www.karnatakatv.net :ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಗದ್ದುಗೆ ಹಿಡಿಯಲು ಹೊರಟಿರೋ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಮೀಸಲಾತಿಯಿಂದಾಗಿ ಸಮಸ್ಯೆ ಎದುರಾಗಿರೋ ಹಿನ್ನೆಲೆಯಲ್ಲಿ ಮೇಯರ್ ಸ್ಥಾನ ಪಡೆದುಕೊಳ್ಳುವ ಬಿಜೆಪಿಗೆ ಉಪಮೇಯರ್ ಸ್ಥಾನ ಮಾತ್ರ ಪಡೆಯಲು ಸಾಧ್ಯವಾಗುತ್ತಿಲ್ಲ.
ಹೌದು, ಬಿಜೆಪಿಯಲ್ಲಿ ಉಪ ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯೇ ಇಲ್ಲದಂತಾಗಿದೆ. ಯಾಕಂದ್ರೆ ಅವಳಿ ನಗರದ ಪಾಲಿಕೆಯ ಉಪಮೇಯರ್ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿಯಲ್ಲಿ ಚುನಾಯಿತ ಎಸ್‌ಸಿ ಮಹಿಳಾ ಅಭ್ಯರ್ಥಿಯೇ ಇಲ್ಲದಂತಾಗಿರೋದು ಈಗ ಮತ್ತೊಂದು ತಲೆ ನೋವು ತಂದಿಟ್ಟಿದೆ. ಇನ್ನು ಬಿಜೆಪಿಯಿಂದ ಪಾಲಿಕೆ ಚುನಾವಣೆಯಲ್ಲಿ ಗೆದ್ದಿರುವ ಒಟ್ಟು 39 ಸದಸ್ಯರಲ್ಲಿ ಒಬ್ಬರು ಕೂಡ ಎಸ್ಸಿ ಮಹಿಳಾ ಅಭ್ಯರ್ಥಿಗಳಿಲ್ಲ. ಹೀಗಾಗೇ 6 ಮಂದಿ ಜನಪ್ರತಿನಿಧಿಗಳ ಮತಗಳಿಂದ ಅಧಿಕಾರದಿಂದ ಗದ್ದುಗೆ ಹಿಡಿಯಲು ಹೊರಟಿದ್ದ ಬಿಜೆಪಿ ಉಪಮೇಯರ್ ಸ್ಥಾನಕ್ಕೆ ಸಂಕಷ್ಟವುಂಟಾಗಿದೆ.
ಇನ್ನೂ ಸದ್ಯ ಮಹಿಳಾ ಅಭ್ಯರ್ಥಿ ಇಲ್ಲದಿರುವ ಹಿನ್ನಲೆ ಕಾಂಗ್ರೆಸ್ ಬಂಡಾಯ ಅಥವಾ ಪಕ್ಷೇತರ ಅಭ್ಯರ್ಥಿ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಎಸ್‌ಸಿ ಮಹಿಳಾ ಮೀಸಲು ಕ್ಷೇತ್ರದಿಂದ ಇಬ್ಬರು ಪಕ್ಷೇತರ ಮಹಿಳಾ ಅಭ್ಯರ್ಥಿ ಗೆಲುವು ಹಿನ್ನಲೆಯಲ್ಲಿ ಅವರ ಬೆಂಬಲ ತೆಗೆದುಕೊಳ್ಳುವ ಅನಿವಾರ್ಯತೆ ಇದೆ. ಅಲ್ಲದೇ ಉಪಮೇಯರ್ ಸ್ಥಾನ ಬಿಟ್ಟು ಕೊಡಬೇಕಾದ ಅನಿವಾರ್ಯತೆಗೆ ಬಿಜೆಪಿ ನಾಯಕರು ಸಿಲುಕಿದ್ದಾರೆ. ಆದರೆ ಇದಕ್ಕಾಗಿ ಇಬ್ಬರನ್ನೂ ಕಾಂಗ್ರೆಸ್ ಸೆಳೆದರೆ ಹೊಸದೊಂದು ತಲೆ ನೋವು ಸೃಷ್ಟಿಯಾಗುವುದಂತೂ ಸತ್ಯ. ಸರಳವಾಗಿ ಗದ್ದುಗೆ ಏರಲು ಹೊರಟ ಬಿಜೆಪಿಗೆ ಮತ್ತೊಂದು ವಿಘ್ನ ಎದುರಾದಂತಾಗಿದೆ.
ಕರ್ನಾಟಕ ಟಿವಿ- ಹುಬ್ಬಳ್ಳಿ