Friday, November 22, 2024

Latest Posts

Kerala; ಭಾರತದಲ್ಲಿ ಮುಸ್ಲಿಂ ಪ್ರಾಬಲ್ಯದ ಪ್ರತ್ಯೇಕ ರಾಜ್ಯ? ; ವಿಭಜನೆಯ ಕೂಗಿಗೆ ಮೋದಿ ಏನ್ಮಾಡ್ತಾರೆ?

- Advertisement -

 

ದೇಶದಲ್ಲಿ ಇನ್ನೊಂದು ವಿಭಜನೆ ಕೂಗು ಎದ್ದಿದೆ… ತಮಗೂ ಒಂದು ಪ್ರತ್ಯೇಕ ರಾಜ್ಯ ಬೇಕು ಎಂದು ಹೇಳುತ್ತಿದ್ದಾರೆ. ನಾವೂ ಕೂಡಾ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ನಮಗೂ ಕೂಡಾ ಹೆಚ್ಚಿನ ಅವಕಾಶಗಳು ಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅವರು ಕೇಳಿದ ಹಾಗೆ ಏನಾದರು ಪ್ರತೇಕ ರಾಜ್ಯ ಮಾಡಿಕೊಟ್ಟರೆ ಭಾರತದ ಪರಿಸ್ಥಿತಿ ಏನಾಗಬಹುದು? ಪ್ರತೇಕ ರಾಜ್ಯ ಕೇಳುತ್ತಿರುವ ರಾಜ್ಯ ಯಾವುದು? ಮುಸ್ಲಿಮರೆ ಹೆಚ್ಚಾಗಿರುವ ಈ ರಾಜ್ಯದಲ್ಲಿ ಅವರಿಗೆ ಯಾಕೆ ಪ್ರತೇಕ ರಾಜ್ಯ ಮಾಡಬೇಕು?

ದಕ್ಷಿಣದ ರಾಜ್ಯ ಕೇರಳ ಈಗ ಬಾರಿ ಸುದ್ದಿಯಲ್ಲಿದೆ. ಒಂದು ಕಡೆ ಅತಿಯಾದ ಸಾಲ, ಇನ್ನೋಂದು ಕಡೆ ಕುಂಟಿತವಾದ ಅಭಿವೃದ್ಧಿ. ಕೇಂದ್ರದಿಂದ ಸರಿಯಾದ ಅನುದಾನ ನೀಡುತ್ತಿಲ್ಲ ಎನ್ನುವಂತ ತಗಾದೆ ಕೂಡಾ ಮಾಡುತ್ತಿದ್ದಾರೆ. ಇದರ ನಡುವೆ ರಾಜ್ಯದ ಹೆಸರನ್ನ ಕೇರಳಂ ಅಂತಾ ಬದಲಾವಣೆಗೆ ವಿಧಾನ ಸಭೆಯಲ್ಲಿ ಒಪ್ಪಿಗೆ ಪಡೆಯೋ ಮುಲಕ ಎಲ್ಲರ ಗಮನ ಸೇಳೆದಿದೆ. ಹೀಗೆ ಎನೇನೋ ಮಾಡುತ್ತಿರು ಈ ಸಂದರ್ಭದಲ್ಲಿ ರಾಜ್ಯ ವಿಭಜನೆ ಕೂಗೂ ಕೇಳಿ ಬರುತ್ತಿದೆ.

ಹೀಗೆ ಏನೇನೋ ಮಾಡುತ್ತಿರುವಂತಹ ಕೇರಳದಲ್ಲಿ ಈಗ ರಾಜ್ಯ ವಿಭಜನೆಯ ಮಾತೊಂದು ಕೇಳಿ ಬರುತ್ತಿದೆ. ದಕ್ಷಿಣ ಕೇರಳಕ್ಕೆ ಕಂಪೇರ್ ಮಾಡಿದ್ರೆ ಸಾಕಷ್ಟು ಅನ್ಯಾಯವಾಗುತ್ತಿದೆ. ಹಾಗಾಗಿ ನಮಗೆ ಪ್ರತ್ಯೇಕ ಮಲಬಾರ್ ಸ್ಟೇಟ್ ಅನ್ನ ಕೊಟ್ಟುಬಿಡಿ ಅಂತ ಕೇರಳದ ಸುನ್ನಿ ಯುವಜನ ಸಂಘದ ಮುಖ್ಯಸ್ಥ ಮುಸ್ತಪ್ಪ ಮುಂಡುಪಾರ ಹೇಳುತ್ತಿದ್ದಾನೆ.

