Monday, September 9, 2024

Latest Posts

Renukaswamy Murder Case: ಸ್ವಾಮಿ ಕಿವಿ, ಕೈ ಕಟ್- ‘ಕಾಟೇರ’ ಕ್ರೌಯದ ಅಸಲಿ ಸತ್ಯ!

- Advertisement -

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ಚಂದನ್ ನೇತೃತ್ವದ ತನಿಖಾ ತಂಡ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ಅಂಗಲಾಚುತ್ತಿರುವ ಫೋಟೋಗಳು ಕೂಡ ಒಂದೊಂದಾಗಿ ವೈರಲ್ ಆಗುತ್ತಿವೆ.. ಈ ಒಂದೊಂದು ಫೋಟೋಗಳನ್ನು ನೋಡಿದ್ರೆ ಸಾಕು ಕರುಳು ಚುರಕ್ ಎನ್ನದೇ ಇರಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡು ಅಂತಾ ರೇಣುಕಾಸ್ವಾಮಿ ಅಂಗಲಾಚಿದ್ರೂ ಕೂಡ ದರ್ಶನ್ ಆ್ಯಂಡ್ ಗ್ಯಾಂಗ್ ಮನಬಂದಂತೆ ಹಲ್ಲೆ ನಡೆಸಿದೆ. ತಮ್ಮ ಮಗನ ಕೊನೆಯ ಫೋಟೋಗಳನ್ನು ನೋಡಿರೋ ಪೋಷಕರು, ನಿಜಕ್ಕೂ ಒಮ್ಮೆ ಶಾಕ್ ಆಗಿದ್ದಾರೆ. ಯಾಕಂದ್ರೆ, ಅಷ್ಟರ ಮಟ್ಟಿಗೆ ರಣಭೀಕರವಾಗಿ, ಬೀಭತ್ಸವಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ರು. ಸ್ವಾಮಿ ಕಿವಿಯೇ ಕಟ್ ಆಗಿದೆ. ಕೈಮೇಲೆ ಸುಟ್ಟ ಗುರುತುಗಳು, ಬೆನ್ನಿಗೆ ಮೇಲೆ ಕಟ್ಟಿಯಿಂದ ಥಳಿಸೋದು, ಕೈ ಕಟ್ ಆಗಿದೆ. ಇಂತಹ ಕ್ರೂರತ್ವದ ಫೋಟೋಗಳನ್ನು ಕಂಡು ಸ್ವಾಮಿ ತಂದೆ-ತಾಯಿ ಹಾಗೂ ಗರ್ಭಿಣಿ ಪತ್ನ ಆಘಾತಗೊಂಡಿದ್ದಾರೆ.


