Saturday, March 2, 2024

Latest Posts

ಕಾವೇರಿ ನೀರು ಹಂಚಿಕೆ- ಮಳೆ ಬಂದ್ರೆ ಮಾತ್ರ ನೀರು ಬಿಡುಗಡೆ- ರಾಜ್ಯಕ್ಕೆ ರಿಲೀಫ್..!

- Advertisement -

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಇಂದು ನಡೆದ ಸಭೆಯಲ್ಲಿ ಕರ್ನಾಟಕಕ್ಕೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಉತ್ತಮ ಮಳೆಯಾದ್ರೆ ಮಾತ್ರ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡಿದೆ.

ಇಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ, ತಮಿಳುನಾಡಿ, ಪುದುಚೇರಿ, ಕೇರಳ ಮತ್ತು ಕೇಂದ್ರದ ಪ್ರತಿನಿಧಿಗಳು ಭಾಗಿಯಾಗಿದ್ರು. ರಾಜ್ಯದಲ್ಲಿ ಸದ್ಯ ಬರಗಾಲದ ಪರಿಸ್ಥಿತಿ ಇದ್ದು, ಕಾವೇರಿ ಕೊಳ್ಳದಲ್ಲಿ ಸರಿಯಾಗಿ ಮಳೆಯಾಗದೇ ಜಲಾಶಯಗಳಲ್ಲಿ ನೀರಿಲ್ಲದಂತಾಗಿದೆ. ಇದ್ರಿಂದ ರೈತರ ಬೆಳೆ ಹಾಗೂ ಜಾನುವಾರುಗಳು ಮತ್ತು ಜನರಿಗೆ ಕುಡಿಯೋ ನೀರು ಸಿಗುತ್ತಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ತಮಿಳುನಾಡಿದೆ ಸದ್ಯ ನೀರು ಬಿಡಲು ಸಾಧ್ಯವೇ ಇಲ್ಲ ಅಂತ ಕರ್ನಾಟಕ ಪ್ರತಿನಿಧಿ ನಿಲುವು ಮಂಡಿಸಿದ್ರು.ಕೊನೆಗೆ ರಾಜ್ಯದ ಸದ್ಯದ ಪರಿಸ್ಥಿತಿ ಅರಿತ ಪ್ರಾಧಿಕಾರ ಇದೀಗ ರಾಜ್ಯದಲ್ಲಿ ಉತ್ತಮ ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ. ಈ ಮೂಲಕ ರಾಜ್ಯದ ಜನತೆ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.

ರಾಜ್ಯಕ್ಕೆ ಜಲಕಂಟಕದ ಭೀತಿ..!! ಮಿಸ್ ಮಾಡದೇ ಈ ವಿಡಯೋ ನೋಡಿ

https://www.youtube.com/watch?v=PnWTRFiQDUI

- Advertisement -

Latest Posts

Don't Miss