‘ಬಿಗ್ ಬಾಸ್’ ಮನೆಯೊಳಗೆ ವೈಲ್ಡ್ ಕಾರ್ಡ್ (Wild Card ) ಎಂಟ್ರಿ ಕೊಟ್ಟ ರಿಷಾ ಗೌಡ ಇದೀಗ ನಿಜವಾಗಿಯೂ ವೈಲ್ಡ್ ಆಗಿದ್ದಾರೆ. ಗಿಲ್ಲಿ(Gilli Nata )ನಟನೊಂದಿಗೆ ರಿಷಾ ಗೌಡ ಜೋರಾಗಿ ಜಗಳ ಮಾಡಿದ್ದು, ಕೋಪದಲ್ಲಿ ಗಿಲ್ಲಿಗೆ ಹೊಡೆದು ತಳ್ಳಿದ್ದಾರೆ. ‘ಬಿಗ್ ಬಾಸ್’ ರೂಲ್ಸ್ ಪ್ರಕಾರ ಯಾರೂ ಯಾರ ಮೇಲೂ ಕೈಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದ ಕಾರಣಕ್ಕೆ ರಿಷಾ ಎಲಿಮಿನೇಟ್ ಆಗ್ತಾರಾ ಎನ್ನುವ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
ʻಬಿಗ್ ಬಾಸ್ʼನಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೂ ಜಗಳ ಆಡೋದು ಕಾಮನ್ ಆಗಿಬಿಟ್ಟಿದೆ. ಅದರಲ್ಲೂ ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಿಷಾ ಗೌಡ ( Risha Gowda) ತಮ್ಮದಲ್ಲದ ವಿಷಯಕ್ಕೆ ಹೆಚ್ಚಾಗಿ ತಲೆ ಹಾಕ್ತಾರೆ ಅನ್ನೋದು ವೀಕ್ಷಕರ ಅಭಿಪ್ರಾಯವಾಗಿದೆ.ಅಸಲಿಗೆ ಬೆಳಗ್ಗೆ ರಿಷಾ ಸ್ನಾನಕ್ಕೆ ಹೋಗಿದ್ದ ವೇಳೆ ಗಿಲ್ಲಿ ನಟ “ರಿಷಾ ಬಕೆಟ್ ಕೊಡೋದಿಲ್ಲವಾ?” ಎಂದು ಕೇಳಿದ್ರು. ಬಳಿಕ ಕೋಪಗೊಂಡ ಗಿಲ್ಲಿ ರಿಷಾ ಬಟ್ಟೆಗಳನ್ನು ಬಾತ್‌ರೂಮ್ ಏರಿಯಾಗೆ ಹಾಕಿದರು. ಇದರಿಂದ ಸಿಟ್ಟಿನಿಂದ ಉರಿದ ರಿಷಾ, “ಏನ್ ಮಾಡಿದ್ದೀಯಾ ಗಿಲ್ಲಿ?” ಎಂದು ಕಿರುಚಿ ಗಿಲ್ಲಿಗೆ ಹೊಡೆದು ತಳ್ಳಿದ್ರು. ಈ ಘಟನೆಯಿಂದ ಮನೆಯೊಳಗೆ ಗಲಾಟೆ ಉಂಟಾಯಿತು ಮತ್ತು ರೂಲ್ಸ್ ಉಲ್ಲಂಘನೆಯ ಪ್ರಶ್ನೆ ಮತ್ತೆ ತಲೆದೋರಿದೆ.
ಈ ಹಿಂದೆ ‘ಬಿಗ್ ಬಾಸ್’ನಲ್ಲಿ ರವಿ ಮುರೂರು ಮೇಲೆ ಹುಚ್ಚ ವೆಂಕಟ್(Huccha Venkat) ಕೈಮಾಡಿ ತಕ್ಷಣ ಎಲಿಮಿನೇಟ್ ಆಗಿದ್ದರು. ಸಮೀರ್ ಆಚಾರ್ಯ ಮೇಲೆ ಸಂಯುಕ್ತಾ ಹೆಗ್ಡೆ ಕೈಮಾಡಿ ಔಟ್ ಆಗಿದ್ದರು. ಹಾಗೆಯೇ ಕಳೆದ ಸೀಸನ್‌ನಲ್ಲಿ ಲಾಯರ್ ಜಗದೀಶ್(Lawyer Jagadish) ಅವರನ್ನು ತಳ್ಳಿದ್ದಕ್ಕೆ ರಂಜಿತ್ ಎಲಿಮಿನೇಟ್ ಆಗಿದ್ದರು. ಇದೇ ರೀತಿಯಾಗಿ ರಿಷಾ ಮೇಲೂ ಬಿಗ್ ಬಾಸ್ ಕಠಿಣ ಕ್ರಮ ಕೈಗೊಳ್ತಾರಾ ಎನ್ನುವುದೇ ಕುತೂಹಲ.
ʻಬಿಗ್ ಬಾಸ್ʼ ರೂಲ್ಸ್ ಪ್ರಕಾರ ಸ್ಪರ್ಧಿಗಳು ಯಾರ ಮೇಲೂ ಕೈಮಾಡಬಾರದು, ದೈಹಿಕ ಹಲ್ಲೆ ನಿಷೇಧ. ಈ ನಿಯಮ ಉಲ್ಲಂಘಿಸಿದರೆ ತಕ್ಷಣದ ಎಲಿಮಿನೇಶನ್ ಖಚಿತ. ಈಗ ರಿಷಾ ಗೌಡ ಮೇಲೆ ಬಿಗ್ ಬಾಸ್ ಏನು ನಿರ್ಧಾರ ತಗೊಳ್ಳುತ್ತಾರೆ? ಕಾದು ನೋಡಬೇಕಾಗಿದೆ.
ವರದಿ : ಗಾಯತ್ರಿ ಗುಬ್ಬಿ

