Wednesday, August 20, 2025

Latest Posts

ಮೈಸೂರು ವಿವಿಯಲ್ಲಿ ಪಿಂಚಣಿ ಇಲ್ಲದೆ ನಿವೃತ್ತರು ಸಂಕಷ್ಟದಲ್ಲಿ!

- Advertisement -

ಶತಮಾನಗಳಷ್ಟು ಹಳೆಯ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಬೋಧಕ ಮತ್ತು ಬೋಧಕೇತ್ತರ ಸಿಬ್ಬಂದಿ ತಮ್ಮ ಪಿಂಚಣಿ ಪಡೆಯಲು ಹೆಣಗಾಡುತ್ತಿದ್ದಾರೆ. ಈ 1,900 ಪಿಂಚಣಿದಾರರು, ವಿಶ್ವವಿದ್ಯಾಲಯ ಸಂಪರ್ಕಿಸುವುದರ ಜೊತೆಗೆ, ಸರ್ಕಾರಕ್ಕರ ಮಧ್ಯಪ್ರವೇಶಿಸುವಂತೆ ಪತ್ರ ಬರೆದಿದ್ದಾರೆ.

ಇದುವರೆಗೂ ಪಿಂಚಣಿಗಳನ್ನು ನಿಯಮಿತವಾಗಿ ಪಾವತಿಸಲಾಗಿತ್ತು. ಏಪ್ರಿಲ್‌ನಲ್ಲಿ ಒಂದು ವಾರ ವಿಳಂಬವಾಗಿತ್ತು. ಆದರೆ ಆಗಸ್ಟ್‌ 15ರವರೆಗೆ ಹಣ ಪಾವತಿಸಿಲ್ಲ. ರಾಜ್ಯಾದ್ಯಂತದ ವಿಶ್ವವಿದ್ಯಾಲಯಗಳು ಪಿಂಚಣಿ ಪಾವತಿಸಲು ತಮ್ಮದೇ ಆದ ಆದಾಯವನ್ನು ಗಳಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಆದರೆ ಮಂಡ್ಯ ಮತ್ತು ಚಾಮರಾಜನಗರವನ್ನು ಪ್ರತ್ಯೇಕ ವಿಶ್ವವಿದ್ಯಾಲಯಗಳಾಗಿ ವಿಂಗಡಿಸಿದಾಗಿನಿಂದ, ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡುವ ಕಾಲೇಜುಗಳಾಗಿ ವಿಭಜಿಸಲಾಗಿತ್ತು, ಹೀಗಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಸಾಧ್ಯವಾಗಿಲ್ಲ.

ಮೈಸೂರು ವಿಶ್ವವಿದ್ಯಾಲಯವು 2025-26ರ ಬಜೆಟ್ ಅಂದಾಜಿನಲ್ಲಿ, ಸರ್ಕಾರವು ಪಿಂಚಣಿ ಅನುದಾನವಾಗಿ ರೂ 157.54 ಕೋಟಿಗಳ ಬೇಡಿಕೆ ಇಡಲಾಗಿತ್ತು. ಆದರೆ ಸರ್ಕಾರ 60 ಕೋಟಿಗಳನ್ನು ಮಂಜೂರು ಮಾಡಿದೆ ಎಂದು ಹೇಳಿದೆ, ಇದರಿಂದಾಗಿ ವಿವಿಗೆ ದೊಡ್ಡ ಹಣಕಾಸು ಕೊರತೆ ಎದುರಾಗಿದೆ.

ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಗೆ ಬರೆದ ಪತ್ರಕ್ಕೆ ಉತ್ತರಿಸಿರುವ ರಾಜ್ಯ ಸರ್ಕಾರ, ಒಂಬತ್ತು ವಿಶ್ವವಿದ್ಯಾಲಯಗಳಿಗೆ 12.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದೆ, ಅದರಲ್ಲಿ 4.44 ಕೋಟಿ ರೂ.ಗಳು ಮೈಸೂರು ವಿಶ್ವವಿದ್ಯಾಲಯಕ್ಕಾಗಿ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss