Hubli News: ಹುಬ್ಬಳ್ಳಿ: ಪೊಲೀಸ್ ಸಿಬ್ಬಂದಿಯೊಬ್ಬರ ಬೈಕ್ ನಲ್ಲಿ ಅವಿತುಕೊಂಡು ಕುಳಿತಿದ್ದ ಕೆರೆ ಹಾವನ್ನು ರಕ್ಷಣೆ ಮಾಡುವಲ್ಲಿ ಹಾಗೂ ಜನರ ಆತಂಕವನ್ನು ದೂರ ಮಾಡುವಲ್ಲಿ ಉರಗ ತಜ್ಞ ಸ್ನೇಕ್ ನಾಗರಾಜ ಯಶಸ್ವಿಯಾಗಿದ್ದಾರೆ.
ಅಮರಗೋಳ ಅಶ್ವಮೇಧ ಪಾರ್ಕ್ ನಲ್ಲಿರುವ ಪೋಲಿಸ್ ಸಿಬ್ಬಂದಿಯೊಬ್ಬರ ಬೈಕಿನಲ್ಲಿ ಅವಿತುಕೊಂಡಿದ್ದ ಕೆರೆ ಹಾವನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಸ್ಥಳೀಯರಿಗೆ ಹಾವಿನ ಬಗ್ಗೆ ಹಾಗೂ ಹಾವನ್ನು ರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಿದರು.
ಇನ್ನೂ ಬೈಕ್ ಹಾಗೂ ಮನೆಯ ಮುಂದೆ ಬಿಟ್ಟಿರುವ ಶೂಗಳಲ್ಲಿ ಹಾವುಗಳು ಅವಿತುಕೊಂಡು ಕುಳಿತಿರುವ ಅದೆಷ್ಟೋ ಪ್ರಕರಣ ಬೆಳಕಿಗೆ ಬಂದಿದ್ದು, ಜನರು ಎಚ್ಚರಿಕೆ ವಹಿಸಬೇಕಿದೆ.




