Thursday, April 24, 2025

Latest Posts

Darshan case : ಪರಪ್ಪನ ಅಗ್ರಹಾರದಲ್ಲಿ ಒಂದು ದಿನ ಕಳೆದ ಪವಿತ್ರಾ ; ಹೈಫೈ ಲೈಫ್ ಲೀಡ್ ಮಾಡಿದ್ದ ಪವಿತ್ರ ಈಗ ಜೈಲು ಹಕ್ಕಿ

- Advertisement -

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಸೇರಿದಂತೆ 11 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಇಂದು ಜೈಲಾಧಿಕಾರಿಗಳು ಪವಿತ್ರಾ ಗೌಡಗೆ ವಿಚಾರಣಾಧೀನ ಕೈದಿ ನಂಬರ್‌ವನ್ನು ನೀಡಿದ್ದಾರೆ. ಪವಿತ್ರಾ ಗೌಡ ವಿಚಾರಣಾಧೀನ ಕೈದಿ ನಂಬರ್ 6024 ಆಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರಾ ಅವರು ಮಹಿಳಾ ವಿಭಾಗದ ಡಿ ಬ್ಯಾರಕ್​ನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಮೊದಲ ದಿನವಾದ ಗುರುವಾರ ರಾತ್ರಿ ಸರಿಯಾಗಿ ಊಟ ಮಾಡದೇ, ರಾತ್ರಿಯಲ್ಲಿ ನಿದ್ರೆ ಕೂಡ ಮಾಡದೆ ಚಡಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ 5 ಗಂಟೆಗೆ ಎದ್ದಿರುವ ಅವರು ಜೈಲಿನ ಸಿಬ್ಬಂದಿ ನೀಡಿದ ಕಾಫಿ ಕುಡಿದಿದ್ದಾರೆ, ಅಲ್ಲಿಯೇ ವಾಕ್​ ಮಾಡಿದ್ದಾರೆ. ಜೊತೆಗೆ ಜೈಲಿನ ಮೆನುವಿನಂತೆ ಉಪ್ಪಿಟ್ಟು ಸವಿದಿದ್ದಾರೆ. ಬಳಿಕ ಮಹಿಳಾ ವಿಭಾಗದ ಕೊಠಡಿಯಲ್ಲಿ ಪವಿತ್ರಾ ಮೌನಕ್ಕೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ
ಇನ್ನೂ ಪವಿತ್ರಾ ಗೌಡ ಸೇರಿದಂತೆ ಇನ್ನಿತರ ಆರೋಪಿಗಳಾದ ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ್ ,ರವಿ ಕಾರ್ತಿಕ್‌ ಜೈಲುಪಾಲಾಗಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಡಿ ಗ್ಯಾಂಗ್ ಒಂದು ದಿನ ಕಾಲ ಕಳೆದಿದೆ.
ಇಂದು ಪರಪ್ಪನ ಅಗ್ರಹಾರಕ್ಕೆ ಪವಿತ್ರಾ ಗೌಡ ಕುಟುಂಬಸ್ಥರು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪವಿತ್ರಾ ಗೌಡ ಮಗಳು ಮತ್ತು ತಾಯಿ ಭೇಟಿಯಾಗುವ ಸಾಧ್ಯತೆ ಹೆಚ್ಚಿದೆ.
ನಿನ್ನೆ ಕೋರ್ಟ್​ನಲ್ಲಿ ವಿಚಾರಣೆ ಮುಗಿಸಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರಕ್ಕೆ ಹೊರಡಲು ಪೊಲೀಸ್​ ವ್ಯಾನ್​ ಹತ್ತಿದಾಗ ಅವರನ್ನು ನೋಡಲು ಪುತ್ರಿ ಆಗಮಿಸಿದ್ದರು. ನೂಕುನುಗ್ಗಲಿನ ನಡುವೆ ತಾಯಿ ಜೊತೆ ಮಾತನಾಡಲು ಮಗಳು ಹರಸಾಹಸ ಪಟ್ಟಲು. ಪವಿತ್ರಾ ಗೌಡ ಜೊತೆ ಅವರ ಕುಟುಂಬದ ಇತರೆ ಸದಸ್ಯರು ಕೂಡ ಪೊಲೀಸ್​ ವ್ಯಾನ್ ನ ಪಕ್ಕದಲ್ಲಿ ನಿಂತು ಮಾತನಾಡಿದರು. ಈ ವೇಳೆ . ಅಮ್ಮಾ….. ಬಾ… ಮಾ.. ಮನೆಗೆ ಹೋಗೋಣ… ಅಂತ ಪವಿತ್ರಾ ಗೌಡ ಮಗಳು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಕಲ್ಲು ಮನಸ್ಸನ್ನೂ ಕರಗಿಸುವಂತಿತ್ತು.
ಯಾವುದೇ ವ್ಯಕ್ತಿ ಕೂಡ ಯಾವುದೇ ಪ್ರಕರಣದಲ್ಲಿ ಜೈಲುಪಾಲಾದ್ರೂ ವಿಚಾರಣಾಧೀನ ಕೈದಿ ನಂಬರ್​ ನೀಡಲಾಗುತ್ತೆ.. ಹಾಗೇ ಪವಿತ್ರಾ ಗೌಡಗೇ ಕೂಡ ಕೈದಿ ನಂಬರ್​ 6024 ನೀಡಲಾಗಿದೆ..

- Advertisement -

Latest Posts

Don't Miss