astrology:
ಜೀವನದಲ್ಲಿ ಆಗಾಗ ರೊಮ್ಯಾನ್ಸ್ ಇರಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಆದರೆ, ಕೆಲವರು ಮನಸ್ತಾಪದಲ್ಲಿ ಜೀವನ ಕಳೆಯುತ್ತಿರುತ್ತಾರೆ. ಆದರೆ ನಾವು ಹೇಳುವ ಕೆಲವು ನಿಯಮಗಳನ್ನು ಅನುಸರಿಸಿದರೆ ನಿಮ್ಮ ಜೀವನದಲ್ಲಿ ರೊಮ್ಯಾನ್ಸ್ ಹೆಚ್ಚುತ್ತದೆ. ಹಾಗಾದರೆ ಇದಕ್ಕಾಗಿ ಯಾವ ನಿಯಮವನ್ನು ಅನುಸರಿಸಬೇಕು ಎಂದು ನೋಡೋಣ.
ಸಾಮಾನ್ಯವಾಗಿ ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂದು ಹೇಳುತ್ತಾರೆ, ಆದರೆ ಕೆಲವು ಸಂದರ್ಭಗಳಲ್ಲಿ, ಜಗಳ ನಿರಂತರವಾಗಿ ಹೆಚ್ಚುತ್ತಾ ಹೋಗುತ್ತದೆ. ಹೀಗಾದರೆ ರೊಮ್ಯಾಂಟಿಕ್, ಸಂಬಂಧ , ಪ್ರೀತಿಗೇ , ಬೆಲೆಯೇ ಇರುವುದಿಲ್ಲ ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಕೆಲವು ಸಲಹೆಗಳನ್ನು ನಾವು ನಿಮಗೆ ಹೇಳುತ್ತೇವೆ. ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೆ ಖಂಡಿತ ನಿಮ್ಮ ಜೀವನದಲ್ಲೂ ರೊಮ್ಯಾಂಟಿಕ್ ಇರುತ್ತದೆ ,ಹಾಗಾದರೆ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ .
ನಿಮ್ಮ ಗುಟ್ಟು ಮೊದಲು ಅಡುಗೆ ಮನೆ ಇಂದಲೇ ಶುರುವಾಗಲಿದೆ,ರಾತ್ರಿ ಅಡುಗೆಯಾದ ಬಳಿಕ ಸ್ಟವ್ ಆರಿಸುವುದಕ್ಕಿಂತ ಮುಂಚಿತವಾಗಿ ಹಾಲನ್ನು ಸ್ಟವ್ ಗೆ ಸಿಂಪಡಿಸಿ. ನಂತರ ಸ್ಟವ್ಅನ್ನು ಆಫ್ ಮಾಡಿ.ಇದರಿಂದ ನಿಮ್ಮ ದಾಂಪತ್ಯದಲ್ಲಿ ನೆಗೆಟಿವ್ ಎನರ್ಜಿ ದೂರವಾಗಿ ರೊಮ್ಯಾನ್ಸ್ ಜೀವನ ಶುರುವಾಗುತ್ತದೆ .
ರಾತ್ರಿ ಊಟ ಮಗಿದ ನಂತರ ಪಾತ್ರೆಗಳನ್ನು ಶುಭ್ರವಾಗಿ ತೊಳೆದು ಇಡಬೇಕು, ಹೀಗೆ ಮಾಡದಿದ್ದರೆ ರಾಹುವಿನ ಕೆಟ್ಟ ಪ್ರಭಾವ ನಿಮ್ಮ ಮೇಲೆ ಬೀಳುತ್ತದೆ. ದಾಂಪತ್ಯ ಜೀವನದಲ್ಲಿ ಜಗಳ, ವಿರಸಗಳು ಉಂಟಾಗುತ್ತದೆ ಇಬ್ಬರು ದೂರದೂರ ವಾಗುತ್ತಾರೆ. ಇಂತಹ ಮನೆಯಲ್ಲಿ ಲಕ್ಷ್ಮೀ ದೇವಿಯೂ ನೆಲಿಸುವುದಿಲ್ಲ. ಹೀಗಾಗಿ ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ತೊಳೆಯುವುದನ್ನು ರೂಢಿಸಿಕೊಳ್ಳಬೇಕು. ಆಗ ವಿರಸಗಳು ದೂರವಾಗುತ್ತದೆ.
