಾಗೆ  ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದುಕೊಂಡಿದೆ.ಈ ಸ್ಮಾರ್ಟ್‌ಫೋನ್​ನಲ್ಲಿ 8 ಮೆಗಾಫಿಕ್ಸೆಲ್​ನ ಡ್ಯುಯೆಲ್ ಕ್ಯಾಮೆರಾ ಸೆಟ್‌ಅಪ್‌ ಇದೆ. ಜೊತೆಗೆ LED ಫ್ಲ್ಯಾಶ್ ಕೂಡ ಇರುತ್ತದೆ. 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಫೋನ್ ಭಾರತ 20 ಕ್ಕೂ ಅಧಿಕ ಭಾಷೆಯನ್ನು ಸಪೋರ್ಟ್ ಮಾಡುತ್ತದೆ.

ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, 10W ಸಾಮಾನ್ಯ ವೇಗದ ಚಾರ್ಜರ್​ನೊಂದಿಗೆ ದೊರೆಯಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್, GPS ಮತ್ತು USB ಟೈಪ್-C ಪೋರ್ಟ್ ಹೊಂದಿದೆ ಎಂದು ತಿಳಿದು ಬಂದಿದೆ.

ಮಣಿಪಾಲ್ ಸಮೂಹಕ್ಕೆ ಐಟಿ ಶಾಕ್..!

ಕೇದರನಾಥ ಭಕ್ತರಿಗೆ ಜಿಯೋ ಸಂಸ್ಥೆಯಿಂದ ಗುಡ್ ನ್ಯೂಸ್…!

ಈ ವರ್ಷದ ದೀಪಾವಳಿಗೆ ಪಟಾಕಿ ನಿಷೇಧ…!

- Advertisement -

Latest Posts

Don't Miss