- Advertisement -
ಬಾಲಿವುಡ್ ನ ಕ್ಯೂಟ್ ಪೇರ್ ರಿತೇಶ್ ದೇಶ್ ಮುಖ್ ಹಾಗೂ ಜೆನಿಲಿಯಾ ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟು ಡಿನ್ನರ್ ಸವಿದಿದ್ದಾರೆ.
ಕಿಚ್ಚ, ರಿತೇಶ್ ಹಾಗೂ ಜೆನಿಲಿಯಾ ಬಹುಕಾಲದ ಗೆಳೆಯರು. ಬಾಲಿವುಡ್ ನ ರಣ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗೂ ರಿತೇಶ್ ಒಟ್ಟಿಗೆ ನಟಿಸಿದ್ದರು. ಅಲ್ಲಿನಿಂದ ಒಳ್ಳೆಯ ಗೆಳೆಯರಾಗಿರುವ ಸುದೀಪ್ ಹಾಗೂ ರಿತೇಶ್ ಕಿಚ್ಚನ ಮನೆಗೆ ವಿಸಿಟ್ ಕೊಟ್ಟು ಸಮಯ ಕಳೆದಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಜೆನಿಲಿಯಾ, ಕಿಚ್ಚನ ಗುಣಗಾನ ಮಾಡಿದ್ದು, ರುಚಿಯಾದ ಸಸ್ಯಾಹಾರ ಬಡಿಸಿದ ಕಿಚ್ಚನಿಗೆ ಈ ಜೋಡಿ ಧನ್ಯವಾದ ತಿಳಿಸಿದ್ದಾರೆ ಈ ಕ್ಯೂಟ್ ಕಪಲ್. ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಬಳಿಕ ಕಿಚ್ಚನ ಮನೆಯಿಂದ ಹೊರಟ ರಿತೇಶ್ ದಂಪತಿ ಡಿಕೆ ಶಿವಕುಮಾರ್ ಮಗಳು ಐಶ್ವರ್ಯ ಮದುವೆಯಲ್ಲಿ ಭಾಗಿಯಾಗಿದ್ರು.
- Advertisement -