ಮತ್ತೆ Tv9 ಸೇರಿದ ರೆಹಮಾನ್

www.karnatakatv.net : ಬೆಂಗಳೂರು : ಕನ್ನಡದ ಖ್ಯಾತ ನಿರೂಪಕ ರೆಹಮಾನ್ ಮತ್ತೆ ಟಿವಿ9 ಸಂಸ್ಥೆ  ಸೇರಿದ್ದಾರೆ..  ಮೂರು ವರ್ಷದ ಹಿಂದೆ ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ರೆಹಮಾನ್ ನಂತರ ಕಲರ್ ಕನ್ನಡದಲ್ಲಿ ನಿರೂಪಕನಾಗಿದ್ರು ಜೊತೆಗೆ ಧಾರವಾಹಿಗೂ ಕಾಲಿಟ್ಟ ರೆಹಮಾನ್ ನಂತರ ವಾಪಸ್ ನ್ಯೂಸ್ ಚಾನಲ್ ಕಡೆ ಮುಖ ಮಾಡಿದ್ರು.. ಕಿರಿಕ್ ಕೀರ್ತಿ ಜೊತೆ ಕರ್ನಾಟಕ.ಇನ್ ಡಿಜಿಟಲ್ ನಲ್ಲಿ ಸ್ವಲ್ಪ ದಿನ ಕೆಲಸ ಮಾಡಿದ ರೆಹಮಾನ್ ನಂತರ ಪವರ್ ಟಿವಿ ಸೇರಿ ಹೊಸ ಅಲೆ ಹುಟ್ಟುಹಾಕಿದ್ರು.. ಕೆಲ ದಿನಗಳ ಹಿಂದೆಯಷ್ಟೆ ಪವರ್ ಟಿವಿ ತೊರೆದ ರೆಹಮಾನ್ ಇದೀಗ ತಮ್ಮ ಮಾತೃ ಸಂಸ್ಥೆ ಟಿರ್ವಿ ಗೆ ಮರಳಿದ್ದಾರೆ.. ಯಾವುದೇ ಅರಚಾಟ,ಚೀರಾಟ ಇಲ್ಲದೆ ಸುದ್ದಿ ನೀಡುವ ರೆಹಮಾನ್ ಗೆ ಶುಭವಾಗಲಿ.‌

About The Author