Chatthisghad News: ವಿನೂತನ ಪ್ರತಿಭಟನೆಯಿಂದ ಯುವ ಸಮೂಹವೊಂದು ಛತ್ತೀಸ್ ಘಡ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಮೀಸಲಾತಿ ಅಡಿಯಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ನಕಲಿ ಜಾತಿ ಪ್ರಮಾಣ ನೀಡಲಾಗುತ್ತಿದೆ ಎನ್ನುವ ವಿಚಾರವಾಗಿ ಯುವಜನತೆ 2021 ರಲ್ಲೇ ದೂರು ನೀಡಿದ್ದರೂ ಇದು ವರೆಗೂ ಸರಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈ ವಿಚಾರವಾಗಿ ರೊಚ್ಚಿಗೆದ್ದ ಯುವ ಸಮೂಹ ವಿಧಾನ ಸಭಾ ಅಧಿವೇಶನ ಆರಂಭಗೊಂಡ ನಿಟ್ಟಿನಲ್ಲಿ ಸರ್ಕಾರದ ವಾಹನಗಳು ಸಾಗುತ್ತಿದ್ದ ಸಮಯದಲ್ಲಿ ಬೆತ್ತಲೆ ಪ್ರತಿಭಟನೆಗೆ ಮುಂದಾದರು. ಬೆಂಗಾವಲು ವಾಹನವನ್ನು ಸಾಗಲು ಬಿಡದೆ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಇದರಿಂದ ಛತ್ತೀಸ್ ಘಡ್ ಸರ್ಕಾರಕ್ಕೆ ಮುಜುಗರ ಉಂಟಾಯಿತು.
ನಕಲಿ ಪ್ರಮಾಣ ಪತ್ರ ನೀಡಿ ಕಾರ್ಯ ನಿರ್ವಹಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎನ್ನುವುದು ಇವರ ಬೇಡಿಕೆಯಾಗಿದೆ. ಸದ್ಯ ಪ್ರತಿಭಟನೆ ನಿರತರಾಗಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಅಂತೂ ಈ ವಿಭಿನ್ನ ಪ್ರತಿಭಟನೆ ದೇಶಾದ್ಯಂತ ಸದ್ದು ಮಾಡುತ್ತಿದೆ.
छत्तीसगढ़ में आज विधानसभा सत्र शुरु हुआ है.
जब VVIP विधानसभा जा रहे थे, उसी समय दर्जन भर नौजवान पूरी तरह से नग्न हो कर सड़कों पर आ गए.
इन नौजवानों की माँग थी कि फ़र्ज़ी आरक्षण प्रमाण पत्र के आधार पर नौकरी कर रहे लोगों पर कार्रवाई की जाए. pic.twitter.com/e9gr8GuyXI
— Alok Putul (@thealokputul) July 18, 2023
Narendra Modi : ಪ್ರತಿಪಕ್ಷಗಳ ಸಮ್ಮೇಳನವಲ್ಲ ಅದೊಂದು ಭ್ರಷ್ಟಾಚಾರಿಗಳ ಸಮ್ಮೇಳನ : ನಮೋ
Narendra Modi :ಪ್ರಧಾನಿಯ ಭರವಸೆಯ ಹೊಸ ಕಿರಣ ‘ಸಹಾರಾ ಮರುಪಾವತಿ ಪೋರ್ಟಲ್’ ಯೋಜನೆ ಆರಂಭ