ಇತ್ತೀಚಿಗೆ ಏನಾಯ್ತು ಅಂದ್ರೆ ಮಲಪುರಂ ಜಿಲ್ಲೆಯಲ್ಲಿ 11ನೇ ತರಗತಿಗೆ ಸರಿಯಾದ ಸೀಟುಗಳು ಸಿಕ್ತಾ ಇಲ್ಲ. ಕಾಲೇಜುಗಳ ಸಂಖ್ಯೆ ಕಡಿಮೆಯಾಗಿದೆ. ಹಾಗೆ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಕಾಲೇಜು ವ್ಯವಸ್ಥೆ ಇಲ್ಲದೆ ಇರುವ ಕಾರಣಕ್ಕೋಸ್ಕರ ಪ್ರತಿಭಟನೆ ಮಾಡಲಾಯಿತು. ನಮ್ಮ ಸಮಸ್ಯೆಯನ್ನು ಬಗೆಹರಿಸಿ ಎನ್ನುವಂಥದ್ದು ವಿದ್ಯಾರ್ಥಿಗಳ ಕೂಗಾಗಿತ್ತು. ಈಗ ಮುನ್ನಡೆಗೆ ಬಂದಿದ್ದು ಮಲಬಾರ್ ಪ್ರತ್ಯೇಕ ರಾಜ್ಯದ ವಿಚಾರ….

ಸುನ್ನಿ ಸಂಘದ ನಾಯಕರು ಹೇಳುತ್ತಿರುವ ಹಾಗೆ ಪ್ರತ್ಯೇಕ ರಾಜ್ಯ ರಚನೆ ಆದ್ರೆ ಕೇರಳದ ಡೆಮೋಗ್ರಾಪಿಯಲ್ಲಿ ಬಾರಿ ಬದಲಾವಣೆ ಆಗುವ ಸಾಧ್ಯತೆ ಇದೆ. ಇನ್ನು ಕೇರಳದ ಜನ ಸಂಖ್ಯೆಯನ್ನು ನೋಡೋದಾದ್ರೆ 2011 ರಲ್ಲಿ ಇರುವ ಜನಸಂಖ್ಯೆಗೂ 2021 – 23ರಲ್ಲಿ ಇರುವಂತಹ ಜನಸಂಖ್ಯೆವು ಶೇ.20 ಹೆಚ್ಚು ಇದ್ದಾರೆ. ಅದರಲ್ಲೂ ಮುಸ್ಲಿರ ಸಂಖ್ಯೆ ಪ್ರತಿ ವರ್ಷಕ್ಕೊಮ್ಮೆ ಜನಸಂಖ್ಯೆ ಹೆಚ್ಚಾಗುತ್ತದೆ. ಹಾಗಾದ್ರೆ ಕೇರಳದಲ್ಲಿ ಮುಸ್ಲಿಮರು ಹಿಂದುಗಳು ಹಾಗೆ ಕ್ರಿಶ್ಚನ್ ಜನರಸಂಖ್ಯೆ ಎಷ್ಟಿದೆ ಅಂತ ನೋಡೋದಾದ್ರೆ..

ಇತ್ತೀಚಿನ ಜನಗಣತಿಯ ಪ್ರಕಾರ, ಹಿಂದೂಗಳ ಜನಸಂಖ್ಯೆಯ ಶೇ.54.73% ರಷ್ಟಿದೆ. ಮುಸ್ಲಿಂ ಜನಸಂಖ್ಯೆಯು ಒಟ್ಟು 3.34 ಕೋಟಿಯಲ್ಲಿ 88.73 ಲಕ್ಷ ಅಂದ್ರೆ ಶೇ. 26.56ರಷ್ಟು ಇದೆ. ಕೇರಳದಲ್ಲಿ ಕ್ರಿಶ್ಚಿಯನ್ ಜನಸಂಖ್ಯೆಯು 61.41 ಲಕ್ಷ ಇದೆ. ಒಟ್ಟು ಜನಸಂಖ್ಯೆಯ ಶೇ.26.56ರಷ್ಟು ಮಸ್ಲಿಮರಿರುವ ಕೇರಳ ರಾಜ್ಯದ ಚುನಾವಣೆಯಲ್ಲಿ ಮುಸ್ಲಿಮರು ಪ್ರಮುಖ ಪಾತ್ರ ವಹಿಸುತ್ತಾರೆ. ಮತ್ತು 14 ಜಿಲ್ಲೆಗಳಲ್ಲಿ 1 ರಲ್ಲಿ ಇಸ್ಲಾಂ ಅನ್ನು ಬಹುಮತದೊಂದಿಗೆ ಅನುಸರಿಸಲಾಗುತ್ತದೆ.