ಯಾವೊಬ್ಬ ಪೋಷಕರಿಗೂ ಕೂಡ ಇಂತಹ ಸ್ಥಿತಿ ಬರಬಾರದು. ವೃದ್ಧಾಪ್ಯದ ವೇಳೆ ನಮ್ಮನ್ನು ನೋಡಿಕೊಳ್ಳಲು ಮಕ್ಕಳು ಇರಬೇಕು ಅಂತಾರೆ. ಆದ್ರೆ, ರೇಣುಕಾಸ್ವಾಮಿ ತಂದೆ-ತಾಯಿ, ಮಗನ ಕೊಲೆಯ ವಿಚಾರದಲ್ಲಿ ಪ್ರತಿಕ್ಷಣವೂ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ತಂದೆ-ತಾಯಿಯನ್ನು ನೋಡಿಕೊಳ್ಳಬೇಕಾದ ರೇಣುಕಾಸ್ವಾಮಿಯನ್ನು ಡಿ ಗ್ಯಾಂಗ್, ಕೊಂದು ಹಾಕಿದೆ. ಗರ್ಭಿಣಿಯಾಗಿರುವ ಸ್ವಾಮಿ ಪತ್ನಿ, ಮುಂದೆ ಹುಟ್ಟುವ ಮಗುವಿಗೆ ಏನೆಂದು ಉತ್ತರ ಕೊಡಬೇಕು ಅಂತಾ ಗೋಳಾಡುತ್ತಿದ್ದಾರೆ. ಇಂತಹ ಅದ್ರಲ್ಲೂ ಚಾರ್ಜ್ ಶೀಟ್ ಬಳಿಕ ವೈರಲ್ ಆಗುತ್ತಿರೋ ಫೋಟೋಗಳನ್ನು ಕಂಡು ಸ್ವಾಮಿ ಕುಟುಂಬ ನಿಜಕ್ಕೂ ಕಂಗಾಲಾಗಿದೆ. ಡಿ ಗ್ಯಾಂಗ್ ಮನುಷ್ಯರೋ, ದನಗಳೋ ಅಥವಾ ರಾಕ್ಷಸರೋ ಅಂತಾ ರೇಣುಕಾಸ್ವಾಮಿ ತಂದೆ ಆಕ್ರೋಶ ಹೊರಹಾಕಿದ್ದಾರೆ.
ಇದುವರೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 10 ಫೋಟೋಗಳು ಬಿಡುಗಡೆಯಾಗಿವೆ. ಕುಟುಂಬದವರನ್ನು ಈ ಫೋಟೋಗಳು ಸಾಕಷ್ಟು ಕಾಡುತ್ತಿವೆ. ಈ ಬಗ್ಗೆ ರೇಣುಕಾ ಸ್ವಾಮಿ ತಂದೆ ಕಾಶೀನಾಥಯ್ಯ ಮಾತನಾಡಿದ್ದಾರೆ. ನನ್ನ ಮಗನ ಯಾತನೆಯನ್ನು ನೋಡಿ ತಡೆದುಕೊಳ್ಳಲಾಗುತ್ತಿಲ್ಲ. ನನ್ನ ಪುತ್ರನಿಗೆ ಆದ ಪರಿಸ್ಥಿತಿ ಆರೋಪಿಗಳಿಗೂ ಆಗಬೇಕು. ಅಲ್ಲಿದ್ದವರಲ್ಲಿ ಒಬ್ಬರಿಗಾದರೂ ಮನುಷ್ಯತ್ವ ಇಲ್ಲವೇ? ನಮ್ಮ ಆರೋಗ್ಯ ದಿನ ಕಳೆದಂತೆ ಕ್ಷೀಣಿಸುತ್ತಿದೆ ಎಂದು ಹೇಳಿದ್ದಾರೆ.
ಸಿನಿಮಾ ಸ್ಟೈಲ್​ನಲ್ಲಿ ಎತ್ತಿ ಬಿಸಾಡಿದ ಕೀಚಕರು!
ಚಿತ್ರದುರ್ಗದ ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋ ಮಾತ್ರವಲ್ಲದೆ ಅವರು ಶವವಾಗಿ ಬಿದ್ದ ಫೋಟೋಗಳು ವೈರಲ್ ಆಗಿವೆ. ಡಿಲೀಟ್ ಆಗಿದ್ದ ಫೋಟೋಗಳನ್ನು ಎಫ್​ಎಸ್​ಎಲ್ ತಂಡ ರಿಟ್ರೀವ್ ಮಾಡಿದೆ. ಇದ್ರಲ್ಲಿ ರೇಣುಕಾಸ್ವಾಮಿಗೆ ಹಿಂದೆ ಕೊಟ್ಟಿದ್ದು ಯಾರು? ಆ ವೇಳೆ ಫೋಟೋ ಕ್ಲಿಕ್ ಮಾಡಿದ್ದು ಯಾರು? ಈ ಫೋಟೋಗಳನ್ನು ನಟ ದರ್ಶನ್​ಗೆ ಕಳುಹಿಸಿದ್ದು ಯಾರು? ಎಂಬುದರ ಕುರಿತು ಕುತೂಹಲಕಾರಿ ಸಂಗತಿಗಳು ಬಹಿರಂಗಗೊಂಡಿವೆ.


