ದೊಡ್ಡಬಳ್ಳಾಪುರ: ನಿವೃತ್ತ ಡಿವೈಎಸ್ಪಿಯೊಬ್ಬರು ತಮಗೆ ವಂಚಿಸಿದ್ದಾರೆ. ಅವರಿಂದ ನ್ಯಾಯಕೊಡಿಸುವಂತೆ ಆರೋಪಿಸಿ, ಇಡೀ ಕುಟುಂಬಸ್ಥರು ಓವರ್ ಟ್ಯಾಂಕ್ ಮೇಲೆ ಹತ್ತಿ, ಆತ್ಮಹತ್ಯೆಗೆ ಯತ್ನಿಸಿದ ಘಟನೆ, ದೊಡ್ಡಬಳ್ಳಾಪುರದ ಗ್ರೀನ್ ವೇ ಲೇ ಔಟ್ ನಲ್ಲಿ ನಡೆದಿದೆ.
ನಿವೃತ್ತಿ ಡಿವೈಎಸ್ಪಿ ಕೋನಪ್ಪ ರಡ್ಡಿಯಿಂದ ನಮಗೆ ವಂಚನೆಯಾಗಿದೆ. ನ್ಯಾಯ ಕೊಡಿಸೋವರೆಗೆ ಓವರ್ ಟ್ಯಾಂಕ್ ಮೇಲಿನಿಂದ ಕೆಳಗೆ ಇಳಿದು ಬರೋದಿಲ್ಲ. ನ್ಯಾಯ ಸಿಗದೇ ಇದ್ದರೇ ಇಲ್ಲಿಂದ ಕೆಳಗೆ ಹಾರಿ, ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳೋದಾಗಿಬೆಂಗಳೂರು ಗ್ರಾಮಾಂತರ ಜಿಲ್ಲೆಯ
ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರೀನ್ ವೇ ಲೇ ಔಟ್ ನಲ್ಲಿ ಕುಟುಂಬವೊಂದು ಯತ್ನಿಸಿದೆ.
ಈ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಕುಟುಂಬಸ್ಥರನ್ನು ಮನವೊಲಿಸೋದಕ್ಕೆ ಪ್ರಯತ್ನಿಸುತ್ತಿದ್ದಾರೆ. ಓವರ್ ಟ್ಯಾಂಕ್ ಮೇಲಿನಿಂದ ಕೆಳಗೆ ಇಳಿದು ಬಂದು, ಸಮಸ್ಯೆ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಮನವೊಲಿಕೆ ನಡೆಸುತ್ತಿದ್ದಾರೆ.
ವರದಿ: ಅಭಿಜಿತ್, ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ




