Saturday, July 12, 2025

Latest Posts

ರಾಜ್ಯದ 10 ಪಾಲಿಕೆಗಳ ಮೇಯರ್​, ಉಪಮೇಯರ್​ ಸ್ಥಾನಕ್ಕೆ ಮೀಸಲಾತಿ ಪ್ರಕಟ

- Advertisement -

ಬೆಂಗಳೂರು: ಮುಂದಿನ 24 ತಿಂಗಳ ಅವಧಿಗಾಗಿ ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ಸಂಬಂಧ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಈ ಬಗ್ಗೆ ರಾಜ್ಯ ಸರ್ಕಾರದಿಂದ ವಿಶೇಷ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಮಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ ಸೇರಿದಂತೆ 10 ಮಹಾನಗರ ಪಾಲಿಕೆಗಳ ಮೇಯರ್, ಉಪ ಮೇಯರ್ ಸ್ಥಾನಗಳ ಚುನಾವಣೆ ಸಂಬಂಧ, ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.

ರಾಜ್ಯ ಸರ್ಕಾರ ಪ್ರಕಟಿಸಿದ ಮೀಸಲಾತಿಯಂತೆ ಬಳ್ಳಾರಿ – ಮೇಯರ್- ಬ್ಯಾಕ್ ವರ್ಡ್ ಕ್ಯಾಸ್ ಮಹಿಳೆ, ಉಪ ಮೇಯರ್-ಜನರ್ ಮಹಿಳೆಗೆ ನೀಡಲಾಗಿದೆ. ಬೆಳಗಾವಿ – ಮೇಯರ್ –ಜನರಲ್, ಉಪ ಮೇಯರ್-ಎಸ್ಸಿ ಮಹಿಳೆ, ದಾವಣಗೆರೆ – ಮೇಯರ್ –ಜನರಲ್ ಮಹಿಳೆ, ಉಪ ಮೇಯರ್-ಬ್ಯಾಕ್ವರ್ಡ್ ಕ್ಯಾಸ್ಟ್ ಮಹಿಳೆ, ಹುಬ್ಬಳ್ಳಿ-ಧಾರವಾಡ – ಮೇಯರ್-ಜನರಲ್ ಮಹಿಳೆ, ಉಪ ಮೇಯರ್ – ಜನರಲ್, ಕಲಬುರ್ಗಿ – ಮೇಯರ್-ಎಸ್ಸಿ, ಉಪ ಮೇಯರ್ –ಜನರಲ್ ಗೆ ಮೀಸಲಾತಿ ನೀಡಲಾಗಿದೆ.

ಇನ್ನೂ ಮಂಗಳೂರು – ಮೇಯರ್-ಜನರಲ್, ಉಪ ಮೇಯರ್ –ಜನರಲ್ ಮಹಿಳೆ, ಮೈಸೂರು – ಮೇಯರ್ –ಜನರಲ್, ಉಪ ಮೇಯರ್-ಬ್ಯಾಕ್ವರ್ಡ್ ಕ್ಯಾಸ್ ಮಹಿಳೆ, ಶಿವಮೊಗ್ಗ – ಮೇಯರ್ –ಬಿಸಿಎ, ಉಪ ಮೇಯರ್ – ಜನರಲ್ ಮಹಿಳೆ, ತುಮಕೂರು – ಮೇಯರ್-ಎಸ್ಸಿ ಮಹಿಳೆ, ಉಪ ಮೇಯರ್-ಬಿಸಿಎ ಮತ್ತು ವಿಜಯಪುರ-ಮೇಯರ್ – ಎಸ್ಟಿ, ಉಪ ಮೇಯರ್ -ಬಿಸಿಬಿಗೆ ಮೀಸಲಾತಿ ನಿಗದಿ ಪಡಿಸಲಾಗಿದೆ.

- Advertisement -

Latest Posts

Don't Miss