ಧರ್ಮ                                       ಶೇ

ಹಿಂದೂ                                54.73%
ಮುಸ್ಲಿಂ                                 26.56%

ಕ್ರಿಶ್ಚಿಯನ್                            18.38%
ಸಿಖ್                                    0.01%
ಬೌದ್ಧ                                  0.01%
ಜೈನ್                                   0.01%
ಇತರ ಧರ್ಮಗಳು                    0.02%
ಹೇಳಿಲ್ಲ                               0.26%

ಮುಸ್ಲಿಂಮರ ಸಂಖ್ಯೆ ಪ್ರತಿವರ್ಷಕ್ಕೆ ಹೆಚ್ಚಾಗುತ್ತಿದೆ. ಹಾಗಾದ್ರೆ ಕೇರಳದ ಯಾವ ಯಾವ ಜಿಲ್ಲೆಗಳಲ್ಲಿ ಯಾವ ಯಾವ ಧರ್ಮದ ಜನರು ಇದ್ದಾರೆ ಅಂತ ನೋಡೋಣ ಬನ್ನಿ

ಜಿಲ್ಲೆ                                           ಬಹುಸಂಖ್ಯಾತ ಧರ್ಮ

ಮಲಪ್ಪುರಂ                                         ಮುಸ್ಲಿಂ
ತಿರುವನಂತಪುರಂ                                  ಹಿಂದೂ
ಎರ್ನಾಕುಲಂ                                       ಹಿಂದೂ
ತ್ರಿಶೂರ್                                             ಹಿಂದೂ
ಕೋಝಿಕ್ಕೋಡ್                                    ಹಿಂದೂ
ಪಾಲಕ್ಕಾಡ್                                         ಹಿಂದೂ
ಕೊಲ್ಲಂ                                              ಹಿಂದೂ
ಕಣ್ಣೂರು                                            ಹಿಂದೂ
ಆಲಪ್ಪುಳ                                            ಹಿಂದೂ
ಕೊಟ್ಟಾಯಂ                                        ಹಿಂದೂ
ಕಾಸರಗೋಡು                                       ಹಿಂದೂ
ಪತ್ತನಂತಿಟ್ಟ                                         ಹಿಂದೂ
ಇಡುಕ್ಕಿ                                               ಹಿಂದೂ
ವಯನಾಡ್                                          ಹಿಂದೂ

ನೀವು ನೋಡಿದ ಹಾಗೆ ಮಲಪುರಂನಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಮಲಬಾರ್ ಜಿಲ್ಲೆಯನ್ನ ಮುಸ್ಲಿಮರ ರಾಜ್ಯವನ್ನಾಗಿ ಮಾಡಿ ಅಂತ ಸುನ್ನಿ ಸಂಘದ ಮುಖ್ಯಸ್ಥರು ಪ್ರತಿಭಟನೆಯನ್ನು ಮಾಡಿದ್ದಾರೆ. ಮಲ್ಲಪುರಂನಲ್ಲಿ ಮುಸ್ಲಿಮರ ಸಂಖ್ಯೆ..

