Tuesday, December 24, 2024

Latest Posts

ರಸ್ತೆ ಹಾಳಾಗಿ ಹೋಗಿದೆ

- Advertisement -

ದಿನೇ ದಿನೇ ಏರಿಕೆ ಯಾಗುತ್ತಿರುವ ಜನಸಂಖ್ಯೆಯಿಂದಾಗಿ ಮಹಾನಗರಿ ಬೆಂಗಳೂರಿನಲ್ಲಿ ಪ್ರತಿದಿನವೂ ಜನರ ಅನೂಕೂಲಕ್ಕಾಗಿ ಹಲವಾರು ರೀತಿಯಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿರುತ್ತವೆ ಅದರಲ್ಲಿ ರಸ್ತೆ ಕಾಮಗಾರಿಯೂ ಒಂದು ಪ್ರತಿವರ್ಷ ಬಜೆಟ್ ಮಂಡನೆ ಮಾಡುವ ಸಮಯದಲ್ಲಿ ಬೆಂಗಳೂರಿನ ರಸ್ತೆ ಅಭಿವೃದ್ದಿಗಾಗಿ ಪೊ್ರತಿವರ್ಷಕೋಟಿಗಟ್ಟಲೆ ಹಣವನ್ನು ಮೀಸಲಿಡಲಾಗುತ್ತೆ .ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ, ಹಾಗೂ ಗುಂಡಿ ಮುಚ್ಚಲು ಅಂತ ಕೋಟಿಗಟ್ಟಲೆ ಹಣವನ್ನು ಕಾಮಗಾರಿಗೆ ವ್ಯಯಿಸುತ್ತದೆ ಸರ್ಕಾರ .ಟೆಂಡರ್ ಅನ್ನು ಸಹ ಕರೆಯುತ್ತಾರೆ ಯಾರು ಸರಿಯಾಗಿ ಒಳ್ಳೆಯ ಗುಣಮಟ್ಟದ ಕೆಲಸವನ್ನು ಮಾಡುತ್ತಾರೆ ಅವರಿಗೆ ಟೆಂಡರ್ ನೀಡಲಾಗುತ್ತದೆ. ಅದೇ ರೀತಿ ಟೆಂಡರ್ ಪ್ರಕ್ರಿಯೆ ಮುಗಿದು ಶರುವಾಗುತ್ತದೆ.
ಆದರೆ ಕಾಮಗಾರಿ ನಡೆಯುವಾಗಲೇ ಶುರುವಾಗುವುದು ಅಸಲಿ ಕೆಲಸ . ಅದೇನೆಂದರೆ
ಕಾಮಗಾರಿ ಶುರುವಾದಾಗ ಆವಾಗಾವಾಗ ಇಂಜೆನಿಯರ್ ಗಳು ಬಂದು ನೋಡಿ ಹೋಗುತ್ತಾರೆ. ಆಗ ಕೆಲಸದ ವಿಷಯವಾಗಿ ಕೆಲವು ಶರತ್ತುಗಳಿರುತ್ತವೆ ಅವುಗಳನ್ನು ಮೀರಿ ಅವರು ಕಳಪೆ ಮಟ್ಟದ ವಸ್ತುಗಳನ್ನು ಉಪಯೋಗಿಸಿ ರಸ್ತೆಯನ್ನು ತಯಾರು ಮಾಡಿರುತ್ತಾರೆ. ಇದನ್ನು ಕಂಡು ಕಾಣದ ಇಂಜಿನಿಯರ್ ಗಳು ಗುತ್ತಿಗೆದಾರರು ನೀಡುವ ಹಣವನ್ನು ಪಡೆದುಕೊಂಡು ಬಾಯಿಮುಚ್ಚಿಕೊಂಡು ಹೋಗುತ್ತಾರೆ . ಇದೇರೀತಿ ಹಲವರು ಅಧಿಕಾರಿಗಳು , ಕಾವಗಾರಿಗೆ ಸಂಬಂಧ ಪಟ್ಟ ವ್ಯಕ್ತಿಗಳು ಲಂಚವನ್ನು ತೆಗೆದುಕೊಂಡು ಕೆಲಸ ಹೇಗೆಇರಲಿ ಚೆನ್ನಾಗಿದೆ ಎಂದು ಸಹಿ ಹಾಕಿ ಹೋಗುತ್ತಾರೆ.
ಈ ರೀತಿ ಅಕ್ರಮಗಳು ಪ್ರತಿ ಕಾಮಗಾರಿಯಲ್ಲೂ ನಡೆಯುತ್ತದೆ.
ಇನ್ನುತೆರೆದುಕೊಂಡಿರುವ ರಸ್ತೆಗುಂಡಿಗಳನ್ನು ಮುಚ್ಚುವ ಸಲುವಾಗಿ ಕಾಮಗಾರಿ ನಡೆದರೆ ಅದರಲ್ಲೋ ಕಳಪೆ ಮಟ್ಟದ ಕೆಲಸ ಮಾಡಿ ಕೈತೊಳದುಕೊಳ್ಳುತ್ತಾರೆ. ಆದರೆ ರಸ್ತೆಯಲ್ಲಿ ಓಡಾಡುವ ಜನರು ರಸ್ತೆಗುಂಡಿ ಗಳಲ್ಲಿ ಬಿದ್ದು ಸಾಯುವುದು ಮಾತ್ರ ತಪ್ಪುತ್ತಿಲ್ಲ.
ದೇಶವನ್ನು ಅಭಿವೃದ್ದಿ ಮಾಡುತ್ತೇವೆ ಜನರಿಗೆ ಒಳ್ಳೆಯ ಸೌಲಭ್ಯ ಕಲ್ಪಿಸುತ್ತೇವೆ ಎಂದು ಪ್ರತಿವರ್ಷ ಕೋಟಿಗಟ್ಟಲೆ ಹಣವನ್ನು ತೆರಿಗೆ ರೂಪದಲ್ಲಿ ಪಡೆದು ಸೀದಾ ತನ್ನ ಜೇಬಿಗೆ ಇಳಿಸಿಕೊಳ್ಳುತ್ತೆ

“ರೂಪಾಯಿ” ಚಿತ್ರದಲ್ಲಿ ಬಂತು “ಖಾರಾಬಾತ್” ಹಾಡು..!

ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ .. ವಿಷ್ಣು ಫ್ಯಾನ್ಸ್ ಆಕ್ರೋಶ

ಜೀವನದಲ್ಲಿ ಅಪ್ಪಿ ತಪ್ಪಿಯೂ ಈ 5 ತಪ್ಪುಗಳನ್ನು ಮಾಡಬೇಡಿ..

 

- Advertisement -

Latest Posts

Don't Miss