Sunday, December 22, 2024

Latest Posts

ರೇಣುಕಾಸ್ವಾಮಿ ಕೊ*ಲೆ ಕೇಸ್- ಚಾರ್ಜ್​ಶೀಟ್ ಸಲ್ಲಿಸಲು ಪೊಲೀಸರ ತಯಾರಿ

- Advertisement -

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿರುವ ನಟ ದರ್ಶನ್ ಸೇರಿ ೧೭ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಮೊಬೈಲ್‌ಗಳ ಡಾಟಾ ರಿಟ್ರೀವ್ ನಡೆಸುತ್ತಿರುವ ಪೊಲೀಸರು, ಅದಷ್ಟು ಶೀಘ್ರ ಚಾರ್ಜ್ ಶೀಟ್ ಸಲ್ಲಿಸಲು ತಯಾರಿ ಕೈಗೊಂಡಿದ್ದಾರೆ.

ಸಿಐಡಿ ಟೆಕ್ನಿಕಲ್ ಸೆಲ್ ನಲ್ಲಿ ಡಿಜಿಟಲ್ ಸಾಕ್ಷ್ಯಗಳ ಸಂಗ್ರಹ ಕಾರ್ಯ ನಡೆಯುತ್ತಿದೆ. ದರ್ಶನ್, ಪವಿತ್ರಾ, ಪವನ್ ಮತ್ತು ವಿನಯ್ ಮೊಬೈಲ್ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ಮೊಬೈಲ್ ಡಾಟಾ ರಿಟ್ರೀವ್ ನಡೆಯುತ್ತಿದೆ. ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಸಹ ಮಹತ್ವದ ಕಾರ್ಯ ನಿರ್ವಹಿಸಲಿದ್ದು,ಅದರ ಸಂಗ್ರಹ ಕಾರ್ಯವನ್ನೂ ಸಹ ಪೊಲೀಸರು ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬರೋಬ್ಬರಿ ೬೨ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ.

ಕರಣದಲ್ಲಿ ಆರೋಪಿಗಳ ಬಂಧನ ವೇಳೆ ಸಾಕಷ್ಟು ಒತ್ತಡಗಳಿದ್ದವು, ಹಾಗೆಯೇ ತನಿಖೆ ಸಮಯದಲ್ಲಿಯೂ ಸಾಕಷ್ಟು ಒತ್ತಡಗಳು ಬಂದಿದ್ದವು. ಇದನ್ನೆಲ್ಲ ಪರಿಗಣಿಸಿ ಆದಷ್ಟು ತ್ವರಿತವಾಗಿ ಜಾರ್ಜ್ ಶೀಟ್ ಅನ್ನು ಬೇಗನೆ ಹಾಕಲು ಸಿದ್ಧತೆ ನಡೆಸಲಾಗಿದೆ. ಚಾರ್ಜ್ ಶೀಟ್ ಸಲ್ಲಿಸಲು ತಡ ಮಾಡಿದರೆ ಸಾಕ್ಷ್ಯಗಳ ಮೇಲೆ ಆರೋಪಿಗಳು ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -

Latest Posts

Don't Miss