ಮಲಗುವ ಮುನ್ನ ಈ ಕೆಲಸ ಮಾಡಿ :
ಹಾಸಿಗೆ ಕೆಳಗೆ ಗುಟ್ಟಾಗಿ ಗಾಜಿನ ಬಾಟಲಿಯಲ್ಲಿ ಜೇನುತುಪ್ಪವನ್ನು ಇಡಬೇಕು. ಹೀಗೆ ಇಟ್ಟರೆ ಜೀವನ ರೊಮ್ಯಾಂಟಿಕ್ ಆಗಿರುತ್ತದೆ.ಮತ್ತು ಹಾಲಿಗೆ ಜೇನುತುಪ್ಪ ಬೆರೆಸಿ, ಮಲಗುವ ಮುನ್ನ ಕುಡಿದರೆ ನಿಮ್ಮ ಜೀವನ ರೋಮ್ಯಾಂಟಿಕ್ ಹಾಗಿ ಇರುತ್ತದೆ .ನಂತರ ,ಮಹಿಳೆಯರು ಮಲಗುವ ಮುಂಚೆ ಮನೆಯ ಹಿರಿಯ ಸದಸ್ಯರ ಮುಖವನ್ನು ನೋಡಿ. ಅವರ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಆಶೀರ್ವಾದವಿದ್ದಂತೆ, ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಇನ್ನು ಪತಿ ಕಡೆಯಿಂದಲೂ ಪಾಸಿಟಿವ್ ರಿಯಾಕ್ಷನ್ ಸಿಗುತ್ತದೆ . ಹಾಗೂ ರಾತ್ರಿ ಮಲಗುವುದಕ್ಕಿಂತ ಮುಂಚಿತವಾಗಿ ಮನೆಯ ಪಶ್ಚಿಮ ಅಥವಾ ದಕ್ಷಿಣ ಮೂಲೆಯಲ್ಲಿ ದೀಪವನ್ನು ಬೆಳಗಬೇಕು ಇದು ಪಾಸಿಟಿವ್ ಅಂಶವನ್ನು ಹೆಚ್ಚಳ ಮಾಡುವುದಲ್ಲದೆ, ಪ್ರಣಯದ ಭಾವವನ್ನು ಮೂಡಿಸುತ್ತದೆ.
ಮಲಗುವ ಮುಂಚೆ ನೀವು ಮಲಗುವ ಕೋಣೆಯಲ್ಲಿ ಒಂದು ಕರ್ಪೂರ ಹಚ್ಚಬೇಕು. ಇದರಿಂದ ಬರುವ ಸುವಾಸನೆ ನಿಮಗೆ ಪಾಸಿಟಿವ್ ಎನರ್ಜಿ ಬರುತ್ತದೆ .ಇದು ಜಗಳವಾಡದೆ ಇರುವುದಕ್ಕೆ ಸಹಾಯ ಮಾಡುತ್ತದೆ. ಆ ದಿನ ಮಧುರ ಕ್ಷಣಗಳು ನಿಮ್ಮದಾಗುತ್ತದೆ.ಆ ಮೂಲಕ ರೊಮ್ಯಾಂಟಿಕ್ ರಾತ್ರಿಗಳನ್ನು ತಮ್ಮದಾಗಿಸಿಕೊಳ್ಳಬಹುದು. ಪತಿ-ಪತ್ನಿ ಸಂಬಂಧದಲ್ಲಿ ಸಮಸ್ಯೆಗಳು ಇದ್ದರೇ ಇದನ್ನು ಪ್ರತಿದಿನ ಅನುಸರಿಸಿ ಉತ್ತಮ. ಹೀಗೆ ಮಾಡುವುದರಿಂದ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.