ಜನಸಂಖ್ಯೆ     – 4,112,920
ಹಿಂದೂ        -27.60 %
ಮುಸ್ಲಿಂ        -70.24 %
ಕ್ರಿಶ್ಚಿಯನ್     -1.98 %

ಹೀಗಾಗಿ ಮಲಬಾರ್ ಅನ್ನುವುದು ಕಾಶ್ಮೀರದ ತರ ಮತ್ತೊಂದು ಮುಸ್ಲಿಮರೇ ಹೆಚ್ಚಿರುವ ರಾಜ್ಯವಾಗಿ ಬದಲಾಗುವ ಸಾಧ್ಯತೆ ಇದೆ. ಹಾಗಂತ ಈ ಹಿಂದೆ ಇಲ್ಲಿ ಮಲಬಾರ್ ರಾಜ್ಯ ಅನ್ನೋದು ಇರ್ಲಿಲ್ವ ಅಂತ ನೋಡೋದಾದ್ರೆ ಖಂಡಿತ ಇತ್ತು. 1956 ರಲ್ಲಿ ಮಲಬಾರ್ ಅನ್ನು ಪ್ರದೇಶ ಇತ್ತು ಅದರಲ್ಲಿ ಕಾಸರಗೋಡು, ಕನ್ನೂರು, ಮಲಪುರಂ, ಪಾಲಕ್‍ಕಾಡ್ ಅದರ ಜೊತೆ ತ್ರಿಶೂಲಂ, ಎರ್ನಾಕುಲಂ ಕೂಡ ಸೇರಿತ್ತು. ಆದರೆ ಕಾಸರಗೋಡ್ ಆಗ ದಕ್ಷಿಣ ಕನ್ನಡಕ್ಕೆ ಸೇರ್ಕೊಂಡಿತ್ತು.

ಇನ್ನು ಮಲಬಾರ್ ಇತಿಹಾಸವನ್ನು ಕೆದಕೊದಾದ್ರೆ .. ಮಾಗಧದ ಚಕ್ರವರ್ತಿ ಅಶೋಕನಿಂದ ಕ್ರಿಸ್ತಪೂರ್ವ 3ನೇ ಶತಮಾನದ ಬಂಡೆಯ ಶಾಸನದಲ್ಲಿ ಕೇರಳ ಎಂಬ ಪದವನ್ನು ಮೊದಲ ಬಾರಿಗೆ ಕೆಟಾಲಪುಟೊ (ಚೇರರು) ಎಂದು ದಾಖಲಿಸಲಾಗಿದೆ. ಅಶೋಕನ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ನಾಲ್ಕು ಸ್ವತಂತ್ರ ರಾಜ್ಯಗಳಲ್ಲಿ ಒಂದೆಂದು ಇದನ್ನು ಉಲ್ಲೇಖಿಸಲಾಗಿದೆ. ಚೋಳರು, ಪಾಂಡ್ಯರು ಮತ್ತು ಸತ್ಯಪುತ್ರರು. ಚೇರರು ಅರೇಬಿಯನ್ ಸಮುದ್ರದಾದ್ಯಂತ ಎಲ್ಲಾ ಪ್ರಮುಖ ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರದ ಬಂದರುಗಳು ಮತ್ತು ದೂರದ ಪೂರ್ವದ ಬಂದರುಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಸ್ಥಾಪಿಸುವ ಮೂಲಕ ಕೇರಳವನ್ನು ಅಂತರರಾಷ್ಟ್ರೀಯ ವ್ಯಾಪಾರ ಕೇಂದ್ರವಾಗಿ ಪರಿವರ್ತಿಸಿದರು. ಚೇರರ ಪ್ರಾಬಲ್ಯವು ಪ್ರಾಚೀನ ಹಿಂದೂ ಮಹಾಸಾಗರದ ವ್ಯಾಪಾರದ ಪ್ರಮುಖ ಮಾರ್ಗಗಳಲ್ಲಿ ಒಂದಾಗಿತ್ತು. ನೆರೆಯ ಚೋಳರು ಮತ್ತು ರಾಷ್ಟ್ರಕೂಟರಿಂದ ಪುನರಾವರ್ತಿತ ದಾಳಿಯ ನಂತರ ಆರಂಭಿಕ ಚೇರರು ಕುಸಿದರು.

