ರಿಂಗ್ ರೋಡ್ ದರೋಡೆ ಕೇಸ್: ಮೂವರು ಆರೋಪಿಗಳ ಬಂಧಿಸುವಲ್ಲಿ ಸಿಪಿಐ ಮುರುಗೇಶ ಚೆನ್ನಣ್ಣವರ್& ಟೀಮ್ ಯಶಸ್ವಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಹೊರವಲಯದ ಕುಸುಗಲ್ ರಿಂಗ್ ರೋಡ್ ಹತ್ತಿರ ಹೊಡೆದು ಹಣ ಮತ್ತು ಮೊಬೈಲ್ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿತರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ರಾಜೀವ್ ನಗರ ಹಾನಗಲ್ ನಿವಾಸಿಯಾದ ವಿನಯ್ ರಾಮಪ್ಪ ಕಟ್ಟಿಮನಿ 24 ವರ್ಷ, ಜಗದೀಶ್ ಕೋಟೆಪ್ಪ ಬಂಡಿವಾಡ (21)ಹೊಸ ಹಂಚಿನಾಳ ಹಾಗೂ ವಿವೇಕಾನಂದ ನಗರ ಹಾನಗಲ್ ನಿವಾಸಿಯಾದ ಗಣೇಶ್ ನಾಗರಾಜ್ ಹೊಂಬರಡಿ (21) ಬಂಧಿತರು. ಇವರಿಂದ ರೆಡ್ಮಿ ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಟಿವಿಎಸ್ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.

ಕಳೆದ ನಾಲ್ಕು ದಿನದ ಹಿಂದೆ 24ರಂದು ರಾತ್ರಿ ಹುಬ್ಬಳ್ಳಿ ಹೊರ ವಲಯದ ಕುಸುಗಲ್ ರಿಂಗ್ ರಸ್ತೆಯಲ್ಲಿ ಬಾಬಾ ಸಾಹೇಬ್ ಜಕಾತಿ ಎಂಬುವವರು ಊರಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕುಸುಗಲ್ ರಿಂಗ್ ರೋಡ್ ರಸ್ತೆ ಬಳಿ ಮೂವರು ಆರೋಪಿತರು ವಾಹನ ಅಡ್ಡಗಟ್ಟಿ ಬೆದರಿಸಿ ಹಲ್ಲೆ ಮಾಡಿ ಹಣ ಮತ್ತು ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಬಾಬಾ ಸಾಹೇಬ್ ದೂರು ದಾಖಲಿಸಿದ್ದರು.

ಆರೋಪಿತರನ್ನು ಪತ್ತೆ ಹಚ್ಚಲು ಸಿಪಿಐ ಮುರುಗೇಶ್ ಚೆನ್ನಣ್ಣವರ್ ಮಾರ್ಗದರ್ಶನದಲ್ಲಿ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ. ಕಾರ್ಯಚರಣೆಯಲ್ಲಿ ಸಿಪಿಐ ಮುರುಗೇಶ್ ಚೆನ್ನಣ್ಣವರ್, ಪಿಎಸ್ಐ, ಸಚಿನ್ ಆಲಮೇಲಕರ್ ಪೊಲೀಸ್‌ ಠಾಣೆ ಸಿಬ್ಬಂದಿ , ಎನ.ಐ. ಹಿರೇಹೋಳಿ, ಎನ್ ಎಂ ಹೊನ್ನಪ್ಪನವರ್, ಎ. ಎ. ಕಾಕರ್ ಚನ್ನಪ್ಪ. ಬಳ್ಳುಳ್ಳಿ, ಮಾಂತೇಶ್ ಮದ್ದಿನ್, ಗಿರೀಶ್ ತಿಪ್ಪಣ್ಣವರ್, ಸಿ ಬಿ ಜನಗಣ್ಣವರ್ ಭಾಗವಹಿಸಿದ್ದರು.

About The Author