Wednesday, September 11, 2024

Latest Posts

ಹೆಚ್ಡಿಕೆ ವಿರುದ್ಧ ರಾಕ್ ಲೈನ್ ಕೆಂಡಾಮಂಡಲ

- Advertisement -

www.karnatakatv.net ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್ಡಿಕೆ ಮಧ್ಯೆ ವಾರ್ ನಡೆಯುತ್ತಿರುವುದು ಗೊತ್ತಿರೋ ವಿಷಯ. ಈ ಬಗ್ಗೆ ಸುಮಲತಾ ಬೆಂಬಲಿಗರು ಹಾಗೂ ಹೆಚ್ಡಿಕೆ ಬೆಂಬಲಿಗರು ಒಬ್ಬರ ಮೇಲೊಬ್ಬರು ಕೆಸರೆರಚುತ್ತಿದ್ದಾರೆ. ಈಗ ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಷ್ ಸರದಿ.

ಅಂಬಿ ಕುಟುಂಬಕ್ಕೆ ನಾನೆಷ್ಟು ಆಪ್ತ ಅಂತ ನಿಮ್ಗೆ ಗೊತ್ತು. ಧ್ವನಿ ಹೆಚ್ಚು ಮಾಡುವುದು ಬೇಡ. ಸತ್ತ ವ್ಯಕ್ತಿಗಳ ಹೆಸರು ತಗೊಂಡು ಮಾತನಾಡುವುದು ಸರಿಯಲ್ಲ. ದೊಡ್ಡಣ್ಣ ಅವರನ್ನ ವಿಧಾನ ಸಭೆಯಲ್ಲಿ 2ಗಂಟೆ ಕೂರಿಸಿ ನೋಡೋಣ. ಸುಮಲತಾ ಫೋನ್ ಕದ್ದಾಲಿಕೆ ಮಾಡಲು ಏನು ಮಾಡಿದಿರಿ ಅಂತ ಗೊತ್ತಿದೆ. ಆಡಿಯೋ ಯಾಕೆ ಬಿಡುಗಡೆ ಮಾಡುತ್ತಿಲ್ಲ ಎಂಬುದೂ ಗೊತ್ತಿದೆ. ಯಾರನ್ನ ಕಳಿಸಿ ಏನು ಆಮಿಷ ತೋರಿಸಿದ್ದೀರಿ ತಿಳಿದಿದೆ. ಒಂದು ಕಡೆ ಭ್ರಷ್ಟಾಚಾರ ಎನ್ನುತ್ತೀರಿ ಇನ್ನೊಂದ್ಕಡೆ ಸ್ನೇಹಿತ ಎನ್ನುತ್ತೀರಿ. ಇದು ನಿಮಗೆ ಶೋಭೆ ತರುತ್ತಾ? ಎಂದು ಕಿಡಿ ಕಾರಿದ್ದಾರೆ.

- Advertisement -

Latest Posts

Don't Miss