ಆರಂಭಿಕ ಮಧ್ಯಯುಗದಲ್ಲಿ, ನಂಬೂದಿರಿ ಬ್ರಾಹ್ಮಣ ವಲಸಿಗರು ಕೇರಳಕ್ಕೆ ಆಗಮಿಸಿದರು ಮತ್ತು ಸಮಾಜವನ್ನು ಜಾತಿ ವ್ಯವಸ್ಥೆಯ ಸಾಲಿನಲ್ಲಿ ರೂಪಿಸಿದರು. 8ನೇ ಶತಮಾನದಲ್ಲಿ, ಆದಿ ಶಂಕರರು ಮಧ್ಯ ಕೇರಳದ ಕಾಲಡಿಯಲ್ಲಿ ಜನಿಸಿದರು. ಅವರು ಅದ್ವೈತ ವೇದಾಂತದ ವ್ಯಾಪಕವಾಗಿ ಪ್ರಭಾವಶಾಲಿ ತತ್ವಶಾಸ್ತ್ರದ ಸ್ಥಾಪನೆಯ ಸಂಸ್ಥೆಗಳನ್ನು ಭಾರತೀಯ ಉಪಖಂಡದಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿದರು. 12 ನೇ ಶತಮಾನದಲ್ಲಿ ರಾಜ್ಯವನ್ನು ವಿಸರ್ಜಿಸುವವರೆಗೂ 9ನೇ ಶತಮಾನದಲ್ಲಿ ಚೇರರು ಕೇರಳದ ಮೇಲೆ ಹಿಡಿತ ಸಾಧಿಸಿದರು.ನಂತರ ಸಣ್ಣ ಸ್ವಾಯತ್ತ ಮುಖ್ಯಸ್ಥರು, ವಿಶೇಷವಾಗಿ ಕೋಝಿಕ್ಕೋಡ್ ಸಾಮ್ರಾಜ್ಯವು ಹುಟ್ಟಿಕೊಂಡಿತು. ಇನ್ನು ಅದಾದ ನಂತರ ಬ್ರಿಟಿಷರು ನಮ್ಮ ಭಾರತಕ್ಕೆ ಬಂದರು. ತಮ್ಮ ಆಡಳಿತವನ್ನು ಭಾರತೀಯರ ಮೇಲೆ ಹೇರಲು ಆರಂಭ ಮಾಡಿದ್ರು. ಈ ಮಲಬಾರ್ ಕರಾವಳಿಯ ಭಾಗವಾಗಿರುವುದರಿಂದ ಮಲಬಾರ್ ಇಂದಲೇ ಮಸಾಲೆ ಪದಾರ್ಥಗಳನ್ನು ಅವರ ದೇಶಕ್ಕೆ ಸಾಗಿಸುತ್ತಿದ್ದರು ಇನ್ನೊಂದು ವಿಶೇಷ ಏನೆಂದರೆ ಬ್ರಿಟಿಷರ ಕಾಲದಲ್ಲಿ ಮಲಬಾರ್ ಅನ್ನು ಭಾರತದ ಮಸಾಲೆ ಉದ್ಯಾನ ಅಂತ ಕರೆಯಲಾಗುತ್ತಿತ್ತು ಅಂದರೆ ಅಲ್ಲಿಂದ ಮಸಾಲೆ ಪದಾರ್ಥವನ್ನು ರಫ್ತ ಮಾಡ್ತಾ ಇದ್ರು.