ಪಟ್ಟಣಗೆರೆ ಶೆಡ್​ನಲ್ಲಿ ಡಿ ಗ್ಯಾಂಗ್ ಹಲ್ಲೆ ಮಾಡುವಾಗ ರೇಣುಕಾಸ್ವಾಮಿ ಕಿರುಚಾಡಿದ್ದನಂತೆ. ಆದ್ರೂ ಅಟ್ಟಹಾಸ ಮೆರೆದಿದ್ದ ಆರೋಪಿ, ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಶೆಡ್​ನ ಗೇಟ್ ಹೊರಗಿದ್ದ ಸೆಕ್ಯೂರಿಟಿ ಗಾರ್ಡ್ ಒಳಗೆ ಬಂದಿದ್ದಾರೆ. ಸ್ವಾಮಿ ಮೇಲೆ ಹಲ್ಲೆ ಮಾಡಿದ್ದನ್ನ ಸೆಕ್ಯೂರಿಟಿ ಗಾರ್ಡ್ ಕಣ್ಣಾರೆ ಕಂಡಿದ್ದಾರೆ. ಬಳಿಕ ತಕ್ಷಣ ಆರೋಪಿ ವಿನಯ್​ಗೆ ತಿಳಿಸಿದ್ದರಂತೆ. ಈ ವೇಳೆ ವಿನಯ್, ಅವರೆಲ್ಲಾ ನಮ್ಮವರೇ ಬಿಡು ಎಂದು ಸೆಕ್ಯೂರಿಟಿ ಗಾರ್ಡ್​ಗೆ ಹೇಳಿದ್ದರಂತೆ. ನಂತರ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸ್ತಿರೋ ಫೋಟೋಗಳನ್ನು ಕಳುಹಿಸುವಂತೆ ವಿನಯ್ ತಿಳಿಸಿದ್ದ. ಆಗ ಸೆಕ್ಯೂರಿಟಿ ಗಾರ್ಡ್ ಫೋಟೋ ತೆಗೆದು ವಿನಯ್​ಗೆ ಕಳುಹಿಸಿದ್ದಾನೆ. ವಿನಯ್ ಆ ಫೋಟೋಗಳನ್ನು ನಟ ದರ್ಶನ್​ಗೆ ತೋರಿಸಿದ್ದಾನೆ. ಫೋಟೋಸ್ ನೋಡಿದ ನಂತರ ದರ್ಶನ್, ಪವಿತ್ರಾಗೌಡ ಜೊತೆ ಶೆಡ್ ಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಕಾರ್ಪಿಯೋ ಕಾರಿನಲ್ಲಿ ಶೆಡ್​ಗೆ ಡಿಬಾಸ್ ಎಂಟ್ರಿ!
ಶೆಡ್‌ಗೆ ದರ್ಶನ್‌ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದರು ಎನ್ನುವ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಇನ್ನೂ, ಶೆಡ್​ಗೆ ಬರ್ತಿದ್ದಂತೆ ಸ್ವಾಮಿ ಮೇಲೆ ದರ್ಶನ್ ಏಕಾಏಕಿ ದಾಳಿ ಮಾಡಿದ್ದಾರೆ. ಕೆಳಗೆ ಬಿದ್ದವನನ್ನ ಎಳೆದು ಹೊಡೆದು ಬನಿಯನ್ ಹರಿದುಹಾಕಿದ್ದಾರೆ. ರೇಣುಕಾಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಸಿನಿಮಾ ರೀತಿಯಲ್ಲಿ ಎತ್ತಿ ಬಿಸಾಡಿ ತುಳಿದಿದ್ದಾರೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಮುಖಕ್ಕೆ ಶೂ ಕಾಲಿನಿಂದ ಒದ್ದಿದ್ದಾರೆ ಎನ್ನಲಾಗಿದೆ.
ಒಟ್ನಲ್ಲಿ ದರ್ಶನ್ ಕೊಲೆ ನಡೆದ ಸ್ಥಳದಲ್ಲಿ ಇರುವುದು ಹಾಗೂ ಕೊಲೆ ಬಳಿಕ ಸ್ಥಳದಿಂದ ಹೋಗಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆ ಆಗಿದ್ದು, ಇದಕ್ಕೆ ಸಾಕ್ಷ್ಯಗಳು ಕೂಡ ಸಿಕ್ಕಿವೆ. ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾದ್ದಾರೆ ಎನ್ನುವ ವಿಚಾರ ಚಾರ್ಜ್ ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ. ಆದ್ರೆ ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೇ, ರೇಣುಕಾಸ್ವಾಮಿ ಹಾಗೂ ಡಿ ಗ್ಯಾಂಗ್ ಜಗಳದಲ್ಲಿ ಸ್ವಾಮಿಯ ಪೋಷಕರು, ಪತ್ನಿ ಅನಾಥರಾಗಿದ್ದಾರೆ.

- Advertisement -

Latest Posts

Don't Miss