crime story
ಮೊಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬುದು ಈ ಕಥೆ ಓದಿದರೆ ತಿಳಿಯುತ್ತದೆ.
ದುಡಿದ ಹಣವೇ ಒಂದೊಂದು ಬಾರಿ ಸರಿಯಾಗಿ ಕೈಗೆ ಹತ್ತುವುದಿಲ್ಲ ಆದರೆ ಯಾವುದೋ ವಸ್ತು ಮನೆಯಲ್ಲಿದ್ದರೆ ಅದೃಷ್ಟ ಬರುತ್ತದೆ. ಎಂಬುವ ಜನರ ಮಾತು ಕೇಳಿ ಮೋಸ ಹೋಗುವ ಜನ ಇದ್ದಾರೆ.ಇದೆ ರೀತಿ ಕೆಲವು ಜನನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡು ವಂಚಿಸಿರುವು ಘಟನೆ ಬಗ್ಗೆ ಹಲಸೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಸ್ ಪುಲ್ಲಿಂಗ್ (ಆರ್ ಪಿ) ಬಗ್ಗೆ ಕೆಲವು ಜನರಿಗೆ ತಿಳಿದಿದೆ ಇನ್ನ ಕೆಲವರಿಗೆ ಗೊತ್ತಿಲ್ಲ.ಈ ಆರ್ಪಿ ಕುರಿತು ತಮಿಳಿನ ಒಂದು ಸಿನಿಮಾದಲ್ಲಿ ತೋರಿಸಿದ್ದಾರೆ. ಆ ಸಿನಿಮಾದಲ್ಲಿಯೂ ಸಹ ಇದೇ ರೀತಿ ಹೇಳಿ ಮೋಸ ಮಾಡುತ್ತಾರೆ. ಈ ಯಂತ್ರವನ್ನು ಮನೆಯಲ್ಲಿಟ್ಟರೆ ಅದೃಷ್ಟ ಲಕ್ಷ್ಮಿ ಮನೆಯಲ್ಲಿ ತಾಂಡವಾಡುತ್ತಾಳೆ. ಈ ಯಂತ್ರಕ್ಕೆ ಬಾಹ್ಯಕಾಶ ಕ್ಷೇತ್ರದಲ್ಲಿ ಬಾರಿ ಬೇಡಿಕೆ ಇದೆ. ಈ ರೀತಿಯ ಕೋಟ್ಯಂಯಾಂತರ ರೂಪಾಯಿ ಬೆಲೆಬಾಳುವ ಯಂತ್ರ ನಮ್ಮ ಬಳಿ ಇದೆ ಎಂದು ಹೇಳಿ ಮಾರಾಟಕ್ಕೆ 8 ಜ ನ ಆರೋಪಿಗಳು ಮುಂದಾಗಿದ್ದಾರೆ .ಹಲಸೂರಿನ ಎಂ ಜಿ ರಸ್ತೆಯ ಬಳಿ ಇರುವ ಒಬೆರಾಯ್ ಹೊಟೇಲ್ ನಲ್ಲಿ ಗಿರಾಕಿಗಳನ್ನು ಕರೆಸಿಕೊಂಡು ಅವರಿಂದ ಹಣ ಪಡೆದುಕೊಂಡು ಯಂತ್ರ ನೀಡದೆ ವಂಚಿಸಿದ್ದಾರೆ. ಇನ್ನ ಈ ದಂದೆಯಲ್ಲಿ 8 ಜನರು ಭಾಗಿಯಾಗಿದ್ದು ಈಗ ಇವರನ್ನು ಅಪರಾಧಿ ಪತ್ತೆ ದಳದ ಪೋಲಿಸರು ಬಂಧಿಸಿದ್ದಾರೆ.ಇನ್ನು ಬಂದಿತರಿಂದ ಬರೋಬ್ಬರಿ 35 ಲಕ್ಷ ರೂ ಪೋಲಿಸರು ವಶಪಡಿಸಿಕೊಂಡಿದ್ದಾರೆ.