ಭಾರತದ ಸ್ವಾತಂತ್ರ್ಯದೊಂದಿಗೆ, ಮದ್ರಾಸ್ ಪ್ರೆಸಿಡೆನ್ಸಿಯು ಮದ್ರಾಸ್ ರಾಜ್ಯವಾಯಿತು. ಇದನ್ನು 1 ನವೆಂಬರ್ 1956 ರಂದು ಭಾಷಾವಾರು ರೇಖೆಗಳಲ್ಲಿ ವಿಭಜಿಸಲಾಯಿತು. ನಂತರ ಕಾಸರಗೋಡು ಪ್ರದೇಶವು ಉತ್ತರಕ್ಕೆ ತಕ್ಷಣವೇ ಮಲಬಾರ್ ಮತ್ತು ದಕ್ಷಿಣಕ್ಕೆ ತಿರುವಾಂಕೂರ್-ಕೊಚ್ಚಿನ್ ರಾಜ್ಯವನ್ನು ಕೇರಳ ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. ಅದಕ್ಕೂ ಮೊದಲು ಕಾಸರಗೋಡು ಮದ್ರಾಸ್ ಪ್ರೆಸಿಡೆನ್ಸಿಯ ದಕ್ಷಿಣ ಕೆನರಾ ಜಿಲ್ಲೆಯ ಭಾಗವಾಗಿತ್ತು. ಹೊಸ ಕೇಂದ್ರಾಡಳಿತ ಪ್ರದೇಶವನ್ನು ರೂಪಿಸಲು ಲಕ್ಷದ್ವೀಪ ದ್ವೀಪಗಳನ್ನು ಪ್ರತ್ಯೇಕಿಸಲಾಯಿತು.
ಈ ಮಲಬಾರ್ ಪ್ರದೇಶ 1956 ರಲ್ಲಿ ಕೇರಳಕ್ಕೆ ಸೇರಿಕೊಳ್ತು, ಅದೇ ದಿನವೇ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಸರಗೋಡನ್ನು ಬೇರ್ಪಡಿಸಿ ಅದನ್ನು ಕೂಡ ಕೇರಳದ ಪಾಲು ಮಾಡಲಾಯಿತು. ಹೀಗೆ ರಾಜ್ಯಗಳ ಪುನರ್ ವಿಂಗಡಣೆಯ ಸಮಯದಲ್ಲಿ ಮಾಲಿಯಾಳಮ್ ಭಾಷೆ ಮಾತನಾಡುವ ಮಲಬಾರ್ ಪ್ರದೇಶದಲ್ಲಿ ಈಗ ಪ್ರತ್ಯೇಕತೆಯ ಕೂಗು ಎದ್ದಿದೆ.

ನಿಮಗೆ ಈ ವಿಚಾರ ಗೊತ್ತಿರಲಿ ಪಿಎಫ್​ಐ ನಂತಹ ಸಂಘಟನೆಗಳು ಹೆಚ್ಚು ಬಲ ಪಡೆದಿದ್ದು ಇದೇ ಮಲಬಾರ್​ನಲ್ಲಿ. ಇವತ್ತು ಕೇರಳದಲ್ಲಿ ಲವ್ ಜಿಹಾದ್​ಗಳು ಹೆಚ್ಚಾಗ್ತಾ ಇರುವುದು ಕೂಡ ಮಲಬಾರ್ ಪ್ರದೇಶದಲ್ಲೇ.. ಇನ್ನು ಕೇರಳ ಇರೋದೇ 3863 ಚದರ್ ಕಿಲೋಮೀಟರ್… ಜನಸಾಂದ್ರತೆಯ ಲೆಕ್ಕದಲ್ಲಿ ಭಾರತದ ರಾಜ್ಯವನ್ನು ತೆಗೆದುಕೊಂಡು ಮೂರನೇ ಸ್ಥಾನದಲ್ಲಿ ಕೇರಳ ಇದೆ. ಇನ್ನೂ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಪ್ರಕಾರ ಭಾರತದ ಭದ್ರತೆಗೆ ಅಪಾಯವನ್ನುಂಟು ಮಾಡುವ ಅಹಿತಕರ ಘಟನೆಗಳು ಕೇರಳದಲ್ಲಿ ನಡೆದಿದೆ ಅಂತ ಹೇಳಲಾಗುತ್ತಿದೆ. ಇಲ್ಲಿನ ಕೆಲವರಿಗೆ ವಿದೇಶದಲ್ಲಿರುವಂತಹ ಭಯೋತ್ಪಾದಕ ಸಂಘಟನೆಯ ಜೊತೆ ನಂಟು ಕೂಡ ಇದೆ ಎನ್ನಲಾಗತ್ತೆ. ಕೇರಳ ಅನ್ನೋದು ಒಟ್ಟಾಗಿರುವಾಗಲೇ ಈ ಪಚಿತಿ ಇನ್ನು ಮಲಬಾರ್ ಏನಾದ್ರೂ ಪ್ರತ್ಯೇಕ ರಾಜ್ಯವಾದರೆ ಯಾವೆಲ್ಲಾ ಸಮಸ್ಯೆಗಳು ಹುಟ್ಟುಕೊಳ್ಳಬಹುದು ನೀವೇ ಯೋಚನೆ ಮಾಡಿ…

- Advertisement -

Latest Posts

Don't Miss