ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ನಂತ್ರ, ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ರೋಹಿತ್ ಚಕ್ರತೀರ್ಥ ಸಮಿತಿಗೆ ವಹಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ದಿನಕ್ಕೊಂದು ಶಾಲಾ ಪಠ್ಯಪುಸ್ತಕಗಳಲ್ಲಿನ ಯಡವಟ್ಟು ಹೊರಬಂದ ಬಳಿಕ, ಈಗ ಪಿಯು ಪಠ್ಯಪುಸ್ತಕ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ಸಮಿತಿಗೆ ನೀಡಿದ್ದಂತ ಹೊಣೆಯನ್ನು ಶಿಕ್ಷಣ ಇಲಾಖೆ ವಾಪಾಸ್ ಪಡೆದಿದೆ.
ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗಾಗಿ ರಚಿಸಲಾಗಿದ್ದಂತ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ಈ ಸಮಿತಿಗೆ ಪಿಯು ಪಠ್ಯಪರಿಷ್ಕರಣೆ ನೀಡಲಾಗಿದ್ದಂತ ಹೊಣೆಯನ್ನು ವಾಪಾಸ್ ಪಡೆಯಲಾಗಿದೆ. ಸಮಿತಿ ವರದಿ ನೀಡಿದ್ರು, ಪರಿಷ್ಕರಣೆಯನ್ನು ಮಾಡಲ್ಲ ಎಂದರು.
ಈ ಹಿಂದಿನ ಪಠ್ಯಪುಸ್ತಕಗಳೇ ಈ ವರ್ಷವೂ ಮುಂದುವರೆಯಲಿದೆ. ದ್ವಿತೀಯ ಪಿಯು ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಇನ್ನೂ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯ ವೇಳೆಯಲ್ಲಿ ಅಂಬೇಡ್ಕರ್ ಪಠ್ಯದಲ್ಲಿನ ತಪ್ಪನ್ನು ಸರಿ ಪಡಿಸಲಾಗುತ್ತದೆ. ಬಸವಣ್ಣನವನ ಪಠ್ಯವನ್ನು ಮುಂದುವರೆಸಲಾಗುತ್ತದೆ ಎಂದರು.